ಮಂಗಳವಾರ, ನವೆಂಬರ್ 24, 2020
19 °C

ಶಿವಮೊಗ್ಗದಿಂದ ಅಟಲ್‌ ಸುರಂಗದವರೆಗೆ ಸೈಕಲ್‌ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗದಿಂದ ಅಟಲ್‌ ಸುರಂಗದತ್ತ ಪ್ರಯಾಣ

ಶಿವಮೊಗ್ಗ: ಶಿವಮೊಗ್ಗ ಸೈಕಲ್‌ ಕ್ಲಬ್ ಸದಸ್ಯ ಸಿದ್ದೇಶ್ವರ ಅವರು ಹಿಮಾಚಲ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ಉದ್ದದ ಅಟಲ್‌ಸುರಂಗ ಮಾರ್ಗದತ್ತ ಪ್ರಯಾಣ ಬೆಳೆಸಿದರು.

ಶಿವಮೊಗ್ಗದಿಂದ ಅಟಲ್‌ ಸುರಂಗ 2700 ಕಿ.ಮೀ.ದೂರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅ.3ರಂದು ಸುರಂಗ ಮಾರ್ಗ ಉದ್ಘಾಟಿಸಿದ್ದರು. ಈ ಸುರಂಗ ಮಾರ್ಗ ಪ್ರವಾಸಿ ಸ್ಥಳವಾಗಿ ಬದಲಾಗಿದೆ. ಇಂತಹ ಸ್ಥಳಕ್ಕೆ ಸಿದ್ದೇಶ್ವರ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. 30 ದಿನಗಳಲ್ಲಿ ಯಾತ್ರೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಮುಂಭಾಗ ಸಾಹಸ ಸೈಕಲ್ ಯಾತ್ರೆಗೆ ಚಾಲನೆ ನೀಡಲಾಯಿತು. ಸೈಕಲ್ ಕ್ಲಬ್ ಸದಸ್ಯರು ಸ್ವಲ್ಪ ದೂರ ಸೈಕಲ್ ತುಳಿದು ಜತೆಯಾದರು. ಕ್ಲಬ್ ಅಧ್ಯಕ್ಷ ಬಿ.ಎಸ್.ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ಹರೀಶ್ ಕಾರ್ಣಿಕ್, ನರಸಿಂಹ ಮೂರ್ತಿ, ಗುರುಮೂರ್ತಿ, ರಜನಿ ಕಾಂತ್, ಗಣೇಶ್ ಕಾಮತ್, ನಟರಾಜ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು