ಬುಧವಾರ, ಸೆಪ್ಟೆಂಬರ್ 22, 2021
26 °C

‘ಪಿಟಿಸಿಎಲ್‌: ಆಸ್ತಿ ವಿವರ ನೋಂದಣಿ ಕಚೇರಿಗೆ ಒದಗಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಮಂಜೂರು ಮಾಡಿರುವ ಜಮೀನಿನ ಪಟ್ಟಿಯನ್ನು ಎಲ್ಲಾ ನೋಂದಣಿ ಕಚೇರಿಗಳಿಗೆ ನಾಲ್ಕು ತಿಂಗಳಲ್ಲಿ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಪರಭಾರೆ ಕಾಯ್ದೆಯ(ಪಿಟಿಸಿಎಲ್‌) ಸೆಕ್ಷನ್ 6 ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದಿದ್ದರೆ ಕಾಯ್ದೆಯೇ ಉದ್ದೇಶವನ್ನೇ ಸೋಲಿಸಿದಂತೆ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಕಂದಾಯ ಇಲಾಖೆಯ ಭೂಮಿ ತಂತ್ರಾಂಶದದಲ್ಲಿ ರಾಜ್ಯದ ಕೃಷಿ ಭೂಮಿಯ ಸಂಪೂರ್ಣ ವಿವರ ಇದೆ. ಈ ತಂತ್ರಾಂಶವನ್ನು ಅವಲಂಬಿಸಿಯೇ ಕಾವೇರಿ ತಂತ್ರಾಂಶದ ಮೂಲಕ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ಭೂಮಿ ಮತ್ತು ಕಾವೇರಿ ತಂತ್ರಾಂಶಗಳು ವಿಲೀನಗೊಂಡ ಬಳಿಕ ಎಲ್ಲಾ ಮಾಹಿತಿಯೂ ನೋಂದಣಿ ಇಲಾಖೆಗೆ ಲಭ್ಯವಾಗಲಿದೆ ಎಂದು ಸರ್ಕಾರ ವಿವರ ಸಲ್ಲಿಸಿತು.

‘ಪಿಟಿಸಿಎಲ್ ಕಾಯ್ದೆಯ ಸೆಕ್ಷನ್ 6ರ ಪ್ರಕಾರ ಈ ಪಟ್ಟಿಯನ್ನು ಎಲ್ಲಾ ನೋಂದಣಾಧಿಕಾರಿ ಕಚೇರಿಗಳಿಗೆ ಒದಗಿಸುವುದು ಕಡ್ಡಾಯ. ಬೇರೆ ಸ್ಪಷ್ಟನೆ ನೀಡದೆ ಆ ಕೆಲಸವನ್ನು ಸರ್ಕಾರ ಮೊದಲು ಮಾಡಬೇಕು. ಡಿಸೆಂಬರ್ 16ರೊಳಗೆ ಅನುಸರಣಾ ವರದಿ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು