ಸೋಮವಾರ, ಜನವರಿ 25, 2021
20 °C

ಶ್ರೀ ಸಾಮಾನ್ಯ ಕನ್ನಡಿಗ ವ್ಯಂಗ್ಯಚಿತ್ರ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡತನ, ಕನ್ನಡ ಅಸ್ಮಿತೆ ಒಳಗೊಂಡು ಹಾಗೂ ಆಧುನಿಕ ಜೀವನ ಶೈಲಿಗೂ ಒಗ್ಗಿಕೊಂಡಿರುವ ಒಬ್ಬ ಮಾದರಿ ‘ಶ್ರೀ ಸಾಮಾನ್ಯ ಕನ್ನಡಿಗ’ ಅಥವ ‘ಶ್ರೀ ಸಾಮಾನ್ಯ ಕನ್ನಡತಿ’ಯ ಬಿಂಬಿಸುವ ಮಾದರಿ ವ್ಯಂಗ್ಯಚಿತ್ರ (Mascot) ಸ್ಪರ್ಧೆಯನ್ನು ಕನಕಪುರ ರಸ್ತೆ ಕನ್ನಡ ಬಳಗದ ಸ್ಥಾಪಕಿ ಭಾರ್ಗವಿ ಹೇಮಂತ್ ಹಮ್ಮಿಕೊಂಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕನ್ನಡದ ಅಸ್ಮಿತೆ ಒಳಗೊಂಡ 'ಕನ್ನಡ ಸಾಮಾನ್ಯ'ನನ್ನು ಬಿಂಬಿಸುವ ಒಂದು ‘ಕಲ್ಪನಾ ಚಿತ್ರವನ್ನು’ ರಚಿಸಬೇಕು.

ಹಿರಿಯ ವ್ಯಂಗ್ಯಚಿತ್ರಕಾರ ಕೆ.ಆರ್.ಸ್ವಾಮಿ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಟೂನಿಸ್ಟ್ಸ್‌‌ ಅಸೋಸಿಯೇಷನ್‌, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದವರ ಸಹಭಾಗಿತ್ವದಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಡಿ. 31ರ ಒಳಗೆ ವ್ಯಂಗ್ಯಚಿತ್ರಗಳನ್ನು ಕಳುಹಿಸಬೇಕು. ವಿಜೇತರಿಗೆ ನಗದು ಬಹುಮಾನ ಇದೆ ಎಂದು ಭಾರ್ಗವಿ ಹೇಮಂತ್‌ ತಿಳಿಸಿದ್ದಾರೆ.

ವ್ಯಂಗ್ಯಚಿತ್ರ ಕಳುಹಿಸಬೇಕಾದ ಇ ಮೇಲ್‌ ವಿಳಾಸ:  bhargavi.kannadanaadu@gmail.com

ಮಾಹಿತಿಗೆ ಮೊಬೈಲ್‌: 99168 26740 ಸಂಪರ್ಕಿಸಬಹುದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.