ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹21 ಲಕ್ಷ ವಂಚಿಸಿದ ಫೇಸ್‌ಬುಕ್‌ ಸ್ನೇಹಿತ

ಬಳ್ಳಾರಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
Last Updated 5 ಜನವರಿ 2021, 20:14 IST
ಅಕ್ಷರ ಗಾತ್ರ

ಕುರುಗೋಡು (ಬಳ್ಳಾರಿ): ಫೇಸ್‍ಬುಕ್‌ನಲ್ಲಿ ಸ್ನೇಹಿತನಾದ ವಿದೇಶಿ ಮೂಲದ ವ್ಯಕ್ತಿ ಉಡುಗೊರೆ ಕಳುಹಿಸುವುದಾಗಿ ಹೇಳಿ ₹21.79 ಲಕ್ಷ ಹಣ ಪಡೆದು ವಂಚಿಸಿದ್ದಾರೆ.

ರಾಮ್‌ಬಾಬು ಕ್ಯಾಂಪಿನ ಆಶಾ ಕಾರ್ಯಕರ್ತೆ ಮಹಾಲಕ್ಷ್ಮಿ ಎಂಬುವವರಿಂದ ಇಂಗ್ಲೆಂಡ್‌ ಮೂಲದ ಅಲೆಕ್ಸ್‌ಸ್ಮಿತ್ ಎಂದು ಹೆಸರು ಹೇಳಿಕೊಂಡವರು ಸೆಪ್ಟೆಂಬರ್‌ ತಿಂಗಳಿನಿಂದಲೇ ಹಣ ವಸೂಲಿ ಮಾಡುತ್ತಿದ್ದರು.

ಸ್ಮಿತ್ ಫೇಸ್‍ಬುಕ್‍ನಲ್ಲಿ ಕಳುಹಿಸಿದ್ದ ಸ್ನೇಹದ ವಿನಂತಿಯನ್ನು ಮಹಾಲಕ್ಷ್ಮಿ ಸ್ವೀಕರಿಸಿದ್ದರು. ಕೆಲ ದಿನಗಳ ಬಳಿಕ ‘ನಿಮಗೂ ಮತ್ತು ನಿಮ್ಮ ಮಗಳಿಗೂ ₹50 ಸಾವಿರ ಪೌಂಡ್‌ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದಾರೆ. ನಂತರ ದೆಹಲಿಯಿಂದ ಸುನಿತ ಶರ್ಮ ಎನ್ನುವ ವ್ಯಕ್ತಿ ಕರೆಮಾಡಿ, ಉಡುಗೊರೆ ಬಂದಿದ್ದು ಅದನ್ನು ಪಡೆಯಲು ₹30 ಸಾವಿರ ಠೇವಣಿ ಇಡುವಂತೆ ತಿಳಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸಲ್‍ನಲ್ಲಿ ₹50 ಸಾವಿರ ಪೌಂಡ್‌ಗಳಿದ್ದು, ಭಾರತೀಯ ಕರೆನ್ಸಿಗೆ ಪರಿವರ್ತಿಸಲು ₹1 ಲಕ್ಷ ನೀಡುವಂತೆ ಕೋರಿದ್ದಾರೆ. ನಂತರ ತೆರಿಗೆ ಹೆಸರಿನಲ್ಲಿ ₹1 ಲಕ್ಷ ಹಣ ಪಡೆದಿದ್ದಾರೆ. ಹೀಗೆ ವಿವಿಧ ಕಾರಣಗಳನ್ನು ಹೇಳಿ ಒಟ್ಟು ₹21.79 ಲಕ್ಷ ಹಣ ವಂಚಿಸಿದ್ದಾರೆ.

ಈ ಕುರಿತು ಬಳ್ಳಾರಿಯ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT