ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಿಂದ 2 ಲಕ್ಷ ರೆಮ್‌ಡಿಸಿವಿರ್‌ ವೈಲ್‌ ಆಮದು: ಆರೋಗ್ಯ ಸಚಿವ ಸುಧಾಕರ್‌

Last Updated 23 ಏಪ್ರಿಲ್ 2021, 14:06 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದೇಶದಿಂದ ಒಂದೇ ಬಾರಿಗೆ 2 ಲಕ್ಷ ರೆಮ್‌ಡಿಸಿವಿರ್‌ ವೈಲ್‌ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಪ್ರಧಾನಿ ಜೊತೆ ಮಾತನಾಡಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶುಕ್ರವಾರ ತಿಳಿಸಿದರು.

‘ರೆಮ್‌ಡಿಸಿವಿರ್‌ ವೈಲ್‌ಗಳು ನಿರಂತರವಾಗಿ ಪೂರೈಕೆಯಾಗುತ್ತಿವೆ. ಹೆಚ್ಚುವರಿಯಾಗಿ 25 ಸಾವಿರ ವೈಲ್‌ ಪಡೆಯಲು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವಕಾಶ ಮಾಡಿಕೊಟ್ಟಿದ್ದಾರೆ. ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ಜೊತೆಗೂ ಚರ್ಚಿಸಿದ್ದು ಅವರು ಈ ತಿಂಗಳಲ್ಲೇ 60 ಸಾವಿರ ವೈಲ್‌ ಒದಗಿಸುವ ಭರವಸೆ ನೀಡಿದ್ದಾರೆ’ ಎಂದರು.

‘ಬೆಂಗಳೂರಿನಲ್ಲಿ ವೆಂಟಿಲೇಟರ್‌ ಲಭ್ಯತೆಯನ್ನು 10 ಪಟ್ಟು ಹೆಚ್ಚಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 15 ದಿನಗಳೊಳಗೆ 2 ಸಾವಿರ ಹಾಸಿಗೆಯ ಐಸಿಯುವನ್ನೊಳಗೊಂಡ ‘ಮೇಕ್‌ ಶಿಫ್ಟ್‌’ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದೇವೆ. ಈ ಪೈಕಿ 800 ಹಾಸಿಗೆಗಳಿಗೆ ವೆಂಟಿಲೇಟರ್‌ ಅಳವಡಿಸಲಾಗುತ್ತದೆ’ ಎಂದು ತಿಳಿಸಿದರು.

‘ವಿಕ್ಟೋರಿಯಾ ಆಸ್ಪತ್ರೆಯ ಆವರಣ ಹಾಗೂ ಇನ್ನೊಂದು ಹೊಸ ಕಟ್ಟಡದಲ್ಲಿ ಕ್ರಮವಾಗಿ 250 ಹಾಗೂ 200 ಹಾಸಿಗೆ ಸಾಮರ್ಥ್ಯದ ಐಸಿಯು ತಲೆ ಎತ್ತಲಿದೆ. 250 ಹಾಸಿಗೆಗಳ ಪೈಕಿ 100ಕ್ಕೆ ವೆಂಟಿಲೇಟರ್‌ ಅಳವಡಿಸಲಾಗುತ್ತದೆ. ಬೌರಿಂಗ್‌, ನಿಮ್ಹಾನ್ಸ್‌, ರಾಜೀವ್‌ ಗಾಂಧಿ ಹಾಗೂ ಇತರೆಡೆ ‘ಮೇಕ್‌ ಶಿಫ್ಟ್‌’ ಆಸ್ಪತ್ರೆ ನಿರ್ಮಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT