ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡಲಾಗುವ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಬುಧವಾರ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು, ಮಕ್ಕಳು, ಸಂಘ ಸಂಸ್ಥೆಗಳು ಮತ್ತು ಸ್ತ್ರೀ ಶಕ್ತಿ ಗುಂಪುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸೋಮವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ಆದರೆ, ಅದೇ ದಿನ ರಾಜ್ಯ ಬಜೆಟ್ ಮಂಡನೆ ಇತ್ತು. ಈ ಕಾರಣದಿಂದ ಬುಧವಾರ ಸಮಾರಂಭ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಯ ನೀಡಿದ್ದಾರೆ. ಅರಮನೆ ಮೈದಾನದ ಪ್ರಿನ್ಸಸ್ ಗಾಲ್ಫ್ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು’ ಎಂದರು.

ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಮಹಿಳೆಯರು, ಮಕ್ಕಳು, ಸಂಘ ಸಂಸ್ಥೆಗಳು ಮತ್ತು ಸ್ತ್ರೀ ಶಕ್ತಿ ಗುಂಪುಗಳ ವಿವರವನ್ನು ಸಚಿವರು ಪ್ರಕಟಿಸಿದರು.

ಮಹಿಳೆಯರ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆ (₹ 50,000): ಶಾರದಾ ಮಹಿಳಾ ಮಂಡಲ, ಕಾರ್ಕಳ, ಉಡುಪಿ ಜಿಲ್ಲೆ; ಕೀರ್ತಿ ಯುವತಿ ಮಹಿಳಾ ಮಂಡಳಿ, ಮಂಚೇಗೌಡನಕೊಪ್ಪಲು, ಮೈಸೂರು; ಈರಮ್ಮ ಮಹಿಳಾ ಸ್ತ್ರೀ ಶಕ್ತಿ ಸಂಘ, ಗುಡಿಮಠ, ಸಿಂದಗಿ ತಾಲ್ಲೂಕು, ವಿಜಯಪುರ ಜಿಲ್ಲೆ, ಸೋಷಿಯಲ್ ಆ್ಯಕ್ಷನ್ ಫಾರ್ ರೂರಲ್ ಡೆವಲಪ್ಮೆಂಟ್ ಅಸೋಸಿಯೇಷನ್ (ಸಾರ್ಡ್), ಮುಧೋಳ, ಬಾಗಲಕೋಟೆ ಜಿಲ್ಲೆ ಮತ್ತು ತಲಾಷ್ ಅಸೋಸಿಯೇಷನ್, ಪಾಂಡುರಂಗನಗರ, ಅರಿಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು.

ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದವರು (ವೈಯಕ್ತಿಕ– ₹ 25,000): ರಮಿತಾ ಶೈಲೇಂದ್ರ ರಾವ್, ಗುದೆಲ್ ಬಾಕೆರ್ ಪೆರ್ವಾಜೆ, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ; ಕೆ.ಎನ್. ವಾಣಿ, ಮದ್ದೂರು, ಮಂಡ್ಯ ಜಿಲ್ಲೆ; ಎಂ. ರೇಣುಕಾ, ಗುಂಡ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ; ಡಾ.ಕರುಣಾ ವೀರ, ವಿಜಯನಗರ, ಬೆಂಗಳೂರು; ಭಾಗ್ಯಮ್ಮ, ಚಿಕ್ಕಬಾಣಾವರ, ಬೆಂಗಳೂರು; ಗೀತಾ ಚಂದ್ರಶೇಖರ್ ಚೌಧರಿ, ವಿಜಯಪುರ, ಲಕ್ಷ್ಮೀದೇವಿ ಗುಡ್ಲಾನೂರ, ಗಂಗಾವತಿ, ಕೊಪ್ಪಳ ಜಿಲ್ಲೆ ಮತ್ತು ಸುನೀತಾ ಲ. ದಿವಟಿ, ವಿಶ್ವೇಶ್ವರನಗರ, ಹುಬ್ಬಳ್ಳಿ.

ಕಲಾ ಕ್ಷೇತ್ರ (₹25,000): ದೀಕ್ಷಾ ಎಂ. ಶೆಟ್ಟಿ, ಕಾಟಿಪಳ್ಳ, ಮಂಗಳೂರು; ಶಶಿಕಲಾ ಅರುಣಾ ದಾನಿ, ವಿದ್ಯಾನಗರ ಹುಬ್ಬಳ್ಳಿ; ಮಂಜುಳಾ ಮ. ಸಂಬಾಳಮಠ, ಲೋಕಾಪುರ, ಮೂಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ; ಡಾ. ಆರ್. ನೀಲಾಂಬಿಕೆ. ಬನಶಂಕರಿ 7ನೇ ಹಂತ, ಬೆಂಗಳೂರು ಮತ್ತು ಡಾ.ಕೆ. ನಾಗರತ್ನಮ್ಮ, ಮರಿಯಮ್ಮನಹಳ್ಳಿ, ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ.

ಸಾಹಿತ್ಯ ಕ್ಷೇತ್ರ (₹ 25,000): ಶಿವಲಿಂಗಮ್ಮ ಮಲ್ಲಿಕಾರ್ಜುನ ಕಟ್ಟಿ, ವಿಶ್ವೇಶ್ವರನಗರ, ಹುಬ್ಬಳ್ಳಿ, ಡಾ.ಬಿ.ಸಿ. ಶೈಲಾ ನಾಗರಾಜ್, ವಿಜಯನಗರ, ತುಮಕೂರು ಮತ್ತು ವಿಜಯಲಕ್ಷ್ಮಿ ಶಿವಕುಮಾರ ಕೌಟಗೆ, ಕೈಲಾಶ ನಗರ, ಬೀದರ್.

ಕ್ರೀಡಾ ಕ್ಷೇತ್ರ (₹ 25,000): ಸುಧಾ ಮೃತ್ಯುಂಜಯ ಹಿರೇಮಠ, ರಾಣೆಬೆನ್ನೂರು, ಹಾವೇರಿ ಜಿಲ್ಲೆ.

ಶಿಕ್ಷಣ ಕ್ಷೇತ್ರ (₹25,000): ಡಾ. ಎಸ್. ಛಾಯಾಕುಮಾರಿ, ಪ್ರಾಂಶುಪಾಲರು, ನ್ಯೂ ಮಿಲೇನಿಯಂ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ, ಬೆಂಗಳೂರು.

ವೀರ ಮಹಿಳೆ(₹25,000): ಗೌರಿ ಸಿ. ನಾಯಕ, ಗಣೇಶ ನಗರ, ಶಿರಸಿ, ಉತ್ತರ ಕನ್ನಡ ಜಿಲ್ಲೆ.

ರಾಜ್ಯಮಟ್ಟದ ಅತ್ಯುತ್ತಮ ಸ್ತ್ರೀ ಶಕ್ತಿ ಗುಂಪುಗಳು: ಸಿಂಧುಶ್ರೀ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘ, ದಾವಸ್ಪೇಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು (ಪ್ರಥಮ– ₹ 50,000), ಸೂರ್ಯರಶ್ಮಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಆದರ್ಶನಗರ, ಚಿಲಿಂಬಿ, ಮಂಗಳೂರು (ದ್ವಿತೀಯ– ₹ 30,000) ಮತ್ತು ಮಹಾಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘ , ಆದರ್ಶನಗರ, ಕಲಬುರ್ಗಿ (₹ 20,000).

ಯಶೋಧರಮ್ಮ ದಾಸಪ್ಪ ವಿಭಾಗೀಯ ಮಟ್ಟದ ಪ್ರಶಸ್ತಿ (₹ 25,000): ಬೆಂಗಳೂರು ವಿಭಾಗ– ಸ್ಫೂರ್ತಿ ಸ್ತ್ರೀಶಕ್ತಿ ಸ್ವಸಹಾಯ ಸಂಘ, ಹೊಸೂಡಿ, ಶಿವಮೊಗ್ಗ; ಮೈಸೂರು ವಿಭಾಗ– ಶ್ರೀ ಚಾಮುಂಡೇಶ್ವರಿ, ಸ್ತ್ರೀ ಶಕ್ತಿ ಯೋಜನೆ, ಕೊಡಿಯಾಲ ಬಜಾರ್ ಸ್ಟ್ರೀಟ್, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ; ಬೆಳಗಾವಿ ವಿಭಾಗ– ಶ್ರೀ ಬನಶ್ರೀ ಸ್ತ್ರೀ ಶಕ್ತಿ ಸ್ವಸಹಾಯ ಸಂಘ, ಬನಶಂಕರಿ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಮತ್ತು ಕಲಬುರ್ಗಿ ವಿಭಾಗ– ಸಿದ್ಧಮಾತಾ ಸ್ತ್ರೀಶಕ್ತಿ ಗುಂಪು, ತ್ರಿಪುರಾಂತ, ಬಸವಕಲ್ಯಾಣ, ಬೀದರ್ ಜಿಲ್ಲೆ.

ಅತ್ಯುತ್ತಮ ತಾಲ್ಲೂಕು ಒಕ್ಕೂಟ ಪ್ರಶಸ್ತಿ: ಮಧುಗಿರಿ ತಾಲ್ಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ತುಮಕೂರು ಜಿಲ್ಲೆ (ಪ್ರಥಮ– ₹ 80,000); ಕುಂದಾಪುರ ತಾಲ್ಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಉಡುಪಿ ಜಿಲ್ಲೆ (ದ್ವಿತೀಯ– ₹ 70,000) ಮತ್ತು ಸ್ಫೂರ್ತಿ ಸ್ವಸಹಾಯ ಸಂಘಗಳ ಬ್ಲಾಕ್ ಸೊಸೈಟಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ (ತೃತೀಯ– ₹ 60,000).

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ (₹10,000): ಮಾಸ್ಟರ್ ಆದಿತ್ಯ ಎಂ. ಶಿವಳ್ಳಿ, ಕುಸುಗಲ್ ರಸ್ತೆ, ಹುಬ್ಬಳ್ಳಿ (ಹೊಯ್ಸಳ ಶೌರ್ಯ ಪ್ರಶಸ್ತಿ); ದಿವಂಗತ ಲೆನಿನ್ ಬೋಪಣ್ಣ, ಹೈಸೊಡ್ಲೂರು ಗ್ರಾಮ, ಹುದಿಕೇರಿ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ (ಮರಣೋತ್ತರ ಹೊಯ್ಸಳ ಶೌರ್ಯ ಪ್ರಶಸ್ತಿ) ಮತ್ತು ನಮನಾ ಬಿ.ಕೆ., ಚೌಳಿಕೆರೆ, ಬಾರ್ಕೂರು, ಉಡುಪಿ ಜಿಲ್ಲೆ (ಕೆಳದಿ ಚೆನ್ನಮ್ಮ ಪ್ರಶಸ್ತಿ).

ಮಕ್ಕಳ ದಿನಾಚರಣೆ ರಾಜ್ಯ ಪ್ರಶಸ್ತಿ (₹ 25,000): ಡಾ.ರೇಖಾ ರಾಜೇಂದ್ರಕುಮಾರ್, ನಾಗರಭಾವಿ, ಬೆಂಗಳೂರು; ಡಾ.ಪಿ. ಅನಂತಕೃಷ್ಣ ಭಟ್, ಕೊಡಿಯಾಲ್ಬೈಲ್, ಮಂಗಳೂರು; ರಾಜುಗೌಡ ಅಪ್ಪಾಸಾಬ್ ಗೌರಾಯಿ, ಪಟ್ಟನಕುಡಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಮತ್ತು ಸತೀಶ್ ಫರ್ನಾಂಡಿಸ್, ವಿಮುಕ್ತಿ ಚಾರಿಟಬಲ್ ಟ್ರಸ್ಟ್, ಪೋತ್ನಾಳ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.