ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2021ನೇ ಸಾಲಿನ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಜಿನದತ್ತ ದೇಸಾಯಿ, ನಾ.ಮೊಗಸಾಲೆ ಸೇರಿದಂತೆ ಐವರು ಆಯ್ಕೆಯಾಗಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಬಿ.ವಿ. ವಸಂತಕುಮಾರ್, ‘ಕನ್ನಡ ಸಾಹಿತ್ಯಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಸರಸ್ವತಿ ಚಿಮ್ಮಲಗಿ, ಪ್ರೊ. ಬಸವರಾಜ ಕಲ್ಗುಡಿ ಹಾಗೂ ಯಲ್ಲಪ್ಪ ಕೆ.ಕೆ. ಪುರ ಅವರನ್ನೂ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಬಹುಮಾನ ಒಳಗೊಂಡಿದೆ’ ಎಂದು ತಿಳಿಸಿದರು.

‘ಸಾಹಿತ್ಯ ಕೃಷಿಯನ್ನು ಪರಿಗಣಿಸಿ 10 ಸಾಹಿತಿಗಳನ್ನು 2021ನೇ ಸಾಲಿನ ‘ಸಾಹಿತ್ಯಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಐದು, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಮೂರು, ಸಾಹಿತ್ಯ ಪಾರಿಚಾರಿಕೆಗೆ ಒಂದು ಹಾಗೂ ಹೊರನಾಡ ಸಾಧನೆಗೆ ಒಂದು ಪ್ರಶಸ್ತಿ ನೀಡಲಾಗುತ್ತಿದೆ. ಚಂದ್ರಕಲಾ ಬಿದರಿ, ಪ್ರೊ.ಎಂ.ಎನ್. ವೆಂಕಟೇಶ್, ಚನ್ನಬಸವಯ್ಯ ಹಿರೇಮಠ, ಮ. ರಾಮಕೃಷ್ಣ, ಅಬ್ದುಲ್ ರಶೀದ್, ವೈ.ಎಂ. ಭಜಂತ್ರಿ, ಜೋಗಿ (ಗಿರೀಶರಾವ್ ಅತ್ವಾರ್), ಮೈಸೂರು ಕೃಷ್ಣಮೂರ್ತಿ, ಗಣೇಶ ಅಮೀನಗಡ ಹಾಗೂ ಆಲೂರು ದೊಡ್ಡನಿಂಗಪ್ಪ ಅವರು ‘ಸಾಹಿತ್ಯಶ್ರೀ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹ 25 ಸಾವಿರ ಒಳಗೊಂಡಿದೆ’ ಎಂದರು.

ರಾಯಚೂರಿನಲ್ಲಿ ಸಮಾರಂಭ: ‘ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 2020ರಲ್ಲಿ ಪ್ರಕಟವಾದ ಕೃತಿಗಳಲ್ಲಿ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ 19 ಕೃತಿಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ರಾಯಚೂರಿನಲ್ಲಿ ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರ ನಡೆಯಲಿದೆ’ ಎಂದು ವಿವರಿಸಿದರು. \

2020ರ ಪುಸ್ತಕ ಬಹುಮಾನ ಪುರಸ್ಕೃತರು

ಪ್ರಕಾರ; ಕೃತಿಯ ಹೆಸರು; ಲೇಖಕರು

* ಕಾವ್ಯ; ಕಾರುಣ್ಯದ ಮೋಹಕ ನವಿಲುಗಳೆ; ಆರನಕಟ್ಟೆ ರಂಗನಾಥ

* ನವಕವಿಗಳ ಪ್ರಥಮ ಸಂಕಲನ; ಗಾಯಗೊಂಡವರಿಗೆ; ಮಂಜುಳಾ ಹಿರೇಮಠ

* ಕಾದಂಬರಿ; ಬಯಲೆಂಬೊ ಬಯಲು; ಎಚ್.ಟಿ. ಪೋತೆ

* ಸಣ್ಣಕತೆ; ಬಂಡಲ್ ಕತೆಗಳು; ಎಸ್. ಸುರೇಂದ್ರನಾಥ್

* ನಾಟಕ; ಆರೋಹಿ; ಮಂಗಳ ಟಿ.ಎಸ್.

* ಲಲಿತ ಪ್ರಬಂಧ; ನಿದ್ರಾಂಗನೆಯ ಸೆಳವಿನಲ್ಲಿ; ಎನ್. ರಾಮನಾಥ್

* ಪ್ರವಾಸ ಸಾಹಿತ್ಯ; ನಕ್ಷತ್ರಗಳ ಸುಟ್ಟ ನಾಡಿನಲ್ಲಿ; ಭಾರತಿ ಬಿ.ವಿ.

* ಜೀವನಚರಿತ್ರೆ/ಆತ್ಮಕಥೆ; ‘ಗ್ರಾಮ ಸ್ವರಾಜ್ಯ’ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ; ಕೃಷ್ಣ ಕೊಲ್ಹಾರ ಕುಲಕರ್ಣಿ

* ಸಾಹಿತ್ಯ ವಿಮರ್ಶೆ; ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ; ಬಸವರಾಜ ಸಬರದ

* ಗ್ರಂಥ ಸಂಪಾದನೆ; ಲಿಂಗಣ್ಣ ಕವಿಯ ವರರಮ್ಯ ರತ್ನಾಕರ; ಕೆ. ರವೀಂದ್ರನಾಥ

* ಮಕ್ಕಳ ಸಾಹಿತ್ಯ; ಮತ್ತೆ ಹೊಸ ಗೆಳೆಯರು; ವೈ.ಜಿ. ಭಗವತಿ

* ವಿಜ್ಞಾನ ಸಾಹಿತ್ಯ; ಆಧ್ಯಾತ್ಮಿಕ ಆರೋಗ್ಯ ದರ್ಶನ; ಎಸ್.ಪಿ. ಯೋಗಣ್ಣ

* ಮಾನವಿಕ; ಗಾಂಧೀಯ ಅರ್ಥಶಾಸ್ತ್ರ; ಎಂ.ಎಂ. ಗುಪ್ತ

* ಸಂಶೋಧನೆ; ಮ್ಯಾಸಬೇಡರ ಮೌಖಿಕ ಕಥನಗಳು; ಪಿ. ತಿಪ್ಪೇಸ್ವಾಮಿ ಚಳ್ಳಕೆರೆ

* ಅನುವಾದ–1 (ಭಾರತೀಯ ಭಾಷೆಯಿಂದ ಕನ್ನಡಕ್ಕೆ); ದೈವಿಕ ಹೂವಿನ ಸುಗಂಧ; ಕೇಶವ ಮಳಗಿ

* ಅನುವಾದ–2 (ಕನ್ನಡದಿಂದ ಭಾರತೀಯ ಭಾಷೆಗೆ); ಶಿವಂಡೆ ಕಡುಂತುಡಿ; ಸುಧಾಕರನ್ ರಾಮಂತಳಿ

* ಅಂಕಣ ಬರಹ/ವೈಚಾರಿಕ ಬರಹ; ಪದಸೋಪಾನ; ನರಹಳ್ಳಿ ಬಾಲಸುಬ್ರಹ್ಮಣ್ಯ

* ಸಂಕೀರ್ಣ; ಸುವರ್ಣಮುಖಿ; ಸಿದ್ಧಗಂಗಯ್ಯ ಹೊಲತಾಳು

* ಲೇಖಕರ ಮೊದಲ ಸ್ವತಂತ್ರಕೃತಿ; ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ ಸಂಹಿತೆ; ಎಸ್.ಬಿ. ಬಸೆಟ್ಟಿ

2020ರ ದತ್ತಿ ಬಹುಮಾನ ಪುರಸ್ಕೃತರು

ಪ್ರಕಾರ; ದತ್ತಿನಿಧಿ ಬಹುಮಾನ; ಕೃತಿಯ ಹೆಸರು; ಲೇಖಕರು

* ಕಾವ್ಯ–ಹಸ್ತಪ್ರತಿ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ); ಬೆಳದಿಂಗಳ ಚೆಲುವು; ಪದ್ಮಜಾ ಜಯತೀರ್ಥ ಉಮರ್ಜಿ

* ಕಾದಂಬರಿ (ಚದುರಂಗ ದತ್ತಿನಿಧಿ ಬಹುಮಾನ); ದೊಡ್ಡತಾಯಿ; ಎಂ.ಎಸ್. ವೇದಾ

* ಲಲಿತ ಪ್ರಬಂಧ (ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನ); ವಠಾರ ಮೀಮಾಂಸೆ; ಆರತಿ ಘಟಿಕಾರ್

* ಜೀವನಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ); ಕಾಗೆ ಮುಟ್ಟಿದ ನೀರು; ಪುರುಷೋತ್ತಮ ಬಿಳಿಮಲೆ

* ಸಾಹಿತ್ಯ ವಿಮರ್ಶೆ (ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ); ಕುವೆಂಪು ಸ್ತ್ರೀ ಸಂವೇದನೆ; ತಾರಿಣಿ ಶುಭದಾಯಿನಿ

* ಅನುವಾದ–1 (ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ); ಸೀತಾ; ಪದ್ಮರಾಜ ದಂಡಾವತಿ

* ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿನಿಧಿ ಬಹುಮಾನ); ಕೂರ್ಗ್ ರೆಜಿಮೆಂಟ್; ಕುಶ್ವಂತ್ ಕೋಳಿಬೈಲು

* ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕ ಕನ್ನಡ ದತ್ತಿನಿಧಿ ಬಹುಮಾನ); ದಿ ಬ್ರೈಡ್ ಇನ್ ದಿ ರೈನಿ ಮೌಂಟೆನ್ಸ್; ಕೆ.ಎಂ. ಶ್ರೀನಿವಾಸಗೌಡ, ಜಿ.ಕೆ. ಶ್ರೀಕಂಠ ಮೂರ್ತಿ

* ವೈಚಾರಿಕ/ಅಂಕಣ ಬರಹ (ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನ); ಸಮರಸದ ದಾಂಪತ್ಯ; ನಡಹಳ್ಳಿ ವಸಂತ

* ದಾಸ ಸಾಹಿತ್ಯ (ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿನಿಧಿ ಬಹುಮಾನ); ಪುರಂದರದಾಸರ ಬಂಡಾಯ ಪ್ರಜ್ಞೆ; ಶ್ರೀನಿವಾಸ ಸಿರನೂರಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.