ನವದೆಹಲಿ: ಅಯೋಧ್ಯೆಯಲ್ಲಿನ ವಿವಾದಿತ ನಿವೇಶನದಲ್ಲಿ ನಿರ್ಮಾಣ ಆಗುವ ರಾಮ ಮಂದಿರಕ್ಕೆ ದೇಣಿಗೆ ನೀಡುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವಿವಾದಿತ ಭೂಮಿಯಲ್ಲಿ ನಿರ್ಮಿಸುವ ಮಂದಿರದ ಬದಲಿಗೆ ಬೇರೆ ಕಡೆ ಅಥವಾ ನಮ್ಮೂರಲ್ಲಿ ನಿರ್ಮಾಣ ಆಗುವ ರಾಮ ಮಂದಿರಕ್ಕೆ ದೇಣಿಗೆ ನೀಡುವೆ' ಎಂದರು.

ಇದನ್ನೂ ಓದಿ.. ‘ಮಾರಿಷಿಯಸ್ನಲ್ಲಿ ಯಡಿಯೂರಪ್ಪ ಕುಟುಂಬದ ಅಕ್ರಮ ಹಣ’: ಯತ್ನಾಳ ಹೇಳಿಕೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ: ಸಿದ್ದರಾಮಯ್ಯ

'ರಾಮ ಜನ್ಮ ಭೂಮಿ ವಿವಾದವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ್ದು, ದೇಣಿಗೆ ನೀಡುವುದರಲ್ಲಿ ತಪ್ಪೇನಿದೆ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಬೇರೆ ಯಾವುದೇ ಸ್ಥಳದಲ್ಲಿ ಮಂದಿರ ನಿರ್ಮಿಸಿದರೂ ಹಣ ನೀಡಬಹುದು. ಈಗ ಆರ್‌ಎಸ್ಎಸ್‌ನವರುಸಂಗ್ರಹಿಸುತ್ತಿರುವ ಹಣಕ್ಕೆ ರಸೀದಿ ಕೊಟ್ಟು, ಲೆಕ್ಕ ನೀಡುತ್ತಾರೇನು' ಎಂದು ಪ್ರಶ್ನಿಸಿದರು.

ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರ ಮನೆಗಳನ್ನು ಕೆಲವರು ಗುರುತು ಇಟ್ಟುಕೊಂಡು ಬೆದರಿಕೆ ಒಡ್ಡಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರಂತೆ. ಅದಕ್ಕೆ ಪ್ರತಿಕ್ರಿಯೆ ನೀಡಲಾಗದು ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.