ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಕ್ರೋಶ ಸಮಾವೇಶ: ರಾಮ ನಿಮಗಾಗಿ ಹುಟ್ಟಿಲ್ಲ, ಎಲ್ಲರಿಗೂ ದೇವರೆ- ಜಿ. ಪರಮೇಶ್ವರ್

Last Updated 13 ಮಾರ್ಚ್ 2021, 14:21 IST
ಅಕ್ಷರ ಗಾತ್ರ

ಶಿವಮೊಗ್ಗ:ಶ್ರೀರಾಮ ನಿಮಗಾಗಿ ಹುಟ್ಟಿಲ್ಲ. ಎಲ್ಲರಿಗೂ ದೇವರೆ.ಹಿಂದೆ ಸಂಗ್ರಹಿಸಿದ್ದ ಇಟ್ಟಿಗೆ- ಹಣ ಎಲ್ಲಿ ಹೋಯಿತು. ಶ್ರೀರಾಮನ ಹೆಸರು ಹೇಳಿಕೊಂಡು ಮತ್ತೆ ಮತ್ತೆ ಮೋಸ ಮಾಡಲಾಗುತ್ತಿದೆ. ಬಜೆಟ್ ಹಣ ದುರುಪಯೋಗವಾಗುತ್ತಿದೆ ಎಂದುಶಾಸಕ ಡಾ. ಜಿ. ಪರಮೇಶ್ವರ್ ಹೇಳಿದರು.

ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಶನಿವಾರ ನಡೆದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿ,ಸೋಷಿಯಲ್ ಮೀಡಿಯಾ ಪ್ರಸಾರಕ್ಕೆ ಅಡ್ಡಿ ಏಕೆ? ಪೆಟ್ರೋಲ್ ಡೀಸೆಲ್ ದರ ಹೆಚ್ಚಾಗಿದೆ. ಕೃಷಿ ಕಾನೂನು ರೈತರಿಗೆ ಮಾರಕವಾಗಿವೆ ಎಂದು ದೂರಿದರು.

ಆಡಳಿತ ನಡೆಸುವವರಿಗೆ ಲಜ್ಜೆ ಬೇಡವಾ

ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಳೆದ 105 ದಿನಗಳಿಂದ ನಡೆಯುತ್ತಿರುವ ರೈತ ಹೋರಾಟದಲ್ಲಿ 200 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದು ಮಾಧ್ಯಮಗಳಿಗೆ ಸುದ್ದಿ ಎನಿಸಲಿಲ್ಲ. ನಿಮ್ಮ ಕಾಳಜಿಗೆ ನನ್ನ ಶಿರಸಾಷ್ಟಾಂಗ‌ ನಮಸ್ಕಾರ. ಆಡಳಿತ ನಡೆಸುವವರಿಗೆ ಲಜ್ಜೆ ಬೇಡವಾ. ಬಡವರ ತೆರಿಗೆ ಹಣದಲ್ಲಿ ನಿಮಗೆ ಸಂಬಳ. ನೀವು ಕಾಂಗ್ರೆಸ್ ಬಿಜೆಪಿ ಪೊಲೀಸರಲ್ಲ. ನಿಮಗೆ ಸ್ವಾಭಿಮಾನ‌ ಇಲ್ಲವೆ ಎಂದು ಪ್ರಶ್ನಿಸಿದರು.

ಎಸ್‌ಐಟಿಗೆ ಪ್ರಕರಣ ದಾಖಲಿಸುವ ಅಧಿಕಾರ ಇಲ್ಲ. ನ್ಯಾಯಾಲಯದ ಸೂಚನೆ ಮೇರೆಗೆ ದಾಖಲಿಸಬೇಕಿತ್ತು. ನಮ್ಮೆಲ್ಲರ ಸೌಭಾಗ್ಯ. ಚಪ್ಪಾಳೆ ತಟ್ಟಿ ದೀಪಾ ಹಚ್ಚಿ ಕೊರೊನಾ ಓಡಿಹೋಗುತ್ತೆ ಎನ್ನುವ ನಾಯಕರು ಸಿಕ್ಕಿದ್ದಾರೆ. ಧರ್ಮದ ಹೆಸರಲ್ಲಿ, ಜಾತಿ-ಹಿಂಸೆ ಹೆಸರಲ್ಲಿ ಎಷ್ಟು ದಿನ ರಾಜ್ಯ ದೇಶ ಆಳಲು ಸಾಧ್ಯ. ಯಾವಾಗ ಅಚ್ಚೇ ದಿನ್ ಬರೋದು. ದೌರ್ಜನ್ಯವನ್ನೇ ಬಂಡವಾಳ ಮಾಡಿಕೊಂಡವರು ಇತಿಹಾಸದಲ್ಲಿ ಯಾರೂ ಉಳಿದಿಲ್ಲ.‌ ಜನರೇ ಶಕ್ತಿ, ಜನರು ಅಂತಿಮ‌ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಶನಿವಾರ ನಡೆದ ಜನಾಕ್ರೋಶ ಸಮಾವೇಶ
ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಶನಿವಾರ ನಡೆದ ಜನಾಕ್ರೋಶ ಸಮಾವೇಶ

ಇಂದಿನ ಹೋರಾಟ ಇತಿಹಾಸದ ಪುಟ ಸೇರಲಿದೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದ ಎಲ್ಲ ಕಾರ್ಯಕರ್ತರ ರಕ್ಷಣೆಗೆ ಈ ಸಂದೇಶ. ಐಟಿ ದಾಳಿ, ಸಿಬಿಐ, ಇಡಿ ದಾಳಿ ಬಂಧನವಾಯಿತು. ನಿಮ್ಮ ಹೋರಾಟದ ಫಲವಾಗಿ ಮತ್ತೆ ನಿಮ್ಮ‌ ಮುಂದೆ ಬಂದಿರುವೆ. ಮಧು ಬಂಗಾರಪ್ಪ ಭೇಟಿ ಮಾಡಿದರು. ಕಾಂಗ್ರೆಸ್ಸಿಗೆ ಅವರನ್ನು‌ ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಇಂದಿನ ಹೋರಾಟ ಇತಿಹಾಸದ ಪುಟ ಸೇರಲಿದೆ. ರಾಜ್ಯದ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಶಿವಮೊಗ್ಗ ಕಾರ್ಯಕರ್ತರಿಗೆ ಶಕ್ತಿ ತುಂಬಲು‌ ಬಂದಿದ್ದಾರೆ ಎಂದರು.

ಪೊಲೀಸರು ಕಾನೂನು‌ ಚೌಕಟ್ಟಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಕೊರೊನಾ ಸಮಯದಲ್ಲೂ ಜನರಿಗೆ ಉಪಕಾರ ಮಾಡಲಿಲ್ಲ. ಹಾಸಿಗೆ ದಿಂಬಿನಲ್ಲೇ ಸಾವಿರಾರು ಕೋಟಿ‌ ಲೂಟಿ ಮಾಡಿದ್ದಾರೆ. ಈಶ್ವರಪ್ಪ‌, ಕಟೀಲ್ ಅವರೇ ನೀವು ಯಾವ ಲೆಕ್ಕ. ಕೇಳಿಸಿಕೊಳ್ಳಿ ಕಾರ್ಯಕರ್ತರು‌ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ.ಏನಾರ ಮಾಡಿ ಡಿಕೆ ಸಿಗಿಸಲು‌ ಸಂಚು ಮಾಡುತ್ತಿದ್ದಾರೆ.‌ ಸಮಯ ಬಂದಾಗ ಎಲ್ಲ ಬಿಚ್ಚುತ್ತೇವೆ.‌ ಯಾರಿಗೂ ಹೆದರೋ ಮಗ‌ ಅಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಜನಾಕ್ರೋಶ ಸಮಾವೇಶ ನಡೆಯಿತು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಹಾಗೂ ಅವರ ಕುಟುಂಬ, ಕಾಂಗ್ರೆಸ್ ಮುಖಂಡರ ಮೇಲಿನ ಹಲ್ಲೆ ಖಂಡಿಸಿ ಮುಖ್ಯ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನದವರೆಗೆ ಜಾಥಾ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT