ಗುರುವಾರ , ಮೇ 13, 2021
22 °C

ಮಧ್ಯರಾತ್ರಿ ಬಂದು, ಎದ್ದು ಹೋಗಿದ್ದು ಗ್ರಾಮ ವಾಸ್ತವ್ಯವೇ: ಬೊಮ್ಮಾಯಿ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

basavaraj bommai

ಹುಬ್ಬಳ್ಳಿ: ಇಲಾಖೆಯ ಆಡಳಿತವನ್ನು ಜನರ ಮನೆ ಬಾಗಿಲಿಗೆ ತಂದಿರುವ ಕಂದಾಯ ಸಚಿವ ಅಶೋಕ ಮಾಡುತ್ತಿರುವ ಕೆಲಸವೇ ನಿಜವಾದ ಗ್ರಾಮ ವಾಸ್ತವ್ಯ. ಹಿಂದೆ ಕೆಲ ಜನಪ್ರತಿನಿಧಿಗಳು ಮಧ್ಯರಾತ್ರಿ ಬಂದು ಬೆಳಿಗ್ಗೆ ಎದ್ದು ಹೋಗಿದ್ದು ಗ್ರಾಮ ವಾಸ್ತವ್ಯವೇ? ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಹುಬ್ಬಳ್ಳಿ ತಾಲ್ಲೂಕಿನ ‌ಛಬ್ಬಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ವಾಸ್ತವ್ಯ ‌ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೊದಲೆಲ್ಲ ತಮಗೆ ಬರಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಜನ ಸರ್ಕಾರಿ ‌ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಈಗ ಆಡಳಿತವೇ ಜನರ ಮನೆ ಬಾಗಿಲಿಗೆ ಬಂದಿದೆ. ಇದಕ್ಕೆ ಅಶೋಕ ಅವರ ಗ್ರಾಮ ವಾಸ್ತವ್ಯದ ಯೋಜನೆ ಕಾರಣ ಎಂದರು.

ಓದಿ: 

ಬಡವರಿಗೆ ಸರ್ಕಾರದ ಯೋಜನೆ ತಲುಪಬೇಕಿದ್ದರೆ ಬುದ್ದಿವಂತಿಕೆ‌ ಬೇಕಾಗಿಲ್ಲ, ಹೃದಯವಂತಿಕೆ ಬೇಕು. ಅಂತಹ ಹೃದಯವಂತಿಕೆ ಕೆಲಸವನ್ನು ಅಶೋಕ ‌ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ಬೊಮ್ಮಾಯಿ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು