ಬೆಂಗಳೂರು: ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಡ್ರಾ ಫಲಿತಾಂಶ ಕಂಡುಬಂದಿದೆ. ತರುವಾಯ ಲಾಟರಿ ಮೂಲಕ ವಿಜೇತರನ್ನು ಘೋಷಿಸಲಾಯಿತು.

ಇದು ಗ್ರಾಮ ಪಂಚಾಯಿತಿ ಚುನಾವಣೆಯ ರೋಚಕತೆಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತವರು ಬೂಕನಕೆರೆ ಸೇರಿದಂತೆ ಮಂಡ್ಯ, ತಿಪಟೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಡ್ರಾ ಫಲಿತಾಂಶಗಳು ದಾಖಲಾಗಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆ LIVE ಅಪ್ಡೇಟ್

ಬಿಎಸ್ವೈ ತವರು ಬೂಕನಕೆರೆ ಫಲಿತಾಂಶ ಡ್ರಾ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೂಕನಕೆರೆ ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿ ಸರಿಸಮನಾದ ಮತ ಪಡೆದಿದ್ದರಿಂದ ಫಲಿತಾಂಶ ಡ್ರಾ ಆಗಿತ್ತು. ಬಳಿಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಲಾಟರಿ ಮೂಲಕ ಜಯ ಸಾಧಿಸಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ 183 ಮತಗಳನ್ನು ಪಡೆದಿದ್ದರು. ಬಳಿಕ ಚುನಾವಣಾ ಅಧಿಕಾರಿಗಳು ಲಾಟರಿ ಮೂಲಕ ಫಲಿತಾಂಶ ನಿರ್ಧರಿಸಿದ್ದಾರೆ. ಇದರಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಗೆಲುವು ಸಾಧಿಸಿದ್ದಾರೆ.

ತುರುವೇಕೆರೆ: ಲಾಟರಿ ಮೂಲಕ ಗೆಲುವು

ತಾಲ್ಲೂಕಿನ ಕಣತೂರು ಗ್ರಾಮ ಪಂಚಾಯಿತಿಯಲ್ಲಿ ಎ.ಬಿ.ತ್ಯಾಗರಾಜು ಲಾಟರಿ ಮೂಲಕ ಗೆಲವು ಪಡೆದಿದ್ದಾರೆ. ಮೋಹನ್ ಮತ್ತು ಎ.ಬಿ.ತ್ಯಾಗರಾಜು ಇಬ್ಬರೂ ತಲಾ 133 ಮತ ಪಡೆದಿದ್ದರು. ಲಾಟರಿಯಲ್ಲಿ ಗೆಲುವು ಒಲಿದು ಬಂತು.

ಕೂಡ್ಲಿಗಿ: ಸಮ ಮತಗಳು, ಲಾಟರಿ ನಿರ್ಣಯ

ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರ್ಡ ಸಂಖ್ಯೆ 3ರಲ್ಲಿ ಜ್ಯೋತಿ ವೆಂಕಟೇಶ ಹಾಗೂ ಮಾಲತಿ ರಾಮಸ್ವಾಮಿ ತಲಾ 234 ಮತ ಪಡೆದಿದ್ದಾರೆ. ನಂತರ ನಡೆದ ಮರು ಎಣಿಕೆಯಲ್ಲಿ ಇಬ್ಬರಿಗೂ ಸಮ ಮತವಾಗಿದ್ದವು. ನಂತರ ನಡೆದ ಲಾಟರಿಯಲ್ಲಿ ಜ್ಯೋತಿ ವೆಂಕಟೇಶ ವಿಜೇತರಾಗಿದ್ದಾರೆ.

ಶಿರಾ: ‘ಲಾಟರಿ’ ಗೆಲುವು

ತಾಲ್ಲೂಕಿನ ಹೆಂದೊರೆ ಗ್ರಾಮ ಪಂಚಾಯಿತಿಯ ಸಿದ್ದನಹಳ್ಳಿ ಕ್ಷೇತ್ರದಲ್ಲಿ ಗಿರಿಜಮ್ಮ ಅವರಿಗೆ ಲಾಟರಿಯಲ್ಲಿ ಅದೃಷ್ಟ ಒಲಿದು ಬಂತು. ಗಿರಿಜಮ್ಮ ಮತ್ತು ಸುಧಾ ಇಬ್ಬರು ತಲಾ 283 ಮತಗಳನ್ನು ಪಡೆದು ಸಮಬಲ ಸಾಧಿಸಿದಾಗ ನಂತರ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಟಾಸ್ನಲ್ಲಿ ಗೆದ್ದ ಈರಮ್ಮ

ಚಿಂಚೋಳಿ (ಕಲಬುರ್ಗಿ ಜಿಲ್ಲೆ) ತಾಲ್ಲೂಕಿನ ದೇಗಲಮಡಿ ಗ್ರಾ.ಪಂ.ನಲ್ಲಿ ಇಬ್ಬರು ಅಭ್ಯರ್ಥಿಗಳು ಸಮ ಮತಗಳು ಪಡೆದಿದ್ದರಿಂದ ಟಾಸ್ ಹಾರಿಸಿ ವಿಜೇತರನ್ನು ನಿರ್ಧರಿಸಲಾಯಿತು. ದೇಗಲಮಡಿ ಗ್ರಾಮದ ಈರಮ್ಮ ನಾಗಪ್ಪ ರಾಚೋಟಿ ಮತ್ತು ಚಂದ್ರಕಲಾ ಜಗನ್ನಾಥರೆಡ್ಡಿ ತಲಾ 349 ಮತಗಳು ಪಡೆದಿದ್ದರಿಂದ ಟಾಸ್ ಹಾರಿಸಲಾಯಿತು. ಆಗ ವಿಜಯಮಾಲೆ ಈರಮ್ಮ ನಾಗಪ್ಪ ರಾಚೋಟಿ ಅವರಿಗೆ ಒಲಿಯಿತು.

ಬಾಗಲಕೋಟೆ:
ಇಳಕಲ್ ತಾಲ್ಲೂಕಿನ ಗೊರಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಪಶಾನಿ ಗ್ರಾಮದ ವಾರ್ಡ್ನಲ್ಲಿ ಸ್ಪರ್ಧಿಸಿದ್ದ ಮಹಾಂತೇಶ ಲಾಟರಿ ಬಲದಿಂದ ಗೆಲುವು ಸಾಧಿಸಿದರು. ಮತ ಎಣಿಕೆಯಲ್ಲಿ ಮಹಾಂತೇಶ ಹಾಗೂ ಅವರ ಪ್ರತಿಸ್ಪರ್ಧಿ ಕಳಕಪ್ಪ ಸಮಬಲ (ತಲಾ 88 ಮತಗಳು) ಸಾಧಿಸಿದ್ದರು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಟಾಸ್ ಮೊರೆ ಹೋಗಲಾಯಿತು. ಈ ವೇಳೆ ಮಹಾಂತೇಶ ಗೆಲುವಿನ ನಗೆ ಬೀರಿದರು.

ತಿಪಟೂರು:
ತಿಪಟೂರು ತಾಲ್ಲೂಕಿನ ಕರಡಿ ಪಂಚಾಯಿತಿಯ ರಾಮೇನಹಳ್ಳಿ 2 ಕ್ಷೇತ್ರದ ಹಿಂದುಳಿದ ವರ್ಗ- ಬಿ ಅಭ್ಯರ್ಥಿ ಓಂಕಾರಮೂರ್ತಿ ಹಾಗೂ ಪಾಲಕ್ಷಯ್ಯ ನಡುವೆ ಡ್ರಾ ಅಗಿದ್ದು, ಇಬ್ಬರು 194 ಮತಗಳನ್ನು ತೆಗೆದುಕೊಂಡಿದ್ದರು. ನಂತರ ಲಾಟರಿ ಮೂಲಕ ಆಯ್ಕೆ ಮಾಡಿದಾಗ ಓಂಕಾರಮೂರ್ತಿ ಜಯಗಳಿಸಿದ್ದಾರೆ.

ಇದನ್ನೂ ಓದಿ:ಚಿತ್ರಾವಳಿ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶದ ರೋಚಕ ಕ್ಷಣಗಳು

ವಿಜಯಪುರ:
ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿ ಎರಡನೇ ವಾರ್ಡಿನ ಇಬ್ಬರು ಅಭ್ಯರ್ಥಿಗಳಿಗೆ 311 ಸಮನಾದ ಮತಗಳು ಬಂದ ಕಾರಣ ಟಾಸ್ ಮಾಡಿ ಫಲಿತಾಂಶ ಪ್ರಕಟಿಸಲಾಯಿತು. ಟಾಸ್ ಗೆದ್ದ ಶ್ರೀಶೈಲ ಹಿಪ್ಪರಗಿ ಆಯ್ಕೆಯಾದರು. ಸಮಮತ ಪಡೆದು, ಟಾಸ್ ನಲ್ಲಿ ಸೋತ ಅಭ್ಯರ್ಥಿ ರಾವುತಪ್ಪ ಆಲೂರಗೆ ಸೋಲಾಯಿತು.

ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆಡ ಗ್ರಾಮಪಂಚಾಯಿತಿಯ 241 ಮತಗಟ್ಟೆಯಲ್ಲಿ ಅಂಜು ಎಂ. ಮತ್ತು ಬಿ.ಎ.ಕ್ಷಿತಿಜಾ ತಲಾ 375 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದಾರೆ. ಅಂತಿಮವಾಗಿ ಲಾಟರಿ ಮೂಲಕ ಅಂಜು.ಎಂ. ಗೆಲುವು ದಾಖಲಿಸಿದ್ದಾರೆ.

ಶಿರಾ:

ಮಂಡ್ಯ:
ಬೂಕನಕೆರೆ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಲಾಟರಿ ಮೂಲಕ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.