ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಫ್ಯೂ: ಕೆಲವು ಬಂದ್‌– ಹಲವು ನಿರ್ಬಂಧ

Last Updated 21 ಏಪ್ರಿಲ್ 2021, 18:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ 14 ದಿನಗಳ ಕಾಲ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಬಂದ್‌ ಘೋಷಿಸಿದ್ದು, ಈ ಸಂದರ್ಭದಲ್ಲಿ ಹಲವು ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ರಾತ್ರಿ ಕರ್ಫ್ಯೂ 9 ಗಂಟೆಯಿಂದ ಮಾರನೇ ದಿನ ಬೆಳಿಗ್ಗೆ 6 ಗಂಟೆಯವರೆಗೆ ಇರುತ್ತದೆ. ಈ ಸಂದರ್ಭದಲ್ಲಿ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆಸ್ಪತ್ರೆಗೆ ಹೋಗುವವರು, ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶವಿರುತ್ತದೆ. 14 ದಿನಗಳ ಕಾಲ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ.

ಏನೆಲ್ಲ ಇರುವುದಿಲ್ಲ

lಶಾಲೆಗಳು, ಕಾಲೇಜುಗಳು, ಕೋಚಿಂಗ್ ಕೇಂದ್ರಗಳು. (ಆನ್‌ಲೈನ್‌, ದೂರಶಿಕ್ಷಣ ಮುಂದುವರೆಸಬಹುದು)

lಸಿನಿಮಾ ಹಾಲ್‌ಗಳು, ಶಾಪಿಂಗ್‌ ಮಾಲ್‌, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಕಾಂಪ್ಲೆಕ್ಸ್‌ಗಳು, ಸ್ಟೇಡಿಯಂ, ಈಜುಕೊಳ, ಮನರಂಜನಾ ಅಮ್ಯೂಸ್‌ಮೆಂಟ್‌ ಪಾರ್ಕ್‌, ಬಾರ್‌, ಕ್ಲಬ್, ಆಡಿಟೋರಿಯಂಗಳು ಮತ್ತಿತರ ಸಮಾವೇಶದ ತಾಣಗಳು

lಎಲ್ಲ ರೀತಿಯ ಸಮಾವೇಶಗಳು, ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶ ಇಲ್ಲ. ಆದರೆ, ಪೂಜಾ ಕೈಂಕರ್ಯ ನಡೆಸಲು ಅರ್ಚಕರಿಗೆ ಅವಕಾಶ ಇದೆ. ಆಯಾ ಧರ್ಮಗಳ ಧಾರ್ಮಿಕ ವಿಧಿ–ವಿಧಾನ ನಡೆಸಲು ಅವಕಾಶ ಇದೆ

ಯಾವುದಕ್ಕೆಲ್ಲಾ ಅವಕಾಶ ಇದೆ

lನೆರೆಹೊರೆಯ ಕಿರಾಣಿ ಅಂಗಡಿ, ನ್ಯಾಯ ಬೆಲೆ ಅಂಗಡಿ, ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಡೇರಿ, ಹಾಲು ಮತ್ತು ಇತರ ಉತ್ಪನ್ನಗಳು, ಮೀನು– ಮಾಂಸ, ಪ್ರಾಣಿಗಳ ಆಹಾರಗಳ (ಫೀಡ್ಸ್) ಮಾರಾಟಕ್ಕೆ ಅವಕಾಶ

lಅಂತರ ರಾಜ್ಯಗಳಿಗೆ ಬಸ್‌ ಮತ್ತು ರೈಲುಗಳ ಸೇವೆಗೆ ಅವಕಾಶ ಇದೆ. ಸಾರಿಗೆ ಸಂಸ್ಥೆ ಬಸ್ಸುಗಳು, ಖಾಸಗಿ ಬಸ್ಸುಗಳು, ಟ್ಯಾಕ್ಸಿ, ಆಟೋರಿಕ್ಷಾಗಳ ಓಡಾಟಕ್ಕೆ ಅವಕಾಶ ಇದೆ. ಆಸನಗಳ ಒಟ್ಟು ಸಾಮರ್ಥ್ಯದ ಶೇ 50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದೊಯ್ಯಬೇಕು

lಲಾಡ್ಜ್‌ ಮತ್ತು ಹೋಟೆಲ್‌ಗಳಲ್ಲಿ ಉಳಿದುಕೊಂಡ ಅತಿಥಿಗಳಿಗೆ ಆಹಾರ ಪೂರೈಕೆ ಮಾಡಬಹುದು

lಸಲೂನು, ಬ್ಯೂಟಿ ಪಾರ್ಲರ್‌ಗಳು ಕೋವಿಡ್ ನಿಯಮ ಪಾಲಿಸಿ ಕಾರ್ಯಾಚರಣೆ ನಡೆಸಬಹುದು

l50 ಜನರ ಮಿತಿಯಲ್ಲಿ ಮದುವೆ ನಡೆಸಬಹುದು

lಶವ ಸಂಸ್ಕಾರ, ಅಂತಿಮ ದರ್ಶನಕ್ಕೆ 20 ಜನರಿಗೆ ಮಾತ್ರ ಅವಕಾಶ

ವಾರಾಂತ್ಯ ಪೂರ್ಣ ಬಂದ್‌

ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಬಂದ್‌ ಇರುತ್ತದೆ. ಈ ಸಂದರ್ಭದಲ್ಲಿ ತುರ್ತು ಮತ್ತು ಅಗತ್ಯ ಚಟುವಟಿಕೆಗಳನ್ನು ಬಿಟ್ಟು ಬೇರೆಯದಕ್ಕೆ ಅವಕಾಶ ಇಲ್ಲ. ರೋಗಿಗಳ ಸಾಗಣೆ, ಆರೋಗ್ಯ ಪರೀಕ್ಷೆ, ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ಮಾತ್ರ ಅವಕಾಶ.

lನೆರೆ ಹೊರೆಯ ಅಂಗಡಿಗಳು, ಹಣ್ಣು ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಬೆಳಿಗ್ಗೆ 6 ರಿಂದ 10 ಗಂಟೆಯ ಒಳಗೆ ಖರೀದಿಸಲು ಅನುಮತಿ.

lಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸಲು ಹೋಗುವವರಿಗೆ, ಟೆಲಿಕಾಂ ಸಿಬ್ಬಂದಿ ಮತ್ತು ಈ ಕಾರ್ಯಕ್ಕಾಗಿ ಒಯ್ಯುವ ವಾಹನಗಳು, ಇಂಟರ್‌ನೆಟ್‌ ಸೇವೆಗೆ ಹೋಗುವವರಿಗೆ ಮಾತ್ರ ಅವಕಾಶವಿದೆ.

lರೆಸ್ಟೊರೆಂಟ್‌ ಮೂಲಕ ಪಾರ್ಸೆಲ್‌ ಒಯ್ಯಲು ಅವಕಾಶ

lಮದುವೆಗೆ ಅವಕಾಶ ಇದ್ದು, 50 ಜನ ಸೇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT