ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಕೈಚೆಲ್ಲಿ ಕುಳಿತಿದೆ: ಡಿಕೆಶಿ ವಾಗ್ದಾಳಿ

Last Updated 18 ಏಪ್ರಿಲ್ 2021, 18:39 IST
ಅಕ್ಷರ ಗಾತ್ರ

ಬೆಂಗಳೂರು: ‘ಜನ ಇದ್ದರೆ ಜೀವನ, ಜನರಿದ್ದರೆ ರಾಜ್ಯ, ಆರ್ಥಿಕತೆ. ಮೊದಲು ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಆದರೆ, ಸರ್ಕಾರ ಕೈಚೆಲ್ಲಿ ಕುಳಿ ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಕೋವಿಡ್ ನಿಭಾ ಯಿಸುವ ವಿಷಯದಲ್ಲಿ ಜನರ ಜೀವದ ಜೊತೆ ಕೇಂದ್ರ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿವೆ. ಕೈಮೀರಿ ಹೋಗಿದೆ ಎಂದು ಸಚಿವರು ಹೇಳುತ್ತಿದ್ದಾರೆ. ಬದು ಕುತ್ತೇವೊ, ಇಲ್ವೋ ಎಂಬ ಆತಂಕದಲ್ಲಿ ಜನರಿದ್ದಾರೆ. ಸರ್ಕಾರ ಇದೆಯೋ, ಇಲ್ಲವೋ ಗೊತ್ತಾಗುತ್ತಿಲ್ಲ’ ಎಂದರು.

‘ಸೋಮವಾರ ನಡೆಯಲಿರುವ ಬೆಂಗಳೂರು ಜನಪ್ರತಿನಿಧಿಗಳ ಸಭೆಯಲ್ಲಿ ನಮ್ಮವರೂ (ಕಾಂಗ್ರೆಸ್‌) ಭಾಗವಹಿಸಿ, ಸಲಹೆ ಕೊಡುತ್ತಾರೆ. ಲಾಕ್ ಡೌನ್‌ಗೆ ನಮ್ಮ ವಿರೋಧವಿದೆ. ಲಾಕ್ ಡೌನ್‌ನಿಂದ ಏನು ಪ್ರಯೋಜನ. ರಾತ್ರಿ ಮಾಡಿದರೆ ಮಾತ್ರ ಉಪಯೋಗವಾಗುತ್ತದೆ. ಹಗಲು ಹೊತ್ತು ಕೊರೊನಾ ಬರುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಅತಿ ಹೆಚ್ಚು ಆಸ್ಪತ್ರೆ ಮತ್ತು ಇಡೀ ದೇಶದಲ್ಲೇ ತಜ್ಞ ವೈದ್ಯರು ನಮ್ಮಲ್ಲಿದ್ದಾರೆ. ಆದರೂ ಸರ್ಕಾರಕ್ಕೆ ಕೋವಿಡ್‌ ನಿರ್ವಹಿಸಲು ಆಗುತ್ತಿಲ್ಲ. ರೆಮ್‌ಡಿಸಿವರ್ ಇಂಜೆಕ್ಷನ್ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ‌ ಹಾಸಿಗೆಗಳಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಎಷ್ಟು ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಸಚಿವರು ರಾಜ್ಯದ ಎಷ್ಟು ಕಡೆ ಭೇಟಿ ನೀಡಿದ್ದಾರೆ’ ಎಂದು ಪ್ರಶ್ನಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ‘ಖಾಸಗಿ‌ ಆಸ್ಪತ್ರೆಗಳಿಗೆ ಸರ್ಕಾರ ಕೊಡ ಬೇಕಾದ ಬಾಕಿ‌ ಉಳಿಸಿಕೊಂಡಿದೆ. ಕೊರೊನಾ ಸಮಯದಲ್ಲಿ ಹಾಸಿಗೆ ಕೊಟ್ಟ ವರಿಗೆ ಬಿಲ್ ಕೊಟ್ಟಿಲ್ಲ. ಚಿಕಿತ್ಸೆ ನೀಡಿದ ವರಿಗೆ ಹಣ ಕೊಡದಿದ್ದರೆ ಹೇಗೆ? ಇದು ಉದ್ದೇಶಪೂರ್ವಕವಾಗಿ ಮಾಡಿರು ವಂಥದ್ದು. ಈಗ ಹಾಸಿಗೆ ಬಿಟ್ಟುಕೊಡಿ ಅಂದರೆ ಯಾರು ಸಹಾಯ ಮಾಡು ತ್ತಾರೆ. ಖಾಸಗಿ ಆಸ್ಪತ್ರೆಗೆ ಹಣ ಸಂದಾಯ ಆಗದಿರುವುದರಿಂದ ಸಮಸ್ಯೆ ಆಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT