ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ಗಣೇಶ್‌ ಕಾಸರಗೋಡು ಅವರ ‘ಚೌಕಟ್ಟಿಲ್ಲದ ಚಿತ್ರಪುಟಗಳು’ ಪುಸ್ತಕ ಬಿಡುಗಡೆ

Last Updated 22 ನವೆಂಬರ್ 2021, 4:49 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಇತರರಿಗೆ ಮಾದರಿಯಾಗಬೇಕು. ಆಗ ಮಾತ್ರ ಬದುಕು ಸಾರ್ಥಕ ಎನಿಸುತ್ತದೆ’ ಎಂದು ಕವಿ ಜಯಂತ್‌ ಕಾಯ್ಕಿಣಿ ಅಭಿಪ್ರಾಯಪಟ್ಟರು.

ರಂಗ ವಿಜಯಾ ತಂಡವು ಇಲ್ಲಿಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಗಣೇಶ್‌ ಕಾಸರಗೋಡು ಅವರ ‘ಚೌಕಟ್ಟಿಲ್ಲದ ಚಿತ್ರಪುಟಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗೀತ ರಚನೆಕಾರ ನಾಗೇಂದ್ರ ಪ್ರಸಾದ್‌, ‘ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುತ್ತಿರುವ ರಂಗ ವಿಜಯಾ ತಂಡದ ಕಾರ್ಯ ಅನುಕರಣೀಯ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಕಮಾಂಡೆಂಟ್‌ ಹಾಗೂರಾಷ್ಟ್ರಪ್ರಶಸ್ತಿ ವಿಜೇತ‌ ಎಂ.ವಿ.ರಾಮಕೃಷ್ಣ ಪ್ರಸಾದ್‌, ರಾಮಚಂದ್ರಾಪುರ ಮಠದ ಗೋ ಸೇವಕ ವೈ.ವಿ.ಕೃಷ್ಣಮೂರ್ತಿ, ನಿವೃತ್ತ ಸೈನಿಕ ಮೇಜರ್‌ ಎಸ್‌.ಸತ್ಯನಾರಾಯಣ, ವೈದ್ಯ ಡಾ.ಪ್ರಸನ್ನ ಕುಮಾರ್‌, ರಂಭೂಮಿ ಕಲಾವಿದ ಕೃಷ್ಣ‍ಪ್ಪ, ಇಂಡೊ–ಚೀನಾ ಫ್ರೆಂಡ್‌ಶಿಪ್‌ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರನ್‌, ವಿದ್ವಾನ್‌ ಎಚ್‌.ಎಸ್‌.ವೇಣುಗೋಪಾಲ್‌ ಸೇರಿದಂತೆ ಅನೇಕರಿಗೆ ಕಾರ್ಯಕ್ರಮದಲ್ಲಿ ‘ಅಮೃತ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪಲ್ಲವಿ ಮಣಿ, ಎಂ.ವಿ.ಶ್ರೀನಿವಾಸ, ನಾಗರಾಜ ರೆಡ್ಡಿ, ಚಂದ್ರಶೇಖರ, ಎಂ.ಪಿ.ನಾಗರಾಜ, ಸುರೇಶ್‌ ಕೋಡಿಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT