ಬೆಳೆ ಹಾನಿ: ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಕಮಲಾಪುರ: ತಾಲ್ಲೂಕಿನ ಕುದಮೂಡ ಗ್ರಾಮದಲ್ಲಿ ಬೆಳೆ ಹಾನಿಯಿಂದ ಮನನೊಂದು ರೈತ ಧೋಂಡಿಬಾ ಕಲ್ಪಪ್ಪ ಪೂಜಾರಿ (40) ಕ್ರಿಮಿನಾಶಕ ಸೇವಿಸಿ ಬುಧವಾರ ಆತ್ಮಹತ್ಯೆ ಮಾಡಿಕೊಂಡರು.ಅವರಿಗೆ ತಾಯಿ, ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
‘ಜಮೀನಿಗೆ ಬುಧವಾರ ಬೆಳಿಗ್ಗೆ ತೆರಳಿದ ಧೋಂಡಿಬಾ ಅವರು ಕ್ರಿಮಿನಾಶಕ ಸೇವಿಸಿದರು. ಅಲ್ಲಿ ಬಿದ್ದು ಹೊರಳಾಡುವುದು ಕಂಡು ಅವರನ್ನು ಪರಿಚಿತರು ಮತ್ತು ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದರು’ ಎಂದು ನರೋಣಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.
‘ರೈತ ಧೋಂಡಿಬಾ ಹೆಸರಿನಲ್ಲಿ 4 ಎಕರೆ, ತಾಯಿ ಶಿವಕಾಂತಾಬಾಯಿ ಹೆಸರಿನಲ್ಲಿ 6 ಎಕರೆ ಜಮೀನಿದೆ. 9 ಎಕರೆಯಲ್ಲಿ ತೊಗರಿ ಮತ್ತು 1 ಎಕರೆಯಲ್ಲಿ ಜೋಳ ಬಿತ್ತನೆ ಮಾಡಿದ್ದರು. ನೆಟೆ ರೋಗದಿಂದ ತೊಗರಿ ಸಂಪೂರ್ಣ ಹಾನಿಯಾಗಿತ್ತು. ಅವರು ಖಾಸಗಿ ಮತ್ತು ಬ್ಯಾಂಕ್‌ನಲ್ಲಿ ₹ 10 ಲಕ್ಷ ಸಾಲ ಹೊಂದಿದ್ದರು’ ಎಂದು ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.