ಮತದಾರರ ಜಾಗೃತಿ ಹೆಸರಲ್ಲಿ ಬಿಜೆಪಿಯಿಂದ ಡಾಟಾ ಕಳ್ಳತನ: ಕಾಂಗ್ರೆಸ್

ಬೆಂಗಳೂರು: ಮತದಾರರ ಜಾಗೃತಿ ಹೆಸರಲ್ಲಿ ಮತದಾರರ ಡಾಟಾ ಕಳ್ಳತನಕ್ಕೆ ಇಳಿದಿರುವ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮತದಾರರ ಡಾಟಾ ಸೋರಿಕೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮತದಾರರ ಜಾಗೃತಿ ಕಾರ್ಯಕ್ರಮವನ್ನು ಉಚಿತವಾಗಿ ಮಾಡುತ್ತೇವೆ ಎನ್ನುತ್ತದೆ ಚಿಲುಮೆ ಸಂಸ್ಥೆ. ಆ ಕಾರ್ಯಕ್ರಮಕ್ಕೆ ದಿನಕ್ಕೆ ₹1,500 ವೇತನ ನೀಡಿ ಬಿಜೆಪಿ ಕಾರ್ಯಕರ್ತರನ್ನೇ ಬೂತ್ ಲೆವೆಲ್ ಆಫೀಸರ್‌ಗಳೆಂದು ನೇಮಿಸುತ್ತದೆ. ಸಿಎಂ ಬೊಮ್ಮಾಯಿ ಅವರೇ, ಉಚಿತ ಕೆಲಸ ಮಾಡುವವರು ದುಬಾರಿ ವೇತನ ನೀಡುತ್ತಾರೆಂದರೆ ಅವರ ‘ಲಾಭಾಂಶ’ ಯಾವುದು’ ಎಂದು ಪ್ರಶ್ನಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಅನುಮತಿ ಪತ್ರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಇರಬಾರದು ಎಂದಿದೆ. ಆದರೆ ಸಂಸ್ಥೆಯ ಮುಖ್ಯಸ್ಥ ಬಿಜೆಪಿಯ ಸಚಿವರ ಆಪ್ತನಾಗಿರುವುದನ್ನು ಬಿಜೆಪಿ ಸರ್ಕಾರ ಮುಚ್ಚಿಟ್ಟಿದೆ ಎಂದು ಕಾಂಗ್ರೆಸ್ ದೂರಿದೆ.
ಭ್ರಷ್ಟಾಚಾರ ಹಾಗೂ ವೈಫಲ್ಯಗಳ ಸರಮಾಲೆ ಹೊದ್ದಿರುವ ಬಿಜೆಪಿ ಸರ್ಕಾರ ಈಗ ಅಕ್ರಮದ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ. ಬೆಂಗಳೂರು ಉಸ್ತುವಾರಿ ಹೊಂದಿರುವ ಸಿಎಂ ಬೊಮ್ಮಾಯಿ ಅವರೇ, ನಿಮ್ಮ ಒಪ್ಪಿಗೆ ಇಲ್ಲದೆ ಮತದಾರರ ಮಾಹಿತಿ ಕಳ್ಳತನಕ್ಕೆ ಅವಕಾಶ ನೀಡಲು ಅಸಾಧ್ಯ. ಈ ಹಗರಣದಲ್ಲಿ ನೇರವಾಗಿ ಸಿಎಂ ಕೈವಾಡವಿರುವುದು ಸ್ಪಷ್ಟ’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಚಿಲುಮೆ ಸಂಸ್ಥೆಯ ಕೃಷ್ಣಪ್ಪ ರವಿಕುಮಾರ್‌ಗೂ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಅವರಿಗೂ ಅವಿನಾಭಾವ ಸಂಬಂಧವಿದೆ. ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ತಮ್ಮ ಹಿತೈಷಿಯ ಹಿತ ಬಯಸಿದ್ದಾರೆ. ಮತದಾರರ ಮಾಹಿತಿ ಕಳ್ಳತನಕ್ಕೆ ಬಿಜೆಪಿ ಪಕ್ಷವೇ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡಿರುವುದಕ್ಕೆ ಇನ್ಯಾವ ಸಾಕ್ಷಿ ಬೇಕು’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬೊಮ್ಮಾಯಿ ರಾಜೀನಾಮೆಗೆ ಆಗ್ರಹ: ‘ಖಾಸಗಿ ಸಂಸ್ಥೆಯೊಂದು (ಎನ್‌ಜಿಒ) ಮತದಾರರ ಅಂಕಿಅಂಶಗಳನ್ನು (ಡಾಟಾ) ಅಕ್ರಮವಾಗಿ ಸಂಗ್ರಹಿಸುತ್ತಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಕಾರಣ. ಅವರ ಮೇಲೆ ಎಫ್‌ಐಆರ್ ದಾಖಲಿಸಿ, ಬಂಧಿಸಬೇಕು. ಚುನಾವಣಾ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸುವ ಈ ಅಪರಾಧದ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದರು.
ಮತದಾರರ ಜಾಗೃತಿ ಹೆಸರಲ್ಲಿ ಮತದಾರರ ಡಾಟಾ ಕಳ್ಳತನಕ್ಕೆ ಇಳಿದ @BJP4Karnataka ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡಲು ಮುಂದಾಗಿದೆ.
ಅನುಮತಿ ಪತ್ರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಇರಬಾರದು ಎಂದಿದೆ.
ಆದರೆ ಸಂಸ್ಥೆಯ ಮುಖ್ಯಸ್ಥ ಬಿಜೆಪಿಯ ಸಚಿವರ ಆಪ್ತನಾಗಿರುವುದು ಮುಚ್ಚಿಟ್ಟಿದೆ ಸರ್ಕಾರ.#FraudBJP pic.twitter.com/ZtzBtDKpD0— Karnataka Congress (@INCKarnataka) November 17, 2022
'ಮತದಾರರ ಜಾಗೃತಿ ಕಾರ್ಯಕ್ರಮ'ವನ್ನು ಉಚಿತವಾಗಿ ಮಾಡುತ್ತೇವೆ ಎನ್ನುತ್ತದೆ ಚಿಲುಮೆ ಸಂಸ್ಥೆ.
ಆ ಕಾರ್ಯಕ್ರಮಕ್ಕೆ ದಿನಕ್ಕೆ ₹1,500 ವೇತನ ನೀಡಿ ಬಿಜೆಪಿ ಕಾರ್ಯಕರ್ತರನ್ನೇ ಬೂತ್ ಲೆವೆಲ್ ಆಫೀಸರ್‌ಗಳೆಂದು ನೇಮಿಸುತ್ತದೆ.
ಉಚಿತ ಕೆಲಸ ಮಾಡುವವರು ದುಬಾರಿ ವೇತನ ನೀಡುತ್ತಾರೆಂದರೆ ಅವರ "ಲಾಭಾಂಶ" ಯಾವುದು @BSBommai ಅವರೇ?#FraudBJP
— Karnataka Congress (@INCKarnataka) November 17, 2022
ಭ್ರಷ್ಟಾಚಾರ ಹಾಗೂ ವೈಫಲ್ಯಗಳ ಸರಮಾಲೆ ಹೊದ್ದಿರುವ @BJP4Karnataka ಸರ್ಕಾರ ಈಗ ಅಕ್ರಮದ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ.
ಬೆಂಗಳೂರು ಉಸ್ತುವಾರಿ ಹೊಂದಿರುವ @BSBommai ಅವರೇ, ನಿಮ್ಮ ಇಷಾರೆ ಇಲ್ಲದೆ ಮತದಾರರ ಮಾಹಿತಿ ಕಳ್ಳತನಕ್ಕೆ ಅವಕಾಶ ನೀಡಲು ಅಸಾಧ್ಯ.
ಈ ಹಗರಣದಲ್ಲಿ ನೇರವಾಗಿ ಸಿಎಂ ಕೈವಾಡವಿರುವುದು ಸ್ಪಷ್ಟ.#FraudBJP
— Karnataka Congress (@INCKarnataka) November 17, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.