ಮದ್ದೂರು : ನನಗೆ ವಯಸ್ಸಾಗಿದೆ ಆದ ಕಾರಣ ರಾಜಕಾರಣವನ್ನು ಬಿಟ್ಟಿದ್ದೇನೆ ಹಾಗೂ ರಾಜಕಾರಣದಿಂದ ದೂರವಿದ್ದು, ಬಹಳ ವರ್ಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ರವರು ತಿಳಿಸಿದರು.

ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಉಗ್ರನರಸಿಂಹಸ್ವಾಮಿ ದೇವಸ್ಥಾನ ಹಾಗೂ ತಾಲ್ಲೂಕಿನ ಶ್ರೀ ವೈಧ್ಯನಾಥೇಶ್ವರ ದೇವಸ್ಥಾನಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದ 89 ವರ್ಷ ವಯಸ್ಸಿನ ಎಸ್‌ಎಂ ಕೃಣ್ಣ,ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಾರು 55 ವರ್ಷಗಳ ಕಾಲ ರಾಜಕಾರದಲ್ಲಿದ್ದೆ, ಇನ್ನೆಷ್ಟು ವರ್ಷ ಇರಲು ಸಾಧ್ಯ ಎಂದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ ಸದಸ್ಯರಾಗಿದ್ದರು, ಈಗ ಮುಖ್ಯಮಂತ್ರಿಗಳಾಗಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಅವರ ತಂದೆ ಹಾಗೂ ನಾನು ಒಳ್ಳೆಯ ಸ್ನೇಹಿತರಾಗಿದ್ದೆವು ಎಂದು ತಿಳಿಸಿದರು.

ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪುನಃ ಪ್ರಾರಂಭಿಸಬೇಕು ಈ ಬಗ್ಗೆ ಸರ್ಕಾರವು ರೈತ ನಾಯಕರು ಹಾಗೂ ಜಿಲ್ಲೆಯ ಮುಖಂಡರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಇದೇ ವೆಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಪ್ರತಿಕ್ರಿಯಿಸಿದರು.

ಈ ವೇಳೆ ಮದ್ದೂರು ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಬಿಜೆಪಿ ಮದ್ದೂರು ತಾಲ್ಲೂಕು ಘಟಕದ ಅಧ್ಯಕ್ಷ ಪಣ್ಣೇದೊಡ್ಡಿ ರಘು, ಮುಖಂಡರಾದ ಗುರುಚರಣ್, ಕೆ.ಆರ್ ಮಹೇಶ್, ಮನ್ ಮುಲ್ ನಿರ್ದೇಶಕ ಸ್ವಾಮಿ, ಮರೀ ಹೆಗಡೆ, ಮನು, ಕಾಡಾ ಅದ್ಯಕ್ಷ ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.

ಮದ್ದೂರು ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಉಗ್ರನರಸಿಂಹಸ್ವಾಮಿ ದೇವಸ್ಥಾನ ಹಾಗೂ ತಾಲ್ಲೂಕಿನ ಶ್ರೀ ವೈಧ್ಯನಾಥೇಶ್ವರ ದೇವಸ್ಥಾನಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಬೇಟಿ ನೀಡಿ ದೇವರ ದರ್ಶನ ಪಡೆದರು, ಈ ವೇಳೆ ಮದ್ದೂರು ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಬಿಜೆಪಿ ಮದ್ದೂರು ತಾಲ್ಲೂಕು ಘಟಕದ ಅಧ್ಯಕ್ಷ ಪಣ್ಣೇದೊಡ್ಡಿ ರಘು, ಮುಖಂಡರಾದ ಗುರುಚರಣ್, ಕೆ.ಆರ್ ಮಹೇಶ್, ಮನ್ ಮುಲ್ ನಿರ್ದೇಶಕ ಸ್ವಾಮಿ, ಮರೀ ಹೆಗಡೆ, ಮನು, ಕಾಡಾ ಅದ್ಯಕ್ಷ ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.