ಕೆಪಿಸಿಸಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಬೇನಾಮಿ ಅಧ್ಯಕ್ಷೆ: ಬಿಜೆಪಿ ವಾಗ್ದಾಳಿ

ಬೆಂಗಳೂರು: ‘ಕೆಪಿಸಿಸಿಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷರಾಗಿದ್ದರೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೇನಾಮಿ ಅಧ್ಯಕ್ಷೆ. ಇಬ್ಬರೂ ಅಕ್ರಮಗಳ ಸರದಾರರು’ ಎಂದು ಬಿಜೆಪಿ ರಾಜ್ಯ ಘಟಕ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದೆ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ ಕುರಿತು ಬಿಜೆಪಿ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಶನಿವಾರ ಸರಣಿ ಟ್ವೀಟ್ ಮಾಡಿದ್ದು, ‘ಬೇನಾಮಿ ಅಧ್ಯಕ್ಷೆ ಬೇನಾಮಿ ಕಾಮಗಾರಿ ನಡೆಸುವುದರಲ್ಲೂ ಎತ್ತಿದ ಕೈ. ಕಾರ್ಯಾದೇಶ ಇಲ್ಲದ ಕಾಮಗಾರಿಗಳಿಗೆ ಕೋಟಿ ಕೋಟಿ ಸುರಿಯುವ ಧೈರ್ಯವನ್ನು ಒಬ್ಬ ಸಣ್ಣ ಗುತ್ತಿಗೆದಾರ ಮಾಡಲಾರ. ಇದರ ಹಿಂದೆ ಬೇನಾಮಿ ಅಧ್ಯಕ್ಷೆಯ ಕೈವಾಡವಿದೆ’ ಎಂದು ಆರೋಪಿಸಿದೆ.
ವಿಜಯನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಆಸ್ತಿ ಹೆಚ್ಚಳದ ಹಿಂದಿರುವ ವ್ಯಕ್ತಿ ಹಾಗೂ ಶಕ್ತಿ ಯಾರು? ಇವರ ಅಕ್ರಮದ ಆಚಾರ– ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಇದು ಸಕಾಲ. ಸಕ್ರಮ ಮಾರ್ಗದಲ್ಲಿ ಇಷ್ಟೊಂದು ಸಂಪತ್ತು ಗಳಿಸಲು ಸಾಧ್ಯವೆ ಎಂದು ಪ್ರಶ್ನಿಸಿದೆ.
ಕೆಪಿಸಿಸಿಯ #ಬೇನಾಮಿಅಧ್ಯಕ್ಷೆ ಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಸಚಿವನಾಗಿದ್ದ ಅವಧಿಯಲ್ಲಿ #ಭ್ರಷ್ಟಾಧ್ಯಕ್ಷ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ?
ಬೆಳಗಾವಿಯ "ಲಕ್ಷ್ಮಿ"ಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದರ ಹಿಂದೆ ಭ್ರಷ್ಟಾಧ್ಯಕ್ಷನ ಕೈವಾಡ ಇಲ್ಲವೇ?
— BJP Karnataka (@BJP4Karnataka) April 16, 2022
‘ವೋಟು, ನೋಟಿಗಾಗಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹೊರಟ ಬೇನಾಮಿ ಅಧ್ಯಕ್ಷೆ ಈಗ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅಕ್ರಮವನ್ನೇ ರಾಜಕಾರಣ ಮಾಡಿಕೊಂಡಿರುವ ಕೆಪಿಸಿಸಿಯ ಸೂಪರ್ ಅಧ್ಯಕ್ಷರೇ ನಿಮ್ಮ ಅಕ್ರಮ ಆಸ್ತಿಯ ಲೆಕ್ಕ ಕೊಡುತ್ತೀರಾ? ಬೆಳಗಾವಿಯ ‘ಲಕ್ಷ್ಮಿ’ಗೆ ಮಂಗಳೂರು, ಉತ್ತರಕನ್ನಡ ಮತ್ತಿತರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳಿಂದ ನೂರಾರು ಕೋಟಿ ರೂಪಾಯಿ ಸಾಲ ಕೊಡಿಸಿರುವುದರ ಹಿಂದೆ ಕೆಪಿಸಿಸಿಯ ಭ್ರಷ್ಟ ಅಧ್ಯಕ್ಷರ ಕೈವಾಡವಿಲ್ಲವೆ’ ಎಂದು ಬಿಜೆಪಿ ಕೇಳಿದೆ.
ಓಟು, ನೋಟಿಗಾಗಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹೊರಟ #ಬೇನಾಮಿಅಧ್ಯಕ್ಷೆ ಇಂದು ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ.
ಅಕ್ರಮವನ್ನೇ ರಾಜಕಾರಣ ಎಂದುಕೊಂಡಿರುವ ಕೆಪಿಸಿಸಿಯ ಸೂಪರ್ ಅಧ್ಯಕ್ಷರೇ, ನಿಮ್ಮ ಅಕ್ರಮ ಆಸ್ತಿ ಲೆಕ್ಕ ಕೊಡುವಿರಾ?
— BJP Karnataka (@BJP4Karnataka) April 16, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.