ಶನಿವಾರ, ಮೇ 28, 2022
31 °C

Karnataka Covid Updates: 213 ಹೊಸ ಪ್ರಕರಣ, ಐವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 213 ಕೊರೊನಾ ಸೋಂಕಿತ ಹೊಸ ಪ್ರಕರಣಗಳು ವರದಿಯಾಗಿವೆ. ಮಾರಕ ಸೋಂಕಿಗೆ ಐವರು ಮೃತಪಟ್ಟಿದ್ದಾರೆ.

ಈ ದಿನ ಸೋಂಕಿನಿಂದ 370 ಜನ ಚೇತರಿಸಿಕೊಂಡಿದ್ದು, ಇನ್ನೂ 7096 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ರಾಜ್ಯದಲ್ಲಿ ಕೋವಿಡ್‌ನಿಂದಾಗಿ 38,174 ಜನ ಮೃತಪಟ್ಟಂತಾಗಿದೆ.

ಇದುವರೆಗೆ ರಾಜ್ಯದಲ್ಲಿ 29,93,352 ಜನಕ್ಕೆ ಸೋಂಕು ತಗುಲಿದೆ. ಶೇಕಡಾವಾರು ಸೋಂಕಿನ ಪ್ರಮಾಣ ಶೇ 0.26 ರಲ್ಲಿದ್ದರೇ,ಶೇಕಡಾವಾರು ಮರಣ ಪ್ರಮಾಣ ಶೇ 2.34 ರಷ್ಟಿದೆ.

ಕರ್ನಾಟಕದಲ್ಲಿ ಇದುವರೆಗೆ 7,01,55,292 ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು