ಸೋಮವಾರ, ಮಾರ್ಚ್ 27, 2023
28 °C

ಜನರ ಜೀವ, ಜೀವನದ ಕನಿಷ್ಟ ಕಾಳಜಿಯೂ ಬಿಜೆಪಿ ಸರ್ಕಾರಕ್ಕಿಲ್ಲ: ಕಾಂಗ್ರೆಸ್‌ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದ ದೇಶದ ಜನರನ್ನು ರಕ್ಷಿಸಲಾಗದ ಸರ್ಕಾರದ ವೈಫಲ್ಯ ಲಕ್ಷಾಂತರ ಜನರ ದಾರುಣ ಸಾವಿಗೆ ಕಾರಣವಾಯಿತು ಎಂದು ಕರ್ನಾಟಕ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಹೆಚ್ಚುತ್ತಿರುವ ಆತ್ಮಹತ್ಯೆಗಳ ಕುರಿತ ಪ್ರಜಾವಾಣಿ ವರದಿಯನ್ನು ಆಧರಿಸಿ ಟ್ವೀಟ್‌ ಮಾಡಿರುವ ಕೆಪಿಸಿಸಿ, 'ಅವೈಜ್ಞಾನಿಕ ಲಾಕ್‌ಡೌನ್, ಸಿಗದ ನಷ್ಟ ಪರಿಹಾರ, ಉದ್ಯೋಗ ನಷ್ಟ, ಬೆಲೆಏರಿಕೆ, ಆರ್ಥಿಕ ಸಂಕಷ್ಟದಿಂದ ಆಘಾತ, ಖಿನ್ನತೆಗೊಳಗಾದ ಜನ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಜನರ ಜೀವ, ಜೀವನದ ಕನಿಷ್ಟ ಕಾಳಜಿಯೂ ಈ ಬಿಜೆಪಿ ಸರ್ಕಾರಗಳಿಗಿಲ್ಲ' ಎಂದು ಟೀಕಿಸಿದೆ.

 

'ಲಾಕ್‌ಡೌನ್ ನಂತರದ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆ, ಜನರ ಬದುಕು ಮೂರಾಬಟ್ಟೆಯಾಗಿದ್ದು ಕಣ್ಣ ಮುಂದಿದೆ. ಹೀಗಿದ್ದೂ ಬಿಜೆಪಿಗರು ಬೆಲೆ ಏರಿಕೆಯಿಂದ ಜನತೆಗೆ ಸಮಸ್ಯೆ ಇಲ್ಲ ಎಂದು ಉಡಾಫೆ ಮಾತನಾಡುತ್ತಿರುವುದು ನಾಚಿಕೆಗೇಡು. ಬಡ ಬೀದಿ ವ್ಯಾಪಾರಿಗಳ, ಬಡ ಗ್ರಾಹಕರು ಮದ್ಯಮವರ್ಗದವರ ಈ ಬವಣೆಯೇ ದೇಶದ ಆರ್ಥಿಕ ದುರ್ಗತಿಗೆ ಹಿಡಿದ ಕನ್ನಡಿ' ಎಂದೂ ಕೆಪಿಸಿಸಿ ಟ್ವೀಟ್‌ ಮಾಡಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು