ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಡಿಪಿಐ, ಪಿಎಫ್ಐ ನಿಷೇಧಿಸುವ ಕುರಿತು ಸರ್ಕಾರ ನಿರ್ಧರಿಸಿಲ್ಲ: ಮಾಧುಸ್ವಾಮಿ

Last Updated 15 ಆಗಸ್ಟ್ 2020, 8:02 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ಸರ್ಕಾರ ನಿರ್ಧರಿಸಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟ ಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಕಾನೂನು ಸಚಿವನಾಗಿ ಹೇಳುತ್ತಿದ್ದೇನೆ ತನಿಖೆ ಆಗೋವರೆಗೂ ಸೂಕ್ತ ಆಧಾರಗಳು ಸಿಗುವವರೆಗೂ ಸಂಘಟನೆಗಳನ್ನು ನಿಷೇಧಿಸುವುದು ಕಷ್ಟ. ಆದರೆ,
ನಮಗೆ ಮೇಲ್ನೋಟಕ್ಕೆ ಎಲ್ಲೋ ಒಂದು ಕಡೆ ಅನುಮಾನ ಬಂದಿದೆ. ಅದನ್ನು ತನಿಖಾಧಿಕಾರಿಗಳು ದೃಢೀಕರಿಸಿದ ಮೇಲೆ ನಾವೆಲ್ಲಾ ಈ ಬಗ್ಗೆ ಚರ್ಚೆ ಮಾಡುತ್ತೇವೆ' ಎಂದರು.

ಸರ್ಕಾರದ ಮಟ್ಟದಲ್ಲಿ ಇಲ್ಲಿಯವರೆಗೂ ಸಂಘಟನೆಗಳನ್ನು ನಿಷೇಧಿಸುವ ಕುರಿತಂತೆ ಯಾವುದೇ ಚರ್ಚೆಗಳು ಆಗಿಲ್ಲ. ಈಶ್ವರಪ್ಪ ಅವರ ವೈಯಕ್ತಿಕ ಅಭಿಪ್ರಾಯ ಇರಬಹುದು. ಆದರೆ, ಸರ್ಕಾರ ಇನ್ನೂ ಆ ನಿರ್ಧಾರಕ್ಕೆ ಬಂದಿಲ್ಲ ಎಂದರು.

ಪೊಲೀಸ್ ವ್ಯವಸ್ಥೆ ಮೇಲೆ ನಂಬಿಕೆಯಿದೆ

ಗಲಭೆ ಕುರಿತಂತೆ ನ್ಯಾಯಾಂಗ ತನಿಖೆ ಮಾಡಿಸಬೇಕು ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವ 'ನಮಗೆ ನಮ್ಮ ಪೋಲಿಸ್ ವ್ಯವಸ್ಥೆ ಮೇಲೆ ವಿಶ್ವಾಸ ಇದೆ. ಹಿಂದಿನ ಸರ್ಕಾರದವರಿಗೆ ಹೇಗೆ ಪೋಲಿಸ್ ಮೇಲೆ ನಂಬಿಕೆ ಇತ್ತೋ ನಮಗೂ ಅದೇ ವಿಶ್ವಾಸವಿದೆ. ಕ್ರೈಂ ಡಿಟಕ್ಷನ್ ಗಳನ್ನೆಲ್ಲಾ ನ್ಯಾಯಾಂಗ ತನಿಖೆ ಮಾಡೋಕಾಗಲ್ಲ. ಕ್ರೈಂ ಡಿಟೆಕ್ಷನ್ ಪೋಲಿಸರೇ ಮಾಡ್ಬೇಕು ಅದಕ್ಕೆ ಅವರು ಸಮರ್ಥರಿರುತ್ತಾರೆ ಎಂದರು.

ಅಖಂಡ ಶ್ರೀನಿವಾಸ್‌ ಮೂರ್ತಿ ಮೇಲೆ ಒತ್ತಡ

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಘಟನೆಯ ಬಗ್ಗೆ ದೂರು ಕೊಡಬೇಕಾಗಿತ್ತು. ಅವರ ಮೇಲೆ ಯಾವ ಒತ್ತಡ ಇದೆ ಎಂಬುದು ಗೊತ್ತಿಲ್ಲ. ಅವರು ದೂರು ನೀಡಿಲ್ಲ. ಆದರೂ ಸುಮೊಟೊ ಅಡಿಯಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ನಮಗೆ ಅವಕಾಶವಿದೆ ಎಂದು ಹೇಳಿದರು.

ನಾನು ಜಮೀರ್ ಒಳ್ಳೆಯ ಸ್ನೇಹಿತರು

ಇನ್ನೂ ಗೋಲಿಬಾರ್‌ನಲ್ಲಿ ಮೃತರ ಅಂತ್ಯಸಂಸ್ಕಾರಕ್ಕೆ ಜಮೀರ್ ಅಹ್ಮದ್ ಭಾಗಿಯಾಗಿರುವ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿ, 'ನಾನು ಜಮೀರ್ ಅಹ್ಮದ್ ಒಳ್ಳೆಯ ಸ್ನೇಹಿತರು. ಆದರೆ, ಅವರು ಬೆಳೆದುಬಂದಿರುವ ದಾರಿಗೂ ನಾನು ಬೆಳೆದು ಬಂದಿರುವ ದಾರಿಗೂ ವ್ಯತ್ಯಾಸ ಇದೆ' ಎಂದರು.

ಕ್ಷಮೆ ಯಾಚಿಸಿದ ಮಾಧುಸ್ವಾಮಿ

ತುಮಕೂರಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮೃತ ಪಟ್ಟ ಜನಪ್ರತಿನಿಧಿಗೆ ಗೌರವ ಸಮರ್ಪಣೆ ಮಾಡಬೇಕಾದದ್ದು ನಮ್ಮ ಕರ್ತವ್ಯ. ಆದರೆ, ಇತ್ತೀಚೆಗೆ ಮೃತಪಟ್ಟ ಶಿರಾ ಶಾಸಕ ಸತ್ಯನಾರಾಯಣ ಅವರಿಗೆ ಗೌರವ ಸೂಚಿಸಲು ಮರೆತೆವು. ಅದಕ್ಕೆ ಕ್ಷಮೆ ಕೇಳುತ್ತಿದ್ದೇನೆ.. ಇದಕ್ಕೆ ನಾನೇ ಜವಾಬ್ದಾರಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT