ಗುರುವಾರ , ಜೂನ್ 30, 2022
27 °C

ದಲಿತರ ಮೇಲಿನ ದೌರ್ಜನ್ಯವನ್ನು ಕಾಂಗ್ರೆಸ್‌ ಪಕ್ಷ ಒಪ್ಪುತ್ತದೆಯೇ: ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ನಡೆದ ವಿಜಯಕುಮಾರ್ ಕಾಂಬಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. 

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ, ಕ್ರೌರ್ಯ, ಕೊಲೆ ಅತ್ಯಾಚಾರಗಳ ಬಗ್ಗೆ ಕಾಂಗ್ರೆಸ್‌ ಪಕ್ಷ ಏಕೆ ಮೌನವಾಗಿರುತ್ತದೆ’ ಎಂದು ಪ್ರಶ್ನಿಸಿದೆ.

‘ದಲಿತರ ಮೇಲಿನ ದೌರ್ಜನ್ಯಗಳನ್ನು ಬಿಜೆಪಿ ತಲೆಗೆ ಕಟ್ಟುವ ಕಾಂಗ್ರೆಸ್‌ ಕಲಬುರಗಿ ದಲಿತನ ಹತ್ಯೆಯನ್ನು ಸಮರ್ಥಿಸುತ್ತಿರುವುದೇಕೆ? ಆರೋಪಿಗಳ ಸಮುದಾಯದ ಮತ ತಪ್ಪುತ್ತದೆ ಎಂಬ ಭಯವೇ? ದಲಿತರ ಮೇಲೆ ಮತಾಂಧರು ಮಾಡುವ ದೌರ್ಜನ್ಯ ಕಾಂಗ್ರೆಸ್‌ ಪಕ್ಷಕ್ಕೆ ಒಪ್ಪಿತವೇ?’ ಎಂದು ಬಿಜೆಪಿ ಕೇಳಿದೆ.

ಇದನ್ನೂ ಓದಿ– ಕಲಬುರಗಿ: ದಲಿತ ಯುವಕನ ಕೊಲೆ, ಇಬ್ಬರ ಬಂಧನ

‘ಅಂದು, ಕಾಂಗ್ರೆಸ್ ಶಾಸಕ, ದಲಿತ ನಾಯಕ ಅಖಂಡ  ಶ್ರೀನಿವಾಸಮೂರ್ತಿ ಮನೆಯನ್ನು ಮತಾಂಧರು ಸುಟ್ಟಾಗ ಕಾಂಗ್ರೆಸ್ ನಾಯಕರಿಗೆ ದಲಿತ ನಾಯಕನ ಕೂಗು ಕೇಳಿಸಲೇ ಇಲ್ಲ. ಇಂದು, ಕಲಬುರಗಿಯ ದಲಿತ ಯುವಕನನ್ನು ಧರ್ಮಾಂಧರು ಹತ್ಯೆ ಮಾಡಿದಾಗ ಕಾಂಗ್ರೆಸ್ಸಿಗರು ಇದಕ್ಕೆ ಮತೀಯ ಬಣ್ಣ ಬಳಿಯಬೇಡಿ ಎಂದು ಪ್ರವಚನ ನೀಡುತ್ತಿದ್ದಾರೆ’ ಎಂದು ಟ್ವೀಟಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು