ಶನಿವಾರ, ಡಿಸೆಂಬರ್ 5, 2020
25 °C

ಕೆಎಸ್‌‌‌‌ಆರ್‌‌‌ಟಿಸಿ: ಸೇವಾಸಿಂಧು ಮೂಲಕ ಬಸ್‍ಪಾಸ್ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌‌‌‌ಆರ್‌‌‌ಟಿಸಿ) 2020-21ನೇ ಸಾಲಿನ ವಿದ್ಯಾರ್ಥಿಗಳಿಗೆ 'ಸೇವಾ ಸಿಂಧು' ಪೋರ್ಟಲ್‍ನಿಂದ ಆನ್‍ಲೈನ್ ಮೂಲಕ ಬಸ್‍ಪಾಸ್ ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಿದೆ.

ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಸಲ್ಲಿಸುವ ಅರ್ಜಿಗೆ ಶಾಲಾ-ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿಕೊಂಡು, ಈ ಹಿಂದಿನಂತೆಯೇ ಬಸ್ ನಿಲ್ದಾಣದ ಪಾಸ್ ಕೌಂಟರ್ ನಲ್ಲಿ ಹಣ ಪಾವತಿಸಿ, ಪಾಸ್ ಪಡೆಯಬಹುದು.ಅಥವಾ ತಾವು ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಗಳಲ್ಲೇ ಶುಲ್ಕ ಪಾವತಿಸಿ, ಶಾಲಾ-ಕಾಲೇಜುಗಳ ಮುಖಾಂತರ ಬಸ್‍ಪಾಸ್ ಪಡೆದುಕೊಳ್ಳಬಹುದು. ಸೇವಾಸಿಂಧು ಮೂಲಕ ಆನ್‍ಲೈನ್ ಶುಲ್ಕ ಪಾವತಿ ವ್ಯವಸ್ಥೆ ಶೀಘ್ರವೇ ಜಾರಿಯಾಗಲಿದೆ. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಮ್ಯಾನ್ಯುಯಲ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ಉಚಿತವಾಗಿದ್ದು, ಸಂಸ್ಕರಣಾ ಶುಲ್ಕ ಮತ್ತು ಅಪಘಾತ ಪರಿಹಾರ ನಿಧಿ ಶುಲ್ಕ ಮಾತ್ರ ಪಡೆಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಬಸ್‍ಪಾಸ್ ದರ ವಿವರ (ಶುಲ್ಕಸಹಿತ) 

ಪಾಸ್ ವಿಧ; ಸಾಮಾನ್ಯ;ಎಸ್‍ಸಿ,ಎಸ್‍ಟಿ 

ಪ್ರಾಥಮಿಕ ಶಾಲೆ;150;150

ಪ್ರೌಢಶಾಲೆ ಬಾಲಕರು;750;150

ಪ್ರೌಢಶಾಲೆ ಬಾಲಕಿಯರು;550;150

ಪಿಯುಸಿ, ಪದವಿ, ಡಿಪ್ಲೊಮ;1,050;150

ಐಟಿಐ;1,310;160

ವೃತ್ತಿಪರ ಕೋರ್ಸ್‍ಗಳು;1,550;150

ಸಂಜೆ ಕಾಲೇಜು, ಪಿಎಚ್.ಡಿ;1,350;150

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು