ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆಗಳ ನೇಮಕ: 1.22 ಲಕ್ಷ ಅರ್ಜಿ ತಿರಸ್ಕೃತ

ಶುಲ್ಕ ಪಾವತಿಸದಿರುವುದು ಕಾರಣ
Last Updated 30 ಜುಲೈ 2022, 23:48 IST
ಅಕ್ಷರ ಗಾತ್ರ

ಬೆಂಗಳೂರು: ಶುಲ್ಕ ಪಾವತಿಸದ ಕಾರಣಕ್ಕಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಸಲ್ಲಿಕೆಯಾದ 1.22 ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ.

360 ಖಾಲಿ ಹುದ್ದೆಗಳ ನೇಮಕಾತಿಗೆ 4.12 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 1,22,857 ಅರ್ಜಿಗಳು ತಿರಸ್ಕೃತವಾಗಿವೆ. ತಿರಸ್ಕೃತರಲ್ಲಿ ಶೇ 99 ಅಭ್ಯರ್ಥಿಗಳು ಅರ್ಜಿ ಜತೆಗೆ ನಿಗದಿಪಡಿಸಿದ್ದ ಕನಿಷ್ಠ ಶುಲ್ಕ ಪಾವತಿ ಸಿಲ್ಲ.ಪ್ರತಿ ಅರ್ಜಿಗೆ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ₹ 500, ಪರಿಶಿಷ್ಟ ಸಮುದಾಯ ಅಭ್ಯರ್ಥಿಗಳಿಗೆ ₹ 250 ಶುಲ್ಕ ನಿಗದಿ ಮಾಡಲಾಗಿತ್ತು. ಜಾತಿ ಪ್ರಮಾಣಪತ್ರ, ಹೈದರಾಬಾದ್- ಕರ್ನಾಟಕ ಪ್ರಮಾಣ ಪತ್ರ ಸಲ್ಲಿಸದಿರುವ ಕಾರಣಕ್ಕೆ ಕೆಲವು ಅರ್ಜಿಗಳು ತಿರಸ್ಕೃತವಾಗಿವೆ. ಪಟ್ಟಿ ಯನ್ನು ನೇಮಕಾತಿ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಕೆಪಿಟಿಸಿಎಲ್‌ ನೀಡಿದ್ದು, ಆ.7ರಂದು ರಾಜ್ಯದ45 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ಕೆಪಿಟಿಸಿಎಲ್‌ ಜೆಇ ಮತ್ತು ಎಇ ಹುದ್ದೆಗಳ ಆಯ್ಕೆಗಾಗಿ ಇದೇ ತಿಂಗಳು 23, 24ರಂದು ನಡೆದಿದ್ದ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯಲ್ಲೂ 30,933 ಅರ್ಜಿಗಳು ತಿರಸ್ಕೃತಗೊಂಡಿದ್ದವು.

ಪರೀಕ್ಷೆಗೆ ಹಾಜರಾಗಲು ಅರ್ಹರಿ ರುವ 2.90 ಲಕ್ಷ ಅಭ್ಯರ್ಥಿಗಳ ಹಾಲ್‌ ಟಿಕೆಟ್‌ ಅನ್ನು ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಹಾಲ್‌ ಟಿಕೆಟ್‌ ಡೌನ್‌ ಲೋಡ್‌ ಮಾಡಿಕೊಳ್ಳಲು ಅರ್ಜಿ ಸಂಖ್ಯೆಯ ಜತೆಗೆ ಅರ್ಜಿಯಲ್ಲಿ ನಮೂದಿಸಿದ ಜನ್ಮ ದಿನಾಂಕವನ್ನು ನಮೂದಿಸಲು
ಸೂಚಿಸಿಲಾಗಿದೆ.

‘ನಿಗದಿತ ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಕ್ರಮ ಬದ್ಧವಾಗಿ ಅಪ್‌ಲೋಡ್‌ ಮಾಡಿ ದ್ದೇನೆ. ಹಾಲ್‌ಟಿಕೆಟ್‌ ಪಡೆಯಲು ಸಾಧ್ಯ ವಾಗಿಲ್ಲ. ಜುಲೈ 29ರಂದು ಕೆಇಎ ವೆಬ್‌ಸೈಟ್‌ನಲ್ಲಿ ಹಾಕಿರುವ ತಿರಸ್ಕೃತರ ಪಟ್ಟಿಯಲ್ಲಿ ಹೆಸರಿದೆ. ಕಾರಣ ತಿಳಿದಿಲ್ಲ. ಸೋಮವಾರ ಕೆಪಿಟಿಸಿಎಲ್‌ ಸಂಪರ್ಕಿಸುವೆ’ ಎನ್ನುತ್ತಾರೆ ಅಭ್ಯರ್ಥಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT