ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live| ಉಪಚುನಾವಣೆ ಫಲಿತಾಂಶ: ಶ್ರೀನಿವಾಸ ಮಾನೆ ಕೈ ಹಿಡಿದ ಹಾನಗಲ್‌ ಜನ, ಭೂಸನೂರಗೆ ಸಿಂದಗಿಯಲ್ಲಿ ಭರ್ಜರಿ ಜಯ
LIVE

ಸಿಂದಗಿ ಹಾಗೂ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡು ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬಂತು. ವಿಜಯಪುರ ನಗರದ ಸೈನಿಕ ಶಾಲೆಯ ‘ಒಡೆಯರ ಹೌಸ್’ನಲ್ಲಿ ಸಿಂದಗಿ ಕ್ಷೇತ್ರದ ಮತ ಎಣಿಕೆ ನಡೆಯಿತು. ಒಟ್ಟು 22 ಸುತ್ತು ಮತ ಎಣಿಕೆಯ ಪೈಕಿ ಎಲ್ಲ ಸುತ್ತುಗಳಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡು, ಅಂತಿಮವಾಗಿ ರಮೇಶ ಭೂಸನೂರ 31,088 ಮತಗಳ ಅಂತರದ ಗೆಲುವು ಸಾಧಿಸಿದರು. ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹಾನಗಲ್‌ ಕ್ಷೇತ್ರದ ಮತ ಎಣಿಕೆ ನಡೆಸಲಾಯಿತು. ಕಾಂಗ್ರೆಸ್‌ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದಾರೆ.
Last Updated 2 ನವೆಂಬರ್ 2021, 10:17 IST
ಅಕ್ಷರ ಗಾತ್ರ
10:1602 Nov 2021

ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿಗೆ ಮಿಶ್ರ ಫಲಿತಾಂಶ ಲಭಿಸಿದೆ. ಜನಾದೇಶವನ್ನು ಸ್ವೀಕಾರ ಮಾಡುತ್ತೇವೆ: ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ

09:5802 Nov 2021

ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಹಿನ್ನಡೆಯ ನಿರೀಕ್ಷೆ ಇರಲಿಲ್ಲ. ಈ ಬಗ್ಗೆ ಎಲ್ಲ ನಾಯಕರೂ ಕುಳಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ: ಬಿ.ಎಸ್‌.ಯಡಿಯೂರಪ್ಪ

09:5702 Nov 2021

ಜೆಡಿಎಸ್‌ ಪಕ್ಷವು ಬಿಜೆಪಿಯ ‘ಬಿ ಟೀಮ್‌’ ಎಂದು ಕಾಂಗ್ರೆಸ್‌ ನಾಯಕರು ನಡೆಸಿದ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ಉತ್ತರ: ಎಚ್.‌ಡಿ.ಕುಮಾರಸ್ವಾಮಿ 

08:5202 Nov 2021

ಹಾನಗಲ್ ಉಪಚುನಾವಣೆ ಮತ ಎಣಿಕೆ ಪೂರ್ಣ: ಕಾಂಗ್ರೆಸ್‌ಗೆ ಗೆಲುವು

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು 7,598 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

'ಸಿಎಂ ತವರು ಜಿಲ್ಲೆಯ' ಹಾನಗಲ್ ಕ್ಷೇತ್ರದಲ್ಲಿ ಗೆದ್ದೇ ತೀರುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.

"ಆಪತ್ಬಾಂಧವ" ಎಂಬ ಬಿರುದಿಗೆ ಪಾತ್ರರಾಗಿದ್ದ ಶ್ರೀನಿವಾಸ ಮಾನೆ ಅವರ ಗೆಲುವಿಗೆ ಕೋವಿಡ್ ಕಾಲದಲ್ಲಿ ಜನರಿಗೆ ಸ್ಪಂದನೆ ಹಾಗೂ ಕಾಂಗ್ರೆಸ್ ಸರ್ಕಾರದ 'ಭಾಗ್ಯಗಳ ಯೋಜನೆ' ಸಹಕಾರಿಯಾಗಿವೆ ಎನ್ನಲಾಗುತ್ತಿದೆ.

08:4602 Nov 2021

ಹಾನಗಲ್ ಉಪಚುನಾವಣೆ: ಶ್ರೀನಿವಾಸ ಮಾನೆಗೆ 7,598 ಮತಗಳ ಮುನ್ನಡೆ

ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (19 ಸುತ್ತು ಸೇರಿ)

ಬಿಜೆಪಿ- ಶಿವರಾಜ ಸಜ್ಜನರ- 79,515

ಕಾಂಗ್ರೆಸ್- ಶ್ರೀನಿವಾಸ ಮಾನೆ- 87,113

ಜೆಡಿಎಸ್- ನಿಯಾಜ್ ಶೇಖ್- 921

ಕಾಂಗ್ರೆಸ್‌ಗೆ 7,598 ಮತಗಳ ಮುನ್ನಡೆ

08:3802 Nov 2021

ಹಾನಗಲ್‌ ಉಪಚುನಾವಣೆ: ಗೆಲುವಿನ ಹಾದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ

ಹಾನಗಲ್‌ ಕ್ಷೇತ್ರ: ಕಡೆಯ ಒಂದು ಸುತ್ತು (19ನೇ) ಬಾಕಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಗೆಲುವು ಬಹುತೇಕ ಖಚಿತವಾಗಿದೆ. ಹಾವೇರಿ ನಗರ ಮತ್ತು ಹಾನಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ, ಹರ್ಷೋದ್ಗಾರ, ಜೈಕಾರ ಮೊಳಗುತ್ತಿದೆ.

08:3502 Nov 2021

ಅಭ್ಯರ್ಥಿ ಬಗ್ಗೆ ಅಪಸ್ವರವಿತ್ತೋ ಗೊತ್ತಿಲ್ಲ: ಮುನೇನಕೊಪ್ಪ

ಹುಬ್ಬಳ್ಳಿ: ಹಾನಗಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ದುರ್ಬಲರಾಗಿದ್ದರೋ ಅಥವಾ ಅವರ ಬಗ್ಗೆ ಕ್ಷೇತ್ರದಲ್ಲಿ ಅಪಸ್ವರವಿತ್ತೋ ಗೊತ್ತಿಲ್ಲ. ಆದರೆ, ಮತದಾರರ ನಿರ್ಣಯಕ್ಕೆ ತಲೆ ಬಾಗುತ್ತೇವೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

08:3402 Nov 2021

ಹಾನಗಲ್ ಉಪಚುನಾವಣೆ: ಕಾಂಗ್ರೆಸ್‌ ಗೆಲವು ಖಚಿತ

ಹಾನಗಲ್ ಉಪಚುನಾವಣೆ: ಇದುವರೆಗಿನ ಒಟ್ಟು ಫಲಿತಾಂಶ (18 ಸುತ್ತು ಸೇರಿ)

ಬಿಜೆಪಿ- ಶಿವರಾಜ ಸಜ್ಜನರ- 75,999

ಕಾಂಗ್ರೆಸ್- ಶ್ರೀನಿವಾಸ ಮಾನೆ- 83,324

ಜೆಡಿಎಸ್- ನಿಯಾಜ್ ಶೇಖ್- 866

ಕಾಂಗ್ರೆಸ್‌ಗೆ  7,325 ಮತಗಳ ಮುನ್ನಡೆ

08:1902 Nov 2021

ಹಾನಗಲ್ ಉಪಚುನಾವಣೆ: 16ನೇ ಸುತ್ತಿನ ಎಣಿಕೆಯಲ್ಲಿ ಕಾಂಗ್ರೆಸ್‌ 6,828 ಮತಗಳ ಮುನ್ನಡೆ

ಹಾನಗಲ್ ಉಪಚುನಾವಣೆ: 16ನೇ ಸುತ್ತಿನ ಮತ ಎಣಿಕೆ

6828 ಮತಗಳಿಂದ ಕಾಂಗ್ರೆಸ್ ಮುನ್ನಡೆ

ಬಿಜೆಪಿ: 66,622

ಕಾಂಗ್ರೆಸ್: 73,450

ಜೆಡಿಎಸ್: 767

07:4502 Nov 2021

ಸಿಂದಗಿ ಉಪಚುನಾವಣೆ: ಕೊನೆವರೆಗೂ ಎಲ್ಲ ಸುತ್ತುಗಳಲ್ಲೂ ಬಿಜೆಪಿ ಮುನ್ನಡೆ


ಸಿಂದಗಿ ವಿಧಾನಸಭಾ ಉಪ ಚುನಾವಣೆ 22ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗಿಂತ 31,088 ಮತಗಳಿಂದ ಜಯ ಗಳಿಸಿದ್ದಾರೆ.
 
ಅಭ್ಯರ್ಥಿಗಳು ಪಡೆದ ಮತಗಳ ವಿವರ (22 ಸುತ್ತು ಸೇರಿ)

*ಅಶೋಕ ಮನಗೂಳಿ (ಕಾಂಗ್ರೆಸ್): 62,292

*ರಮೇಶ ಭೂಸನೂರ (ಬಿಜೆಪಿ): 93,380

*ನಾಜಿಯಾ ಅಂಗಡಿ (ಜೆಡಿಎಸ್): 4321