ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಿಎಸ್‌ವೈ ಬದಲಾವಣೆ ಅಸಂಭವ: ಆರ್‌. ಅಶೋಕ

Last Updated 14 ಸೆಪ್ಟೆಂಬರ್ 2020, 11:47 IST
ಅಕ್ಷರ ಗಾತ್ರ

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಯಾವುದೇ ಸಂಶಯ ಬೇಡ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕಾರಣದಲ್ಲಿ ನುರಿತಿರುವ ಅವರು ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸುವ ಜಾಣ್ಮೆ ಅವರಿಗಿದೆ ಎಂದರು.

ಅವರರಿಗೇ ವೇಗವಾಗಿ ಬೌಲ್‌ ಮಾಡಲಿ, ವೈಡ್‌, ಸ್ಪಿನ್‌ಯಾವುದೇ ರೀತಿಯ ಬಾಲ್‌ ಹಾಕಿದರೂ ಸರಿ ಫೋರ್‌, ಸಿಕ್ಸ್‌ ಹೊಡೆಯುವ ತಾಕತ್ತು ಅವರಿಗಿದೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಯವರ ಪರಮಾಧಿಕಾರ. ಸಮಯ ಸಂದರ್ಭ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದವರನ್ನು ಕೈಬಿಡುವ ಪ್ರಶ್ನೆ ಇಲ್ಲ. ಅವರನ್ನು ಸಚಿವರನ್ನು ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು ಉಸ್ತುವಾರಿ ಕುರಿತು ಮಾತನಾಡಿದ ಅವರು, ಬೆಂಗಳೂರು ನಗರ ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸಿಲ್ಲ. ಮುಖ್ಯಮಂತ್ರಿಯವರೇ ಬೆಂಗಳೂರು ನಗರದ ಉಸ್ತುವಾರಿವಹಿಸಿದ್ದಾರೆ. ಸಚಿವರ ಮಧ್ಯೆ ಯಾವುದೇ ಪೈಪೋಟಿ ಇಲ್ಲ. ಈ ಬಗ್ಗೆ ತಪ್ಪು ಕಲ್ಪನೆ ಬೇಕಿಲ್ಲ ಎಂದು ಅವರು ಹೇಳಿದರು.

ಫೋಟೊ ತೆಗೆಸಿಕೊಳ್ಳುತ್ತಾರೆ

ಸಾರ್ವಜನಿಕ ಜೀವನದಲ್ಲಿ ಇದ್ದಾಗ, ಕೆಲವರು ಬಂದು ಫೋಟೊ ತೆಗೆಸಿಕೊಳ್ಳುತ್ತಾರೆ. ನಾವು ನಿರಾಕರಿಸಿದರೆ, ಅಹಂಕಾರ ಎಂದು ಭಾವಿಸುತ್ತಾರೆ. ಅದೇ ರೀತಿ ನಟಿ ರಾಗಿಣಿ ಕೂಡ ಕಾರ್ಯಕ್ರಮವೊಂದರಲ್ಲಿ ಫೋಟೊ ತೆಗೆಸಿಕೊಂಡಿದ್ದರು. ರಾಹುಲ್‌ ಅವರ ಜತೆ ಜನ್ಮದಿನವೊಂದರಲ್ಲಿ ಭಾಗವಹಿಸಿದಾಗ ಚಿತ್ರ ತೆಗೆಸಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಿನ ಸಂಬಂಧ ಅವರ ಜತೆಗಿಲ್ಲ ಎಂದು ಅಶೋಕ ಹೇಳಿದರು.

ಮುಸ್ಲಿಂ ನಾಯಕರಾಗಬೇಕು ಎಂದು ಹೊರಟಿರುವ ಜಮೀರ್‌ ಅಹಮದ್‌ ಅವರು ಎಲ್ಲ ಕಡೆ ಇರುತ್ತಾರೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಪಾದರಾಯನಪುರ ಎಲ್ಲ ಕಡೆಯೂ ಕಾಣಿಸಿಕೊಳ್ಳುತ್ತಾರೆ. ಕ್ಯಾಸಿನೊ, ಇಸ್ಪಿಟ್‌ಗಳ ಬಗ್ಗೆ ಗೊತ್ತಿಲ್ಲ. ಇಸ್ಪಿಟ್‌ ಎಲೆಯನ್ನೇ ಸರಿಯಾಗಿ ನೋಡಿಲ್ಲ. ಇನ್ನು ಕ್ಯಾಸಿನೊಗೆ ಹೋಗುವುದು ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT