ಬೆಂಗಳೂರು: ‘ಲಸಿಕೆ ನೀಡುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಲ್ಲ. ಕೇಂದ್ರ ಸರ್ಕಾರ ಇದರ ಜವಾಬ್ದಾರಿ ಹೊರಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ದೇಶದಲ್ಲಿ 18 ವರ್ಷ ದಾಟಿದವರಿಗೂ ಉಚಿತ ಲಸಿಕೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಇದು ಕಾಂಗ್ರೆಸ್ ಹೋರಾಟದ ಫಲ. ನಾವು ನಮ್ಮ ಅಭಿಯಾನ ಆರಂಭಿಸಿ, ರಾಜ್ಯಪಾಲರನ್ನು ಭೇಟಿಯಾಗಿ, ಅವರ ಮೂಲಕ ರಾಷ್ಟ್ರಪತಿಗೆ ಪತ್ರ ರವಾನಿಸಲಾಗಿತ್ತು. ಜಿಲ್ಲಾ ಮಟ್ಟದಿಂದಲೂ ಒತ್ತಾಯ ಮಾಡಿದ್ದೆವು’ ಎಂದರು.

ಇದನ್ನೂ ಓದಿ... ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನ

‘ಎಲ್ಲಕ್ಕಿಂತ ಮುಖ್ಯವಾಗಿ ಸುಪ್ರೀಂ ಕೋರ್ಟ್ ಕೊಟ್ಟ ಸೂಚನೆ. ಪ್ರಜಾಪ್ರಭುತ್ವ ಉಳಿಸಿ, ಆಡಳಿತ ವ್ಯವಸ್ಥೆ ಉಳಿಸಲು, ಜನರ ನೋವು ಅಳಿಸಿ, ಅವರ ಜೀವ ರಕ್ಷಿಸಲು ಸುಪ್ರೀಂಕೋರ್ಟ್ ತೆಗೆದುಕೊಂಡ ನಿರ್ಣಯ ಮಹತ್ವದ್ದಾಗಿದೆ' ಎಂದರು.

‘ಆಮ್ಲಜನಕ ಹಂಚಿಕೆಯಿಂದ ಲಸಿಕೆ ಹಾಕುವವರೆಗೂ ಕೋವಿಡ್ ಪರಿಸ್ಥಿತಿ ನಿರ್ವಹಣೆಯ ಪ್ರತಿಯೊಂದು ವಿಷಯದಲ್ಲೂ ನ್ಯಾಯಾಲಯಗಳೇ ಸರ್ಕಾರಕ್ಕೆ ಆದೇಶ, ಸೂಚನೆ ಕೊಡಬೇಕಾಗಿ ಬಂದದ್ದು ಆಡಳಿತ ವೈಫಲ್ಯಕ್ಕೆ ಬಹುದೊಡ್ಡ ಸಾಕ್ಷಿ’ ಎಂದು ಛೇಡಿಸಿದರು.

ಸಂಘಟಿತ ಹೋರಾಟದಿಂದ ಗೆಲುವು: 'ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಾಯಕನ್ನು ಬೆಳೆಸಲು ಕೇವಲ ವ್ಯಕ್ತಿಯಿಂದ ಸಾಧ್ಯವಿಲ್ಲ. ಅದಕ್ಕೆ ಪಕ್ಷ ಹಾಗೂ ಸಂಘಟನೆ ಮುಖ್ಯ. ಪಕ್ಷದ ನಾಯಕರು, ಕಾರ್ಯಕರ್ತರ ಸಂಘಟಿತ ಹೋರಾಟದಿಂದ ಉಪಚುನಾವಣೆಯಲ್ಲಿ ಜಯ ಸಿಕ್ಕಿದೆ' ಎಂದು ಶಿವಕುಮಾರ್ ಹೇಳಿದರು.

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ಆಯ್ಕೆಯಾದ ಬಸವನಗೌಡ ತುರುವಿಹಾಳ್ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ‘ನಾನು ಪ್ರತಿಜ್ಞೆ ತೆಗೆದುಕೊಳ್ಳುವ ದಿನ ರಾಹುಲ್ ಗಾಂಧಿ ಅವರು ಕರೆಮಾಡಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದರು. ಆಗ ನಾನು ಅವರಿಗೆ ಒಂದು ಮಾತು ಹೇಳಿದ್ದೆ. ಜತೆಗೂಡುವುದು ಆರಂಭ. ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು’ ಎಂದರು.

‘ಮಸ್ಕಿಯಲ್ಲಿ ಗೆಲುವು ಸಾಧಿಸಲು ಪ್ರಮುಖ ಕಾರಣ ಅಭ್ಯರ್ಥಿ ಬಗ್ಗೆ ಇಡೀ ಜಿಲ್ಲೆಯ ನಾಯಕರಲ್ಲಿ ಒಕ್ಕೊರಲಿನ ಅಭಿಪ್ರಾಯ ಬಂದಿದ್ದು. ನಂತರ ಎಲ್ಲರೂ ಒಟ್ಟಾಗಿ ಸೇರಿ, ಕೆಲಸ ಮಾಡಿದ್ದರಿಂದ ಜಯ ಸಾಧ್ಯವಾಯಿತು. ಈ ಗೆಲುವಿಗೆ ಡಿ.ಕೆ. ಶಿವಕುಮಾರ್ ಆಗಲಿ, ಕಾರ್ಯಾಧ್ಯಕ್ಷರಾಗಲಿ ಕಾರಣ ಅಲ್ಲ. ನೀವು ಮತದಾರರ ಸ್ವಾಭಿಮಾನ ಉಳಿಸಿಕೊಂಡಿದ್ದು ಮುಖ್ಯ’ ಎಂದು ತುರುವಿಹಾಳ್ ಅವರನ್ನು ಹೊಗಳಿದರು.

ಇದನ್ನೂ ಓದಿ... ಮೋದಿಗೆ ಹೆಡ್ಲೈನ್ ಬಗ್ಗೆಯೇ ಆಸಕ್ತಿ ಡೆಡ್ಲೈನ್ ಬಗ್ಗೆ ಅಲ್ಲ: ಕಾಂಗ್ರೆಸ್ ಗೇಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.