ಮಂಗಳವಾರ, ಜೂನ್ 22, 2021
27 °C

ಒಂದು ಹಾಸಿಗೆ ಕೊಡಿಸಲು ₹ 1.20 ಲಕ್ಷ ವಸೂಲಿ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ರೋಗಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸಲು ₹ 1.20 ಲಕ್ಷ ಹಣ ಪಡೆದ ಮೂವರನ್ನು ಸದಾಶಿವನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವೆಂಕಟ ಸುಬ್ಬರಾವ್ (28), ಮಂಜುನಾಥ್ (31) ಹಾಗೂ ಮತ್ತೊಂದು ಆಸ್ಪತ್ರೆಯಲ್ಲಿ ‘ಆರೋಗ್ಯ ಮಿತ್ರ’ನಾಗಿ ಕೆಲಸ ಮಾಡುತ್ತಿದ್ದ ಪುನೀತ್ (31) ಬಂಧಿತರು.

‘ಕೊರೊನಾ ಸೋಂಕಿತ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ನೆಲಮಂಗಲದಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಹಾಸಿಗೆ ಸಿಗದೆ ಪರದಾಡುತ್ತಿದ್ದರು. ಈ ವೇಳೆ ₹ 1.20 ಲಕ್ಷ ಹಣ ನೀಡಿದರೆ ಬೇರೆ ಆಸ್ಪತ್ರೆಯಲ್ಲಿ ಹಾಸಿಗೆ ಕೊಡಿಸುವುದಾಗಿ ಆರೋಪಿಗಳು ತಿಳಿಸಿದ್ದರು’.

‘ತುರ್ತಾಗಿ ಹಾಸಿಗೆ ಅಗತ್ಯ ಇದ್ದಿದ್ದರಿಂದ ಸೋಂಕಿತೆಯ ಮಗ ಲಕ್ಷ್ಮೀಶ ಎಂಬುವರು ಆರೋಪಿಗಳಿಗೆ ಗೂಗಲ್ ಪೇ ಮೂಲಕ ₹ 50 ಸಾವಿರ ಹಾಗೂ ₹ 70 ಸಾವಿರ ನಗದು ನೀಡಿದ್ದರು. ಇದಾದ ನಂತರ ಬೇರೆ ಆಸ್ಪತ್ರೆಯಲ್ಲಿ ರೋಗಿಗೆ ಹಾಸಿಗೆ ವ್ಯವಸ್ಥೆಯೂ ಆಯಿತು. ಆದರೆ, ಕೆಲವೇ ಗಂಟೆಗಳಲ್ಲಿ ರೋಗಿ ಮೃತಪಟ್ಟಿದ್ದರು’.

‘ಇದರಿಂದ ಮನನೊಂದ ಮೃತರ ಮಗ ಲಕ್ಷ್ಮೀಶ ಹಾಸಿಗೆಗಾಗಿ ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಇದರ ಅನ್ವಯ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು