ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಲಸಿಕೆ ನೀಡುವ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದ ಕೇಂದ್ರ: ಕಾಂಗ್ರೆಸ್ ಟೀಕೆ

Last Updated 22 ಅಕ್ಟೋಬರ್ 2021, 10:16 IST
ಅಕ್ಷರ ಗಾತ್ರ

ಬೆಂಗಳೂರು: ಆರಂಭದಲ್ಲಿ ಉಚಿತವಾಗಿ ಕೋವಿಡ್–19 ಲಸಿಕೆ ನೀಡುವ ಹೊಣೆಗಾರಿಕೆಯಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನುಣುಚಿಕೊಂಡಿತ್ತು. ಆದರೆ ಈಗ ಬಿಜೆಪಿ ಹುಸಿ ಸಂಭ್ರಮಪಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಲಸಿಕೆ ವಿತರಣೆಯ ಪ್ರಗತಿಗೆ ವಿಶ್ವವೇ ಬೆರಗಾಗಿದ್ದರೂ ಕಾಂಗ್ರೆಸ್‌ ಕೊಂಕು ನುಡಿಯುತ್ತಿದೆ ಎಂದು ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತೆ ಟ್ವೀಟ್ ಮಾಡಿದೆ.

‘ಉಚಿತ ಲಸಿಕೆ ನೀಡುವ ಹೊಣೆಗಾರಿಕೆಯಿಂದ ಕೇಂದ್ರ ಸರ್ಕಾರ ಜಾರಿಕೊಂಡಿತ್ತು, ಇದಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಕೋವಿಡ್‌ನಿಂದ ಮೃತರಾದವರಿಗೆ ಪರಿಹಾರ ನೀಡಲೂ ನಿರಾಕರಿಸಿದ್ದರು, ಆಗಲೂ ಕೋರ್ಟ್ ಚಾಟಿ ಬೀಸಿತ್ತು. ಆಮ್ಲಜನಕ ನೀಡಲು ವಿಫಲರಾಗಿದ್ದರು, ಇದಕ್ಕೂ ಕೋರ್ಟ್ ಚಾಟಿ ಬೀಸಿತ್ತು. ಆದರೆ ಈಗ ಹುಸಿ ಸಂಭ್ರಮಪಡುತ್ತಿರುವುದು ಮಾತ್ರ ಬಿಜೆಪಿ!’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT