ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಮ್ಮನ ಕೆರೆ ಜಾತ್ರಾ ಮಹೋತ್ಸವ ರದ್ದು: ಭಕ್ತರಲ್ಲಿ ನಿರಾಸೆ

Last Updated 20 ಆಗಸ್ಟ್ 2020, 13:47 IST
ಅಕ್ಷರ ಗಾತ್ರ

ಸೋಮವಾರಪೇಟೆ: ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮ ದೇವಾಲಯದಲ್ಲಿ ನೂರಾರು ವರ್ಷಗಳಿಂದ ಯಾವುದೇ ಅಡೆತಡೆಗಳಿಲ್ಲದೆ ನಡೆದುಕೊಂಡು ಬರುತ್ತಿದ್ದ ಜಾತ್ರಾ ಮಹೋತ್ಸವ ಈ ಬಾರಿ ಕೋವಿಡ್ 19ನಿಂದಾಗಿ ರದ್ದುಗೊಂಡಿದ್ದು ಭಕ್ತಾದಿಗಳಲ್ಲಿ ನಿರಾಸೆ ಮೂಡಿಸಿದೆ.

ಹತ್ತು ಹಲವು ಗ್ರಾಮಗಳಿಗೆ ನೀರುಣಿಸುತ್ತಿರುವ ಹೊನ್ನಮ್ಮನ ಕೆರೆ ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು ಇಲ್ಲಿ ವರ್ಷಕ್ಕೊಮ್ಮೆ, ಗೌರಿಹಬ್ಬದಂದು ಹೊನ್ನಮ್ಮನ ಕುಟುಂವಬಸ್ಥರು ಹಾಗೂ ದೇವಾಲಯ ಸಮಿತಿಯವರು ಕೆರೆಗೆ ಬಾಗಿನ ಅರ್ಪಿಸುವುದು ವಾಡಿಕೆ. ನವದಂಪತಿಗಳು ಬಂದು ಪೂಜೆ ಸಲ್ಲಿಸಿ ಬಾಗಿನ ಸಲ್ಲಿಸುತ್ತಾರೆ. ಜಾತ್ರಾ ಮಹೋತ್ಸವಕ್ಕೆ ಅಕ್ಕಪಕ್ಕದ ಗ್ರಾಮ ಮಾತ್ರವಲ್ಲದೆ ಹೊರಜಿಲ್ಲೆಗಳ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ.

ಕೋವಿಡ್ 19 ನಿಂದಾಗಿ ಜಾತ್ರಾಮಹೋತ್ಸವವನ್ನು ರದುಗೊಳಿಸಲಾಗಿದೆ. ಹಬ್ಬದ ದಿನದಂದು ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶ ಇರುವುದಿಲ್ಲ. ಕೇವಲ ಕುಟುಂಬಸ್ಥರು ಹಾಗೂ ದೇವಾಲಯ ಸಮಿತಿ ಸದಸ್ಯರು ಮಾತ್ರ ಕೆರೆಗೆ ಗೌರಿ ಹಬ್ಬದಂದು ಬೆಳಿಗ್ಗೆ 9-30ಕ್ಕೆ ಸಂಪ್ರದಾಯದಂತೆ ಬಾಗಿನ ಅರ್ಪಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ದೇವಾಲಯ ಸಮಿತಿ ಅಧ್ಯಕ್ಷ ಶ್ರೀ ಬಸವೇಶ್ವರ ಮತ್ತು ಸ್ವರ್ಣಗೌರಿ ಹೊನ್ನಮ್ಮತಾಯಿ ಸೇವಾ ಸಮಿತಿ ಅಧ್ಯಕ್ಷ ಡಿ.ವಿ.ಯೋಗೇಶ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT