ಭಾನುವಾರ, ಜೂನ್ 26, 2022
25 °C

ಕಾಂಗ್ರೆಸ್‌ನಲ್ಲಿ ಯೌವನ ನಿರ್ಧಾರವಾಗುವುದು 50 ವರ್ಷದ ನಂತರವೇ: ಬಿಜೆಪಿ ಪ್ರಶ್ನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ  ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಚಿಂತನಾ ಶಿಬಿರದ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ ಮುನ್ಸೂಚನೆ ನೀಡಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿರುವ ಯುವ ನಾಯಕರು ಯಾರು? ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50ರ ನಂತರವೇ’ ಎಂದು ಟೀಕಿಸಿದೆ. 

‘ಕಾಂಗ್ರೆಸ್ ಚಿಂತನಾ ಶಿಬಿರದಲ್ಲೇನೋ ವಯೋನಿವೃತ್ತಿಯ ಪ್ರಸ್ತಾಪವಾಗಿದೆ. ಆದರೆ ಯಾವಾಗ?. 70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ ‘ಯಯಾತಿ’ಗಳ ಮೋಹ ಕಳಚುವುದೇ’ ಎಂದು #ನಕಲಿಗಾಂಧಿಕುಟುಂಬಪುನಶ್ಚೇತನಾಶಿಬಿರ ಎಂಬ ಹ್ಯಾಷ್‌ಟ್ಯಾಗ್‌ ಉಲ್ಲೇಖಿಸಿ ಬಿಜೆಪಿ ಕಿಡಿಕಾರಿದೆ. 

ಓದಿ... ದೇಶದ ಎಲ್ಲ ಭಾಷೆಗಳು ಪೂಜನೀಯ: ಪ್ರಧಾನಿ ಮೋದಿ ಮಾತಿಗೆ ಕಿಚ್ಚ ಸುದೀಪ್ ಹೇಳಿದ್ದೇನು?

‘ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಈಗ 60+, ಚಿಂತನಾ ಶಿಬಿರದಲ್ಲಿ ಶೇ 50ರಷ್ಟು ಕ್ಷೇತ್ರಗಳನ್ನು 50 ವರ್ಷದೊಳಗಿನವರಿಗೆ ನೀಡಬೇಕೆಂದು ಕಾಂಗ್ರೆಸ್‌ ಸಂಕಲ್ಪ ಮಾಡಿದೆ. ಈ ನಿಯಮವನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದಲ್ಲಿ ಕಾಂಗ್ರೆಸ್‌ 60+ ನಿಂದ 30+ ಗೆ ಕ್ಕೆ ಇಳಿಯುವುದು ನಿಶ್ಚಿತ’ ಎಂದು ಬಿಜೆಪಿ ಲೇವಡಿ ಮಾಡಿದೆ. 

‘ಒಂದು ಮನೆಯಿಂದ ಒಬ್ಬರಿಗೆ ಟಿಕೆಟ್ ಎಂಬುದು ಕಾಂಗ್ರೆಸ್‌ ಪಕ್ಷದ ಹೊಸ ನಾಟಕ. ನಕಲಿ ಗಾಂಧಿ ಕುಟುಂಬಿಕರಿಗೆ ಮತ್ತು ಅವರ ಪಾದ ಪೂಜಕರಿಗೆ ಅನ್ವಯವಾಗುವುದಿಲ್ಲ ಎಂಬ ಷರತ್ತು ಅಳವಡಿಸಿರುವುದು ಅವರ ಬೂಟಾಟಿಕೆಗೆ ಸಾಕ್ಷಿ. 70 ಮೇಲ್ಪಟ್ಟವರಿಗೆ ಟಿಕೆಟ್ ನೀಡದ ಹೊಸ ನಿಯಮವೂ ಇವರಾರಿಗೂ ಅನ್ವಯವಾಗದು’ ಎಂದು ಬಿಜೆಪಿ ಗುಡುಗಿದೆ. 

ಓದಿ... ಅತ್ಯಾಚಾರ ನಿಲ್ಲಿಸಿ: ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್ ಮಹಿಳೆ ಪ್ರತಿಭಟನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು