ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ, ಸಚಿವರ ವೇತನ, ಭತ್ಯೆಗಳನ್ನು ಹೆಚ್ಚಿಸುವ ಮಸೂದೆಗೆ ಅಂಗೀಕಾರ

Last Updated 22 ಫೆಬ್ರುವರಿ 2022, 8:43 IST
ಅಕ್ಷರ ಗಾತ್ರ

ಬೆಂಗಳೂರು: ಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ, ಭತ್ಯೆಗಳನ್ನು ಹೆಚ್ಚಿಸುವ ಮಸೂದೆಗೆ ವಿಧಾನಸಭೆಮಂಗಳವಾರ ಅಂಗೀಕಾರ ನೀಡಿತು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಸಂಬಂಧ ಎರಡು ಮಸೂದೆಗಳನ್ನು ಕಾಂಗ್ರೆಸ್ ನಾಯಕರಧರಣಿ ಮತ್ತು ಗದ್ದಲದ ಮಧ್ಯೆಯೇ ಮಂಡಿಸಿದರು.

ಮುಖ್ಯಮಂತ್ರಿ ಯವರ ಸಂಬಳ ₹ 50 ಸಾವಿರ ದಿಂದ ₹ 75 ಸಾವಿರಕ್ಕೂ, ಸಚಿವರ ವೇತನ ₹ 40 ಸಾವಿರದಿಂದ ₹ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪ್ರತಿ ವರ್ಷ ನೀಡುವ ಆತಿಥ್ಯ ಭತ್ಯೆ₹ 3 ಲಕ್ಷದಿಂದ ₹ 4.50 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಮನೆ ಬಾಡಿಗೆಯನ್ನು ₹ 90 ಸಾವಿರದಿಂದ ₹ 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ತೋಟಗಳ ನಿರ್ವಹಣೆ ಮತ್ತು ವಿನ್ಯಾಸಕ್ಕೆ ₹ 20ಸಾವಿರದಿಂದ ₹ 30 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪೆಟ್ರೋಲ್ ಭತ್ಯೆ ತಿಂಗಳಿಗೆ 1 ಸಾವಿರ ಲೀಟರ್‌ ಬದಲು 2 ಸಾವಿರ ಲೀಟರ್‌ಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT