ಸೋಮವಾರ, ಏಪ್ರಿಲ್ 12, 2021
24 °C
ಸಾಂಪ್ರದಾಯಿಕ ಕಲ್ಲು ಗಣಿಗಾರಿಕೆ

ಭೋವಿ ಸಮುದಾಯಕ್ಕೆ ವಿನಾಯ್ತಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಂಪ್ರದಾಯಿಕವಾಗಿ ಬೆಂಕಿ ಉರಿಸಿ ಬಂಡೆಗಳನ್ನು ಒಡೆಯುವ ಕುಲ ಕಸುಬು ಮಾಡುತ್ತಿರುವ ಭೋವಿ ಸಮುದಾಯದ ಜನರಿಗೆ ಹೊಸ ಗಣಿ ನೀತಿಯಲ್ಲಿ ಕೆಲವು ವಿನಾಯ್ತಿಗಳನ್ನು ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಗೋವಿಂದ ರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರಸ್ತುತ ಜಾರಿಯಲ್ಲಿರುವ ಗಣಿ ನೀತಿಯ ಪ್ರಕಾರ ಪರವಾನಗಿ ಪಡೆಯದೆ ನಡೆಸುವ ಎಲ್ಲ ರೀತಿಯ ಕಲ್ಲು ಗಣಿಗಾರಿಕೆಯನ್ನೂ ಅಕ್ರಮ ಎಂದು ಪರಿಗಣಿಸಲಾಗುತ್ತಿದೆ. ಭೋವಿ ಸಮುದಾಯದ ಜನರು ಸಾಂಪ್ರದಾಯಿಕವಾಗಿ ನಡೆಸುವ ಕಲ್ಲು ಗಣಿಗಾರಿಕೆಗೆ ಸರಳವಾಗಿ ಅನುಮತಿ ನೀಡುವುದಕ್ಕೆ ಹೊಸ ಗಣಿ ನೀತಿಯಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದರು.

ಗೋವಿಂದ ರಾಜು ಮಾತನಾಡಿ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೋವಿ ಸಮುದಾಯದ ನೂರಾರು ಕುಟುಂಬಗಳು ಬಂಡೆಯನ್ನು ಸುಟ್ಟು ಕಲ್ಲು ಗಣಿಗಾರಿಕೆ ನಡೆಸುವ ಕೆಲಸ ಮಾಡುತ್ತಿವೆ. ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗುತ್ತಿದೆ. ಕುಲ ಕಸುಬು ಮಾಡುವವರಿಗೆ ಸರ್ಕಾರ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

₹ 2,336.13 ಕೋಟಿ ಲಭ್ಯ: ಜಿಲ್ಲಾ ಖನಿಜ ಅಭಿವೃದ್ಧಿ ನಿಧಿಯ ಮೂಲಕ ಸಂಗ್ರಹವಾಗಿರುವ ₹ 2,336.13 ಕೋಟಿ ಬಳಕೆಯಾಗದೆ ಉಳಿದಿದೆ. ಒಟ್ಟು ₹ 3,635.78 ಕೋಟಿ ಸಂಗ್ರಹವಾಗಿತ್ತು. ಈ ಪೈಕಿ ₹ 798.16 ಕೋಟಿ ಮಾತ್ರ ಬಳಕೆಯಾಗಿದೆ ಎಂದು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.