ನಾಗಮಂಗಲ: ತಾಲ್ಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಂಜುಂಡೇಗೌಡ ಮತ್ತು ಮಮತಾ ದಂಪತಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, ಅವರ ಹೆಣ್ಣು ಶಿಶು ಹುಟ್ಟಿದ ನಾಲ್ಕು ದಿನಕ್ಕೇ ಅನಾಥವಾಗಿದೆ.

ದಂಪತಿ, ಕೆಲ ವರ್ಷಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನೆಲೆಸಿದ್ದರು. ನಂಜುಂಡೇಗೌಡ ಅವರಿಗೆ ಏಪ್ರಿಲ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನಲ್ಲಿ ಏ.30ರಂದು ಮೃತಪಟ್ಟಿದ್ದರು.

ಗರ್ಭಿಣಿಯಾಗಿದ್ದ ಮಮತಾ ಅವರಿಗೂ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಐಸೊಲೇಷನ್‌ಗೆ ಒಳಗಾಗಿದ್ದರು. ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ಜಿಲ್ಲೆಯ ಮಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಮೇ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಮತಾ, ಮೇ 14 ರಂದು ಅಸುನೀಗಿದ್ದಾರೆ.

ದಂಪತಿಗೆ, 9 ವರ್ಷಗಳ ನಂತರ ಮಗು ಹುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.