ಮಂಗಳವಾರ, ಜುಲೈ 5, 2022
26 °C

ಆರ್‌ಎಫ್‌ಒ ಮನೆಯಲ್ಲಿ ನೋಟು ಎಣಿಕೆ ಯಂತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಂಗಳೂರು: ಬಾದಾಮಿಯ ವಲಯ ಅರಣ್ಯಾಧಿಕಾರಿ ಶಿವಾನಂದ ಶರಣಪ್ಪ ಕೇದಗಿ ಮನೆಯಲ್ಲಿ 3 ಕೆ.ಜಿ. ಶ್ರೀಗಂಧ ವಶಕ್ಕೆ ಪಡೆಯಲಾಗಿದೆ. ಇವರ ಮನೆಯಲ್ಲಿ ನೋಟು ಎಣಿಕೆ ಯಂತ್ರವೂ ಸಿಕ್ಕಿದೆ.

ಒಂದು ಮನೆ, ಆರು ನಿವೇಶನ, 30 ಎಕರೆ ಕೃಷಿ ಜಮೀನು, ಎಲೆಕ್ಟ್ರಿಕ್‌ ಉಪಕರಣಗಳ ಮಳಿಗೆ ಸೇರಿದಂತೆ ಬೃಹತ್‌ ಪ್ರಮಾಣದ ಆಸ್ತಿಯನ್ನು ಭ್ರಷ್ಟಾಚಾರ ನಿಗ್ರಹ ದಳ ಪತ್ತೆಯಾಗಿದೆ.

ಚಿಕ್ಕಮಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಎಚ್‌. ಗವಿರಂಗಪ್ಪ ಮನೆಯಲ್ಲಿ ಐಷಾರಾಮಿ ಹೋಂ ಥಿಯೇಟರ್‌ ನಿರ್ಮಿಸಿಕೊಂಡಿದ್ದಾರೆ.

ಮೈಸೂರಿನ ವಿಜಯನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಚ್‌.ಎನ್‌. ಬಾಲಕೃಷ್ಣ ಗೌಡ ಎರಡು ಮನೆ, ಒಂದು ನಿವೇಶನ ಹೊಂದಿದ್ದಾರೆ. ಗುಂಡ್ಲುಪೇಟೆಯ ಅಬಕಾರಿ ಇನ್‌ಸ್ಪೆಕ್ಟರ್‌ ಚಲುವರಾಜು ಬಳಿ ಮೂರು ಮನೆ, ಎರಡು ನಿವೇಶನ ಇವೆ. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎ. ಶ್ರೀನಿವಾಸ ಬೆಂಗಳೂರಿನಲ್ಲಿ ಒಂದು ಮನೆ, ತುಮಕೂರಿನಲ್ಲಿ ಪಾಲಿಹೌಸ್‌ ಹೊಂದಿದ್ದಾರೆ.

ಮಂಗಳೂರಿನ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಯಾಳು ಸುಂದರ್ ರಾಜ್‌ ಎರಡು ಮನೆ, ಮೂರು ನಿವೇಶನ, ಒಂದು ಫ್ಲ್ಯಾಟ್‌, 1 ಎಕರೆ 20 ಗುಂಟೆ ಕೃಷಿ ಜಮೀನು ಹೊಂದಿದ್ದಾರೆ. ಯಲಬುರ್ಗ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಗಿರೀಶ್‌ ಬಳಿ ಒಂದು ಮನೆ, ಒಂದು ವಾಣಿಜ್ಯ ಸಂಕೀರ್ಣ ಇದೆ.

ದಾವಣಗೆರೆಯ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ ಎಂ.ಎಸ್‌. ಮೂರು ಮನೆ, ಆರು ನಿವೇಶನ ಹೊಂದಿದ್ದಾರೆ. ಹಾವೇರಿ ಎಪಿಎಂಸಿ ಸಹಾಯಕ ಎಂಜಿನಿಯರ್‌ ಕೃಷ್ಣ ಕೇಶಪ್ಪ ಆರೇರ ಮೂರು ಮನೆ, ಒಂದು ನಿವೇಶನ, 19 ಎಕರೆ ಕೃಷಿ ಜಮೀನುಗಳ ಒಡೆಯ ಎಂಬುದನ್ನು ಎಸಿಬಿ ಪತ್ತೆಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು