ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ನೆಹರೂ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಪಿತಾಮಹ: ಬಿಜೆಪಿ ಟೀಕೆ

ಅಕ್ಷರ ಗಾತ್ರ

ಬೆಂಗಳೂರು: ‘ಭಾರತಕ್ಕೆ ನೆಹರೂ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಆದ್ಯ ಪಿತಾಮಹ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಕುಟುಂಬ ರಾಜಕಾರಣ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಜನತಾ ಪರಿವಾರ ಎಂದರೆ ಈಗ ದೇವೇಗೌಡ & ಸನ್ಸ್‌ ಪ್ರೈವೇಟ್ ಲಿಮಿಟೆಡ್‌ ಎಂಬಂತಾಗಿದೆ. ಭಾರತಕ್ಕೆ ನೆಹರು ಕುಟುಂಬವಾದದ ಪಿತಾಮಹರಾದರೆ, ಕರ್ನಾಟಕಕ್ಕೆ ದೇವೇಗೌಡರೇ ಕುಟುಂಬವಾದದ ಆದ್ಯ ಪಿತಾಮಹ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಕುಟುಂಬವಾದದ ಬಹುದೊಡ್ಡ ಫಲಾನುಭವಿ’ ಎಂದು ಕಿಡಿಕಾರಿದೆ.

‘123 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದು ಬೀಗುವ ಮಾಜಿ ಸಿಎಂ ಕುಮಾರಸ್ವಾಮಿ ಅವರೇ, 123 ಕ್ಷೇತ್ರಗಳಿಗೆ ನಿಮ್ಮ ಪಕ್ಷದಿಂದ ಅಭ್ಯರ್ಥಿಗಳು ಸಿಗಬಹುದೇ? ನಿಮ್ಮ ವಂಶಾಡಳಿತದಿಂದ ಬೇಸತ್ತು ವಲಸೆ ಹೋಗುವವರ ಸಂಖ್ಯೆಯೇ‌ ಇದರ ಕಾಲು ಭಾಗದಷ್ಟಿದೆ. ಹೀಗಿರುವಾಗ ಜೆಡಿಎಸ್‌ ನಾಮಾವಶೇಷವಾಗುವುದರಲ್ಲಿ ಸಂಶಯವಿದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕುಮಾರಸ್ವಾಮಿ ಅವರೇ, ನಿಮ್ಮ ಪಂಚರತ್ನ ಕಾರ್ಯಕ್ರಮಕ್ಕೆ ಶುಭವಾಗಲಿ. ಆದರೆ ಜೆಡಿಎಸ್ ಪಕ್ಷದ ಪಂಚರತ್ನ ಎಂದರೆ ಜನ ಬೇರೆಯದೇ ಮಾತನಾಡುತ್ತಾರೆ. 1) ದೇವೇಗೌಡ 2) ರೇವಣ್ಣ 3) ಕುಮಾರಸ್ವಾಮಿ 4) ಪ್ರಜ್ವಲ್ ರೇವಣ್ಣ 5) ನಿಖಿಲ್ ಕುಮಾರಸ್ವಾಮಿ ಇವರೇ ಜೆಡಿಎಸ್ ಪಂಚರತ್ನಗಳು. ಐದು ಕ್ಷೇತ್ರದ ಗೆಲುವೇ ಪಂಚರತ್ನ ಯೋಜನೆಯೇ’ ಎಂದು ಬಿಜೆಪಿ ಗುಡುಗಿದೆ.

ಜೆಡಿಎಸ್‌ ಪಕ್ಷ ಹೇಳಿಕೊಳ್ಳುತ್ತಿರುವ ಮಿಷನ್‌ 123 ವಾಸ್ತವದಲ್ಲಿ ಮಿಷನ್‌ 123 ಅಲ್ಲ, ಅದು ಮಿಷನ್ 1+2+3!

1) ದೇವೇಗೌಡ
2) ಕುಮಾರ ಸ್ವಾಮಿ, ರೇವಣ್ಣ
3) ಅನಿತಾ, ಪ್ರಜ್ವಲ್‌, ಸೂರಜ್

1+2+3=6, ಅಂದರೆ ದೇವೇಗೌಡ ಕುಟುಂಬದ ಗೆಲುವೇ ಪಕ್ಷದ ಗೆಲುವೇ? ಇದು ಕುಟುಂಬವಾದ ಅಲ್ಲದೆ ಮತ್ತೇನು? #LuckyDipCmHDK ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಜೆಡಿಎಸ್‌ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT