ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೇಟಿಂಗ್‌: ಹತ್ತು ವರ್ಷದ ಬಾಲಕಿಯ ಗಿನ್ನೆಸ್ ವಿಶ್ವ ದಾಖಲೆ

Last Updated 9 ಜನವರಿ 2021, 3:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಹತ್ತು ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಶುಕ್ರವಾರ ಸ್ಕೇಟಿಂಗ್‌ನ ಇನ್‌ಲೈನ್‌ ವಿಭಾಗದ 3 ಹೂಲಾಹುಪ್‌ನ 100 ಮೀಟರ್‌ ಗುರಿಯನ್ನು 23.35 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ ಗಿನ್ನಿಸ್‌ ವಿಶ್ವ ದಾಖಲೆಗೆ ಪಾತ್ರರಾದರು.

ಶಿರೂರು ಪಾರ್ಕ್‌ನ ಟೆಂಡರ್ ಶ್ಯೂರ್‌ ರಸ್ತೆ ಮೇಲೆ ನಡೆದ ಮೊದಲ ಯತ್ನದಲ್ಲಿ ಸ್ತುತಿ 23.68 ಮತ್ತು ಎರಡನೇ ಯತ್ನದಲ್ಲಿ 23.88 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೂರನೇ ಯತ್ನದಲ್ಲಿ ಗುರಿ ತಲುಪಿದ 23.35 ಸೆಕೆಂಡ್‌ ಉತ್ತಮ ಸಮಯ ಎನಿಸಿಕೊಂಡಿತು.

ರೋಲರ್‌ ಸ್ಕೇಟಿಂಗ್‌ನ 3 ಹೂಲಾಹುಪ್‌ನಲ್ಲಿ ಆಸ್ಟ್ರೇಲಿಯಾದ ಮಾರ್ವಾ ಇಬ್ರಾಹಿಂ 2017ರಲ್ಲಿ ಲಂಡನ್‌ನಲ್ಲಿ 27.26 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ನಿರ್ಮಿಸಿದ್ದ ಗಿನ್ನಿಸ್‌ ವಿಶ್ವದಾಖಲೆ ನಮ್ಮ ಮಗಳ ಸಾಧನೆಗೆ ಸ್ಫೂರ್ತಿಯಾಗಿದೆ. ಗಿನ್ನಿಸ್‌ ವಿಶ್ವ ದಾಖಲೆಗೆ ಹೆಸರು ಸೇರ್ಪಡೆಯಾಗಲು ಇನ್‌ಲೈನ್‌ ಸ್ಕೇಟಿಂಗ್‌ನ 3 ಹೂಲಾಹುಪ್‌ನಲ್ಲಿ 27 ಸೆಕೆಂಡ್‌ಗಳ ಒಳಗೆ ಗುರಿ ತಲುಪಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಇದಕ್ಕಿಂತಲೂ ಕಡಿಮೆ ಅವಧಿಯ ಒಳಗೆ ಸ್ತುತಿ ಗುರಿ ಮುಟ್ಟಿರುವ ಕಾರಣ ಗಿನ್ನಿಸ್‌ ವಿಶ್ವ ದಾಖಲೆ ಗೌರವ ಲಭಿಸುವುದು ಖಚಿತ. ಅಧಿಕೃತವಾಗಿ ಘೋಷಣೆಯಾಗಬೇಕಿದೆ.

ಹುಬ್ಬಳ್ಳಿಯ ಪರಿವರ್ತನ ಗುರುಕುಲದಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಸ್ತುತಿ, ಹುಬ್ಬಳ್ಳಿ ರೋಲರ್‌ ಸ್ಕೇಟಿಂಗ್‌ ಕ್ಲಬ್‌ ಕೋಚ್‌ ಅಕ್ಷಯ ಸೂರ್ಯವಂಶಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ. ನಾಲ್ಕು ವರ್ಷದವಳಾಗಿದ್ದಾಗಲೇ ಹವ್ಯಾಸಕ್ಕಾಗಿ ಹುಲಾಹೂಪ್‌ ಆರಂಭಿಸಿ ಈಗ ಸರಣಿ ದಾಖಲೆಗಳನ್ನು ಮಾಡುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT