ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲನಾ ತರಬೇತಿಗೆ ‘ಹನ್ಸಾ–ಎನ್‌ಜಿ ವಿಮಾನ’ ಅನಾವರಣ

ಬೆಂಗಳೂರಿನ ಸಿಎಸ್‌ಐಆರ್-ಎನ್‌ಎಎಲ್‌ನಿಂದ ವಿನ್ಯಾಸ
Last Updated 31 ಮಾರ್ಚ್ 2021, 21:11 IST
ಅಕ್ಷರ ಗಾತ್ರ

ಬೆಂಗಳೂರು: ನಾಗರಿಕ ವಿಮಾನಗಳ ಪೈಲಟ್‌ಗಳಿಗೆ ಚಾಲನಾ ತರಬೇತಿಗೆ ಅನುಕೂಲವಾಗುವಂತೆ ಹೊಸ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಎರಡು ಆಸನಗಳುಳ್ಳ ‘ಹನ್ಸಾ–ಎನ್‌ಜಿ’ ಹೆಸರಿನ ವಿಮಾನವನ್ನು ಬೆಂಗಳೂರಿನ ಸಿಎಸ್‌ಐಆರ್–ನ್ಯಾಷನಲ್ ಏರೋಸ್ಪೇಸ್‌ ಲ್ಯಾಬೊರೇಟರೀಸ್ (ಎನ್‌ಎಎಲ್) ಸಂಸ್ಥೆಯು ಬುಧವಾರ ಅನಾವರಣಗೊಳಿಸಿತು.

ನಾಗರಿಕ ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯು‘ಹನ್ಸಾ’ ಹೆಸರಿನಲ್ಲಿ ಈಗಾಗಲೇ ಅನೇಕ ವಿಮಾನಗಳನ್ನು ವಿನ್ಯಾಸಗೊಳಿಸಿದ್ದು, ಮಾರುಕಟ್ಟೆಯಸಮಕಾಲೀನ ಬೇಡಿಕೆಗಳಿಗೆ ತಕ್ಕಂತೆ ನೂತನ ತಂತ್ರಜ್ಞಾನಗಳನ್ನು ಈ ವಿಮಾನದಲ್ಲಿ ಅಳವಡಿಸಲಾಗಿದೆ. ಇದಕ್ಕಾಗಿ ವಿಮಾನಕ್ಕೆ ‘ಹನ್ಸಾ–ನ್ಯೂ ಜನರೇಷನ್’ (ಎನ್‌ಜಿ) ಹೆಸರು ಇಡಲಾಗಿದೆ.

‘2016ರಿಂದ ಭಾರತವು ಅತಿದೊಡ್ಡ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿ ಬೆಳೆದಿದೆ. ಇದರಿಂದತರಬೇತಿ ಪಡೆದ ಪೈಲಟ್‌ಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅನೇಕ ಫ್ಲೈಯಿಂಗ್ ಕ್ಲಬ್‌ಗಳು ಕಡಿಮೆ ವೆಚ್ಚದ ತರಬೇತುದಾರ ವಿಮಾನಗಳನ್ನು ಹುಡುಕುತ್ತಿವೆ. ಇದನ್ನು ಮನಗಂಡ ಸಂಸ್ಥೆಯು ತರಬೇತುದಾರ ವಿಮಾನದ ಬೇಡಿಕೆ ಪೂರೈಸಲು ಹನ್ಸಾ ವಿಮಾನದ ಮಾರ್ಪಾಡಿಗೆ ಮುಂದಾಯಿತು’ ಎಂದುಸಿಎಸ್‌ಐಆರ್-ಎನ್‌ಎಎಲ್ ನಿರ್ದೇಶಕ ಜಿತೇಂದ್ರ ಜೆ.ಜಾಧವ್ ತಿಳಿಸಿದರು.

‘ಈ ಸ್ವದೇಶಿ ತರಬೇತಿ ವಿಮಾನ ತಯಾರಿ ಯೋಜನೆಗೆ ಸರ್ಕಾರ2018ರಲ್ಲಿ ಮಂಜೂರಾತಿ ನೀಡಿತ್ತು. ಗ್ಲಾಸ್‌ ಕಾಕ್‌ಪಿಟ್‌ ಒಳಗೊಂಡ ರೆಟ್ರೊ ಶೈಲಿಯ ಹನ್ಸಾ–3 ಹೆಸರಿನ ವಿಮಾನವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪ್ರಮಾಣೀಕರಿಸಿದೆ. ಇದನ್ನು 2019ರ ಏರೋ–ಇಂಡಿಯಾದಲ್ಲಿ ಪ್ರದರ್ಶಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ಕಡಿಮೆ ವೆಚ್ಚದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಹನ್ಸಾ–ಎನ್‌ಜಿ ವಿನ್ಯಾಸದಲ್ಲಿ ಮೆಸ್ಕೊ ಏರೋಸ್ಪೇಸ್ ಲಿಮಿಟೆಡ್ ಕೈಜೋಡಿಸಿತು.ಈ ವಿಮಾನವು ಡಿಜಿಟಲ್ ನಿಯಂತ್ರಿತ ರೋಟಾಕ್ಸ್‌ 912 ಐಎಸ್‌ಸಿ ಎಂಜಿನ್, ಸ್ಮಾರ್ಟ್‌ ಮಲ್ಟಿ ಫಂಕ್ಷನಲ್ ಡಿಸ್‌ಪ್ಲೇಗಳು (ಪರದೆ), ಗ್ಲಾಸ್ ಕಾಕ್‌ಪಿಟ್, ಬಬಲ್ ಮಾದರಿಯ ಮೇಲಾವರಣದ ವಿನ್ಯಾಸ ಹೊಂದಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT