ಗುರುವಾರ , ಜನವರಿ 28, 2021
15 °C

ಪಕ್ಷದಿಂದ ಜಿಟಿಡಿ ಉಚ್ಛಾಟಿಸಲು ಚರ್ಚಿಸಿಲ್ಲ: ಎಚ್‌.ಕೆ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಶಾಸಕ ಜಿ.ಟಿ.ದೇವೇಗೌಡ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಎಲ್ಲಿಯೂ ಚರ್ಚೆ ಮಾಡಿಲ್ಲ. ಪಕ್ಷದಿಂದ ಗೆದ್ದ ಶಾಸಕ ಅವಧಿ ಮುಗಿಯುವವರೆಗೆ ಪಕ್ಷದಲ್ಲಿ ಇರುವುದು ಒಳ್ಳೆಯದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಇಲ್ಲಿ ಭಾನುವಾರ ಪ್ರತಿಕ್ರಿಯಿಸಿದರು.

ಜಿ.ಟಿ.ದೇವೇಗೌಡ ಅವರನ್ನು ಉಚ್ಛಾಟಿಸಲು ಪಕ್ಷ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಉಚ್ಛಾಟನೆಗೆ ಈಗ ಯಾರು ಹೆದರುತ್ತಿಲ್ಲ. ಉಚ್ಛಾಟನೆ ಮಾಡಲಿ ಎಂದು ಅವರು ಕಾಯುತ್ತಿದ್ದಾರೆ. ಆಗ ಇನ್ನೂ ಹಗುರವಾಗಿ ಮಾತನಾಡಲು, ಬೇರೆ ನಡೆ ಇಡಲು ಅವಕಾಶವಾಗುತ್ತದೆ. ಅವರ ರೀತಿನೀತಿ ಗಮನಿಸಿದರೆ ಹಾಗೆ ಆನಿಸುತ್ತಿದೆ’ ಎಂದರು.

‘ಪ್ರತಿ ಸಭೆಗೂ ಅವರನ್ನು ಆಹ್ವಾನಿಸಿದ್ದೇವೆ. ಮೊನ್ನೆಯ ಸಭೆಗೂ ಅವರಿಗೆ ಕರೆ ಹೋಗಿತ್ತು. ಅವರು ಹಾಜರಾಗಿಲ್ಲ’ ಎಂದು ಉತ್ತರಿಸಿದರು .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು