ಸೋಮವಾರ, ಜೂನ್ 27, 2022
24 °C

ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಜೆ.ಎಂ.ಎಸ್.‌ ಮಣಿ ನಿಧನ

ಪ್ರಜಾವಣಿ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ನಾಡಿನ ಪ್ರಸಿದ್ಧ ಕಲಾವಿದ ಜೆ.ಎಂ.ಎಸ್. ಮಣಿ (72) ಅವರು ಗುರುವಾರ ನಿಧನರಾಗಿದ್ದಾರೆ.

ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಶೇಷಾದ್ರಿಪುರದಲ್ಲಿ ನೆಲೆಸಿದ್ದ ಅವರು,  ತಮ್ಮ ನಿವಾಸದಲ್ಲಿಯೇ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 

1949ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಮಣಿ ಅವರು, ಬಾಲ್ಯದಿಂದಲೂ ಚಿತ್ರ ರಚನೆಯ ಬಗ್ಗೆ ಒಲವು ಹೊಂದಿದ್ದರು. ವರ್ಣ ಚಿತ್ರಗಳ ಕಲಾವಿದರಾಗಿ ಹೆಸರು ಮಾಡಿದ ಅವರು, ಕಲಾ ಗುರುವಾಗಿ ನಾಡಿನಾದ್ಯಂತ ಜನಪ್ರಿಯರಾದರು.

ನಾಡಿನ ಪ್ರಸಿದ್ಧ ಕೆನ್ ಕಲಾ ಶಾಲೆ ಯಲ್ಲಿ ಸೇವೆ ಸಲ್ಲಿಸುತ್ತಾ ಸಾವಿರಾರು ಕಲಾವಿದರನ್ನು ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಎರಡು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಣಿ ಅವರು, ದೇಶಾದ್ಯಂತ ತಮ್ಮ ಕಲಾಪ್ರದರ್ಶನ ನಡೆಸಿದ್ದರು. ನ್ಯೂಯಾರ್ಕ್, ಲಂಡನ್, ಹಾಂಕಾಂಗ್ ಗಳಲ್ಲೂ ಅವರ ಚಿತ್ರಕಲಾ ಪ್ರದರ್ಶನಗಳು  ನಡೆದಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು