ಮಂಗಳವಾರ, ಅಕ್ಟೋಬರ್ 26, 2021
23 °C

ಬಿಜೆಪಿಯದ್ದು ಪ್ರಜೆಗಳನ್ನು ಹತ್ಯೆ ಮಾಡುವ ಉಗ್ರ ಮನಸ್ಥಿತಿ: ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರ ಪ್ರದೇಶದ ಲಖಿಂಪುರ ಘಟನೆಗೆ ಸಂಬಂಧಿಸಿ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ್ದು ಪ್ರಜೆಗಳನ್ನು ಹತ್ಯೆ ಮಾಡುವ ಉಗ್ರ ಮನಸ್ಥಿತಿ ಎಂದು ಟೀಕಿಸಿದೆ.

‘ಅಸಹಿಷ್ಣ ಬಿಜೆಪಿಯು ತನ್ನ ಅನೀತಿಯನ್ನು ವಿರೋಧಿಸುವ ಪ್ರಜೆಗಳನ್ನು ಹತ್ಯೆ ಮಾಡುವ ಉಗ್ರ ಮನಸ್ಥಿತಿಯನ್ನು ಹೊಂದಿದೆ. ಹಿಂದೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು 'ಗೋಲಿ ಮಾರೋ' ಎಂದಿದ್ದರು. ಈಗ ಹರಿಯಾಣ ಮುಖ್ಯಮಂತ್ರಿ ರೈತರನ್ನು ಹೊಡೆಯಿರಿ, ಬಡಿಯಿರಿ ಎಂದು ಹೇಳಿದ್ದಾರೆ. ಇದು ಬಿಜೆಪಿಯ ಭಯೋತ್ಪಾದಕ ಮನಸ್ಥಿತಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದಕ್ಕೂ ಮುನ್ನ ಲಖಿಂಪುರ ಘಟನೆಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯುಳ್ಳ ವಿಡಿಯೊಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಅದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ನಕಲಿ ಗಾಂಧಿ ಕುಟುಂಬದವರಿಗೆ ಅನ್ನದಾತರ ನೋವಿನ ಬಗ್ಗೆ ನೈಜ ಕಾಳಜಿ ಇದೆಯೇ ಎಂದು ಪ್ರಶ್ನಿಸಿತ್ತು. ಜತೆಗೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೈತರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದ ವಿಡಿಯೊವನ್ನು ಟ್ವೀಟ್ ಮಾಡಿತ್ತು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು