ಬೆಂಗಳೂರು: ‘ಪತ್ರಕರ್ತರಿಗೆ ದೀಪಾವಳಿ ಹಬ್ಬದ ಉಡುಗೊರೆಯ ಜೊತೆ ಹಣ ನೀಡಿದ ಆರೋಪದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರೆ, ತನಿಖೆ ನಡೆಸಲಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಈ ವಿಚಾರ ದಲ್ಲಿ ಮೂಗು ತೂರಿಸುವ ಕೆಲಸವನ್ನು ನಾವು ಮಾಡುವುದಿಲ್ಲ’ ಎಂದರು.
‘ಈ ಆರೋಪದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರು, ಏನು ಆರೋಪ ಮಾಡಿದ್ದಾರೋ ಅವರಿಗೇ ಕೇಳಬೇಕು’ ಎಂದೂ ಹೇಳಿ ದರು.
ಮುಖ್ಯಮಂತ್ರಿತಪ್ಪು ಮಾಡಿರಲಾರರು: ‘ಸುದೀರ್ಘ ಅವಧಿಯಿಂದ ರಾಜಕಾರಣದಲ್ಲಿ ಇರುವ ಮುಖ್ಯಮಂತ್ರಿ, ಮಾಧ್ಯಮದವರಿಗೆ ಹಣದ ಉಡುಗೊರೆ ಕೊಡುವ ತಪ್ಪು ಮಾಡಿರಲಾರರು ಎಂಬುದು ನನ್ನ ಭಾವನೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪತ್ರಕರ್ತರಿಗೆ ಹಣ ನೀಡಿದ ಬಗ್ಗೆ ನನಗೆ ಅಲ್ಪ ಮಾಹಿತಿಯಷ್ಟೆ ಇದೆ. ಮುಖ್ಯಮಂತ್ರಿ ಹೆಸರಿನಲ್ಲಿ ಯಾರಾದರೂ ಅತಿರೇಕದ ವರ್ತನೆ ತೋರಿಸಿದ್ದರೆ, ಅದನ್ನು ಬಹಳ ಗಂಭೀರವಾಗಿ ಆಲೋಚಿಸಬೇಕಿದೆ.ಈ ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.