ಬೆಂಗಳೂರು: ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡುತ್ತೇವೆ’ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಕಳಚಿದ ವಿಚಾರವಾಗಿ ಬಿಜೆಪಿ ನಾಯಕರು ಪ್ರತಿಕ್ರಿಯಿಸಿರುವುದಕ್ಕೆ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

‘ಸಿದ್ದರಾಮಯ್ಯ ಅವರ ಪಂಚೆ ಆಕಸ್ಮಿಕವಾಗಿ ಕಳಚಿ ಬೀಳುವುದು ಸಹಜ. ಆದರೆ, ಬಿಜೆಪಿ ನಾಯಕರು ತಮ್ಮ ಪ್ಯಾಂಟನ್ನು ತಾವೇ ಕಳಚುವುದು ಅಸಹ್ಯ. ಕಳಚಿದ ನಂತರ ವಿಡಿಯೊ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ. ಮುಂದೆ ನಮ್ಮ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ಕಳಚಲಾಗದ 'ಪ್ಯಾಂಟ್ ಭಾಗ್ಯ' ನೀಡುತ್ತೇವೆ ಚಿಂತಿಸಬೇಡಿ’ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿಯಾಗಿದೆ. ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ. ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.