ಗುರುವಾರ , ಜೂನ್ 17, 2021
24 °C

ಕರಾವಳಿ ಬಿಟ್ಟು ಉಳಿದೆಡೆ ಶುಕ್ರವಾರ ಈದ್ ಉಲ್ ಫಿತ್ರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರಾವಳಿ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ ಶುಕ್ರವಾರ ಈದ್ ಉಲ್ ಫಿತ್ರ್ ಹಬ್ಬ ಆಚರಣೆ ನಡೆಯಲಿದೆ.

ಇಂದು ಶವ್ವಾಲ್ ತಿಂಗಳ ಚಂದ್ರದರ್ಶನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಈದ್ ಉಲ್ ಫಿತ್ರ್ ಆಚರಿಸಲಾಗುವುದು ಎಂದು ಬೆಂಗಳೂರಿನ ಚಂದ್ರದರ್ಶನ ಸಮಿತಿಯ ಮುಖ್ಯಸ್ಥ ಮೌಲಾನಾ ಮಕ್ಸೂದ್ ಇಮ್ರಾನ್ ತಿಳಿಸಿದ್ದಾರೆ. ದೇಶದ ಇತರ ಯಾವ ರಾಜ್ಯಗಳಿಂದಲೂ ಚಂದ್ರದರ್ಶನದ ಮಾಹಿತಿ ಲಭಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಕರಾವಳಿಯಲ್ಲಿ ಗುರುವಾರ: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಭಟ್ಕಳಗಳಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಗುರುವಾರ ಆಚರಿಸಲಾಗುತ್ತಿದೆ.

ಕರಾವಳಿಯಲ್ಲಿ ಒಂದು ದಿನ ಮೊದಲೇ ರಂಜಾನ್ ತಿಂಗಳ ಉಪವಾಸ ಆರಂಭವಾಗಿದ್ದು, ಬುಧವಾರಕ್ಕೆ 30 ದಿನಗಳ ಉಪವಾಸ ಕೊನೆಗೊಂಡಿದೆ. ಹಾಗಾಗಿ ಗುರುವಾರ ಹಬ್ಬ ಆಚರಿಸಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು