ಗುರುವಾರ , ಮೇ 6, 2021
23 °C

ಅನುಕಂಪದ ನೌಕರಿ ನಿಯಮ ತಿದ್ದುಪಡಿಗೆ ಅಧಿಸೂಚನೆ: ಏನಿದೆ ಹೊಸ ನಿಯಮದಲ್ಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಹುದ್ದೆಯಲ್ಲಿದ್ದವರು ಮೃತಪಟ್ಟರೆ, ಅನುಕಂಪದ ಆಧಾರದಲ್ಲಿ ಅವಲಂಬಿತರಿಗೆ ಸರ್ಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಕುರಿತಂತೆ ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ತಿದ್ದುಪಡಿ ನಿಯಮದ ಪ್ರಕಾರ, ಸರ್ಕಾರಿ ನೌಕರ ಮೃತಪಟ್ಟರೆ ಆತನ ಜೊತೆ ವಾಸವಿದ್ದ ವಿಧವಾ ಪತ್ನಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ಅರ್ಹರಾಗುತ್ತಾರೆ. ನೇಮಕಾತಿಗೆ ಆಕೆಗೆ ಅರ್ಹತೆ ಇಲ್ಲದಿದ್ದರೆ ಅಥವಾ ನೇಮಕಾತಿ ಬಯಸದೇ ಇದ್ದರೆ ಆಕೆ ಆಯ್ಕೆ ಮಾಡಿದ ಮಗ ಅಥವಾ ಮಗಳು ಹುದ್ದೆ ಪಡೆಯಲು ಅರ್ಹರಾಗುತ್ತಾರೆ.

ವಿವಾಹಿತ ಮಹಿಳಾ ನೌಕರರು ಮೃತಪಟ್ಟರೆ ಆಕೆಯ ವಿಧುರ ಪತಿಯು ಆಯ್ಕೆ ಮಾಡಿದ ಮಗ ಅಥವಾ ಮಗಳು ಅಥವಾ ಮೃತಳ ಅವಲಂಬಿತ ಮಗ, ಮಗಳು ಅರ್ಹರಿಲ್ಲದಿದ್ದರೆ ಅಥವಾ ನೇಮಕಾತಿ ಬಯಸದೇ ಇದ್ದರೆ, ವಿಧುರ ಪತಿಯನ್ನು ಹುದ್ದೆಗೆ ಪರಿಗಣಿಸಬಹುದು. ಪತಿ ಮೊದಲೇ ಮೃತಪಟ್ಟಿದ್ದರೆ, ಮಕ್ಕಳ ವಯಸ್ಸಿಗೆ ಅನುಗುಣವಾಗಿ ಹುದ್ದೆ ನೀಡಬೇಕು ಎಂದೂ ನಿಯಮ ತಿದ್ದುಪಡಿ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು