ಸೋಮವಾರ, ನವೆಂಬರ್ 28, 2022
20 °C

ಕಾನ್‌ಸ್ಟೆಬಲ್‌ ಆಕಾಂಕ್ಷಿಗಳ ಅಹವಾಲನ್ನು ಸಹನೆಯಿಂದ ಕೇಳಿದ್ದೇನೆ: ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆ ಆಕಾಂಕ್ಷಿಗಳು ನೇಮಕಾತಿಗೆ ಆಗ್ರಹಿಸಿ ಮನವಿ ಸಲ್ಲಿಸಲು ಬಂದಾಗ ಗೃಹ ಸಚಿವರು ಉಡಾಫೆ, ದುರಹಂಕಾರದಿಂದ ವರ್ತಿಸಿದ್ದಾರೆ ಎಂಬ ಕಾಂಗ್ರೆಸ್‌ ಆರೋಪವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತಳ್ಳಿ ಹಾಕಿದ್ದಾರೆ.

ಆಕಾಂಕ್ಷಿಗಳ ಅಹವಾಲನ್ನು ಅತ್ಯಂತ ಸಹಾನುಭೂತಿ ಹಾಗೂ ಸಹನೆಯಿಂದ ಕೇಳಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ದುರುಂಹಾರ, ದುಂಡಾವರ್ತನೆ, ದರ್ಪ ಏನಿದ್ದರೂ ಕಾಂಗ್ರೆಸ್‌ನವರ ಸಂಸ್ಕೃತಿ ಎಂದು ಜ್ಞಾನೇಂದ್ರ ದೂರಿದ್ದಾರೆ.

ಪೊಲೀಸ್‌ ಕಾನ್‌ಸ್ಟೆಬಲ್‌ ಉದ್ಯೋಗ ಆಕಾಂಕ್ಷಿಗಳು ಕಣ್ಣೀರಿಡುತ್ತ ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತಿರುವ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದ ಕಾಂಗ್ರೆಸ್‌, ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಎಂದು ಪ್ರಶ್ನಿಸಿತ್ತು. ಈ ದರ್ಪ, ದೌಲತ್ತುಗಳ ಆಯಸ್ಸು ಕೆಲವೇ ತಿಂಗಳುಗಳಷ್ಟೇ, ನೆನಪಿರಲಿ ಎಂದು ಎಚ್ಚರಿಕೆ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು