ಮಂಗಳವಾರ, ಮಾರ್ಚ್ 9, 2021
31 °C

ಐಆರ್‌ಬಿ ಆಡಳಿತ ಭವನ ಉದ್ಘಾಟನೆಗೆ ಕ್ಷಣಗಣನೆ        

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಸಂಜೆ ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿರುವ ವರ್ಚ್ಯುವೆಲ್ ವೇದಿಕೆ ಮೂಲಕ, ವಿಜಯಪುರ ಸಮೀಪದ ಅರಕೇರಿಯಲ್ಲಿ ನಿರ್ಮಿಸಲಾಗಿರುವ ಇಂಡಿಯನ್ ರಿಸರ್ವ್ ಬಟಾಲಿಯನ್ನ (ಐಆರ್‌ಬಿ) ಆಡಳಿತ ಭವನದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ಐಆರ್‌ಬಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. 2010ರಲ್ಲಿ ಆರಂಭವಾದ ರಾಜ್ಯದ ಎರಡನೇ ಐಆರ್ ಬಿ ಸೆಂಟರ್‌ ಇದಾಗಿದ್ದು, 100 ಎಕರೆ ವಿಸ್ತೀರ್ಣ ಹೊಂದಿದೆ. ಸದ್ಯ 746 ಸಿಬ್ಬದಿ ಇದ್ದಾರೆ. ಸಿಬ್ಬಂದಿಗೆ 455 ಕ್ವಾಟ್ರಸ್ ಇವೆ. ₹ 9.62 ಕೋಟಿ ಅನುದಾನದಲ್ಲಿ ನೂತನ ಆಡಳಿತ ಭವನ ನಿರ್ಮಾಣವಾಗಿದೆ. ಸಭಾಂಗಣ, ಕಮಾಡೆಂಟ್ ಕಚೇರಿ ಒಳಗೊಂಡಿದೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು