ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಮ್ಮಾಯಿ ಅವರೇ, ಸಿಎಂ ನಿವಾಸ ಬಿಜೆಪಿಯ ಪಿತ್ರಾಜಿತ ಆಸ್ತಿಯೇ: ಕಾಂಗ್ರೆಸ್ ಪ್ರಶ್ನೆ

Last Updated 16 ಏಪ್ರಿಲ್ 2022, 8:32 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣ ಕಾಂಗ್ರೆಸ್‌– ಬಿಜೆಪಿ ಮಧ್ಯೆ ರಾಜಕೀಯದ ಕೆಸರೆರಚಾಟಕ್ಕೆ ಕಾರಣವಾಗಿದೆ.

ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ತಮ್ಮ ಸಚಿವ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು. ‌

ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಸವರಾಜ ಬೊಮ್ಮಾಯಿ ಅವರೇ, ‘ಭ್ರಷ್ಟ, ದೇಶದ್ರೋಹಿ, ಕೊಲೆಗಡುಕ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸದೆ ಮದುವೆ ಗಂಡಿನ ರೀತಿ ಮೆರವಣಿಗೆ ಮಾಡಲು, ನಿಮ್ಮ ನಿವಾಸದೆದುರು 'ಭ್ರಷ್ಟರ ಜಾತ್ರೆ' ಮಾಡಲು ಅವಕಾಶ ಕೊಟ್ಟಿದ್ದಿರಲ್ಲ ನಾಚಿಕೆ ಎನಿಸುವುದಿಲ್ಲವೇ?, ಸರ್ಕಾರದ ಸಿಎಂ ನಿವಾಸ ಪ್ರಜಾಪ್ರಭುತ್ವ ವ್ಯವಸ್ಥೆಯ ಬಾಗವೇ ಅಥವಾ ಬಿಜೆಪಿಗರ ಪಿತ್ರಾಜಿತ ಆಸ್ತಿಯೇ’ ಎಂದು ಪ್ರಶ್ನಿಸಿದೆ.

‘ನಿನ್ನೆ ನಮ್ಮ ನಾಯಕರಿಗೆ ಸಿಎಂ ನಿವಾಸದ ಎದುರು ಪ್ರತಿಭಟಿಸಲು ಅವಕಾಶ ನೀಡದೆ ಬಂಧಿಸಲಾಗಿತ್ತು. ಆದರೆ, ಸಿಎಂ ನಿವಾಸದೆದುರು ಪ್ರತಿಭಟಿಸಿದ ಈಶ್ವರಪ್ಪನವರ ಬೆಂಬಲಿಗರನ್ನ ಬಂಧಿಸಿಲ್ಲವೇಕೆ? ಕಾನೂನು, ನಿಯಮ ಪಕ್ಷದ ಆಧಾರದ ಮೇಲೆ ಹಾಗೂ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆಯೇ? ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಎಂ ಬೊಮ್ಮಾಯಿ ಅವರು ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

‘ಬೊಮ್ಮಾಯಿ ಅವರೇ, ಇದ್ಯಾವ ಡಬಲ್ ಸ್ಟ್ಯಾಂಡರ್ಡ್ ನಿಮ್ಮದು? ಮೊನ್ನೆ ಸಿಎಂ ನಿವಾಸದ ಎದುರಿನ ನಮ್ಮ ಪ್ರತಿಭಟನೆಯನ್ನು ಅರ್ಧ ದಾರಿಗೆ ತಡೆದು, ನಮ್ಮ ನಾಯಕರನ್ನು ಬಂಧಿಸಲಾಗಿತ್ತು. ಆದರೆ, ನಿನ್ನೆ ನಿಮ್ಮ ನಿವಾಸದೆದುರು ಭ್ರಷ್ಟ ಈಶ್ವರಪ್ಪರನ್ನ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಪೊಲೀಸರಿಲ್ಲ, ತಡೆಯೂ ಇಲ್ಲ, ಬಂಧನವೂ ಇಲ್ಲ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT