ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೆಡ್–ಕೆ: ರಾಜ್ಯದ ವೀರೇಶ್ ಮೊದಲಿಗ

Last Updated 26 ಸೆಪ್ಟೆಂಬರ್ 2021, 19:08 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್-ಕೆ ನಡೆಸಿದ ಪರೀಕ್ಷೆಯ ಫಲಿತಾಂಶ ಭಾನುವಾರ (ಸೆ. 26) ಪ್ರಕಟಗೊಂಡಿದ್ದು, ಬೆಂಗಳೂರಿನ ವೀರೇಶ್ ಬಿ. ಪಾಟೀಲ್ ಮೊದಲ ಸ್ಥಾನ ಪಡೆದಿದ್ದಾರೆ.

ಮೊದಲ 10 ಸ್ಥಾನಗಳ ಪೈಕಿ ಐವರು ಕರ್ನಾಟಕದ ವಿದ್ಯಾರ್ಥಿಗಳು. ಅಲ್ಲದೆ, ಮೊದಲ 100 ಸ್ಥಾನಗಳ
ಪೈಕಿ 44 ಸ್ಥಾನಗಳು ರಾಜ್ಯದ ವಿದ್ಯಾರ್ಥಿಗಳ ಪಾಲಾಗಿವೆ.

ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 4,660 ವಿದ್ಯಾರ್ಥಿಗಳು ಶೇ 90 ರಿಂದ ಶೇ 100 ರಷ್ಟು ಅಂಕ ಗಳಿಸಿದ್ದಾರೆ. 4,343 ವಿದ್ಯಾರ್ಥಿಗಳು ಶೇ 80 ರಿಂದ ಶೇ 90ರಷ್ಟು ಅಂಕ ಗಳಿಸಿದ್ದಾರೆ.

ದೇಶದಾದ್ಯಂತ 66,304 ವಿದ್ಯಾರ್ಥಿಗಳು ಕಾಮೆಡ್-ಕೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ, 44,111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ ಕರ್ನಾಟಕದ 16,632 ವಿದ್ಯಾರ್ಥಿಗಳು ಮತ್ತು ಹೊರ ರಾಜ್ಯಗಳಿಂದ 27,479 ವಿದ್ಯಾರ್ಥಿಗಳು ಇದ್ದರು.

‘ಕಳೆದ ವರ್ಷದಂತೆ ಈ ಬಾರಿ ಕೂಡಾ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಿ ಎಂಜಿನಿಯರಿಂಗ್ ಸೀಟು
ಗಳಿಗೆ ಪ್ರವೇಶ ನೀಡಲಾಗುವುದು. ವಿದ್ಯಾರ್ಥಿಗಳು ಎಲ್ಲ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ತಜ್ಞರ
ಸಮಿತಿ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಪ್ರಕ್ರಿಯೆ ಯನ್ನು ಪ್ರಕಟಿಸಲಾಗುವುದು’ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್. ಕುಮಾರ್ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಕಾಮೆಡ್-ಕೆ ಪರೀಕ್ಷೆಯನ್ನು ಕೋವಿಡ್ ಎರಡನೇ ಅಲೆ, ಲಾಕ್‌ಡೌನ್ ಕಾರಣಗಳಿಗೆ ಮೂರು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ ಸೆ. 14ರಂದು ಪರೀಕ್ಷೆ ನಡೆಸಲಾಗಿತ್ತು.

ದೇಶದಾದ್ಯಂತ 157 ನಗರಗಳಲ್ಲಿ 224 ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆದಿತ್ತು. 180 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮತ್ತು 30ಕ್ಕೂ ಅಧಿಕ ಖಾಸಗಿ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ಪ್ರವೇಶಕ್ಕೆ ಕಾಮೆಡ್-ಕೆ ಪರೀಕ್ಷಾ ಫಲಿತಾಂಶ ಪರಿಗಣಿಸುತ್ತವೆ.

ಮೊದಲ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳು

l ವೀರೇಶ್ ಬಿ. ಪಾಟೀಲ್- ಬೆಂಗಳೂರು

l ಆರ್. ಶಿವ ಸುಧಾನ್ – ಬೆಂಗಳೂರು

l ಗೌರವ್ ಕಟಾರಿಯಾ- ರಾಜಸ್ಥಾನ

l ಕಟಿಕೇಲ ಪುನೀತ್ ಕುಮಾರ್- ಆಂಧ್ರಪ್ರದೇಶ

l ರಿಶಿತ್ ಶ್ರೀವಾಸ್ತವ- ರಾಜಸ್ಥಾನ

l ಭಾವೇಶ್ ಗುರ್ನಾನಿ- ರಾಜಸ್ಥಾನ

l ಎ.ಶ್ರೀಕರ- ಬೆಂಗಳೂರು

l ಪಿ. ನಿಶ್ಚಿತ್- ಮೈಸೂರು

l ದೀಪಕ್ ಚೌಧರಿ- ಉತ್ತರ ಪ್ರದೇಶ

l ಎಂ. ಶ್ರೀಹರ್ಷ ಭಟ್- ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT