ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರೋರಾತ್ರಿ ಮೊಬೈಲ್ ಬದಲಾಯಿಸಿದ ರಾಗಿಣಿ

ಮುಂಜಾನೆಯೇ ನಟಿ ಮನೆಯ ಬಾಗಿಲು ಬಡಿದ ಸಿಸಿಬಿ ದಂಡು l ಇನ್ನೋವಾ ಕಾರು ಹತ್ತಿ ಕಚೇರಿಗೆ ಬಂದ ನಟಿ
Last Updated 5 ಸೆಪ್ಟೆಂಬರ್ 2020, 5:51 IST
ಅಕ್ಷರ ಗಾತ್ರ

ಬೆಂಗಳೂರು: ಕೆಲ ನಟ–ನಟಿಯರು, ಉದ್ಯಮಿಗಳು,‌ ಗಣ್ಯ ವ್ಯಕ್ತಿಗಳು ಹಾಗೂ ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ ಎನ್ನಲಾದ ಅಂತರರಾಷ್ಟ್ರೀಯ ಡ್ರಗ್ ಜಾಲವನ್ನು ಬುಡ ಸಮೇತ ಕಿತ್ತು ಹಾಕಲು ಮುಂದಾಗಿರುವ ಸಿಸಿಬಿ, ಜಾಲದಲ್ಲಿರುವ ಪೆಡ್ಲರ್‌ಗಳು ಹಾಗೂ ಗ್ರಾಹಕರನ್ನು ಪತ್ತೆ ಮಾಡಿ ಬಂಧಿಸುತ್ತಿದ್ದಾರೆ. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಾರಿಗೆ ಇಲಾಖೆಯ ನೌಕರನಾದ ರವಿಶಂಕರ್‌ನನ್ನು ಬಂಧಿಸಿದ್ದ ಪೊಲೀಸರು, ಆತನ ಜೊತೆ ಒಡನಾಟವಿಟ್ಟುಕೊಂಡಿದ್ದ ನಟಿ ರಾಗಿಣಿ ಅವರಿಗೆ ನೋಟಿಸ್ ನೀಡಿದ್ದರು. ಬಂಧನದ ಭೀತಿಯಲ್ಲಿ ರಾಗಿಣಿ ವಿಚಾರಣೆಗೆ ಬಂದಿರಲಿಲ್ಲ. ಸ್ನೇಹಿತ ಬಂಧನವಾದ ಸುದ್ದಿ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ದತ್ತಾಂಶವನ್ನು ಅಳಿಸಿ ಮೊಬೈಲ್‌ ಬದಲಾಯಿಸಿದ್ದ ಅವರು ಹೊಸ ಮೊಬೈಲ್ ಖರೀದಿಸಿದ್ದರು.

ಶುಕ್ರವಾರ ನಸುಕಿನಲ್ಲಿ ಸಿಸಿಬಿ ಪೊಲೀಸರ ವಿಶೇಷ ತಂಡಗಳು, ರಾಗಿಣಿ ಅವರ ಫ್ಲ್ಯಾಟ್‌ ಎದುರು ಹಾಜರಿದ್ದವು. ಇನ್‌ಸ್ಪೆಕ್ಟರ್ ಅಂಜುಮಾಲಾ ಅವರು ಫ್ಲ್ಯಾಟ್‌ಗೆ ಹೋಗಿ ಬಾಗಿಲು ಬಡಿದರು. ನಿದ್ದೆಗಣ್ಣಿನಲ್ಲೇ ಬಾಗಿಲು ತೆರೆದಿದ್ದ ರಾಗಿಣಿ, ಪೊಲೀಸರನ್ನು ಕಂಡು ದಂಗಾದರು.

‘ನಾನೇ ಬೆಳಿಗ್ಗೆ 11ಕ್ಕೆ ಕಚೇರಿಗೆ ಬರಲು ಸಿದ್ಧವಾಗಿದೆ’ ಎಂದು ರಾಗಿಣಿ ಹೇಳಿದ್ದರು. ಶೋಧನಾ ವಾರಂಟ್ ತೋರಿಸಿದ್ದ ಇನ್‌ಸ್ಪೆಕ್ಟರ್, ವಿಶೇಷ ತಂಡದ ಜೊತೆಯಲ್ಲಿ ಫ್ಲ್ಯಾಟ್‌ ಪ್ರವೇಶಿಸಿ ಪ್ರತಿಯೊಂದು ಭಾಗದಲ್ಲೂ ತಪಾಸಣೆ ನಡೆಸಿದರು. ಹೂವಿನ ಕುಂಡ, ಕಪಾಟು, ಬಟ್ಟೆಗಳು ಸೇರಿದಂತೆ ಎಲ್ಲ ವಸ್ತುಗಳನ್ನು ಪರಿಶೀಲಿಸಿದರು. ರಾಗಿಣಿ ಪರ ವಕೀಲರು ಸಹ ಫ್ಲ್ಯಾಟ್‌ಗೆ ಬಂದು ವಾರಂಟ್ ನೋಡಿ ಸುಮ್ಮನಾದರು.

ಸ್ನೇಹಿತನ ಜೊತೆಗಿನ ಚಾಟಿಂಗ್‌ ಅಳಿಸಿದ್ದರು: ಬಂಧಿತ ಆರೋಪಿ ರವಿಶಂಕರ್ ನಿತ್ಯವೂ ರಾಗಿಣಿ ಜೊತೆಯಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದ. ಡ್ರಗ್ ಬಗ್ಗೆಯೂ ಚರ್ಚಿಸುತ್ತಿದ್ದ. ಆತನ ಮೊಬೈಲ್‌ನಲ್ಲಿದ್ದ ಸಂದೇಶಗಳ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು.

ರಾಗಿಣಿ ಮೊಬೈಲ್ ಜಪ್ತಿ ಮಾಡಿದ್ದ ಪೊಲೀಸರಿಗೆ ಅವರ ಬಳಿ ಇದ್ದುದು ಹೊಸ ಮೊಬೈಲ್ ಎಂಬುದು ಗೊತ್ತಾಯಿತು. ‘ಹಳೇ ಮೊಬೈಲ್‌ ಎಲ್ಲಿ; ಎಂದು ಇನ್‌ಸ್ಪೆಕ್ಟರ್ ಪ್ರಶ್ನಿಸಿದ್ದರು. ’ಮೊಬೈಲ್ ಹಳೆಯದ್ದಾಗಿತ್ತು. ಹೀಗಾಗಿ, ಬದಲಾಯಿಸಿದೆ’ ಎಂದು ರಾಗಿಣಿ ಉತ್ತರಿಸಿದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲಿ ಶೋಧ ನಡೆಸಿ ಹಲವು ಮಾಹಿತಿ ಕಲೆಹಾಕಿದ್ದ ಪೊಲೀಸರು, ರಾಗಿಣಿ ಅವರನ್ನು ತಮ್ಮದೇ ಇನ್ನೋವಾ ಕಾರಿನಲ್ಲಿ ಸಿಸಿಬಿಗೆ ಕರೆತಂದು ವಿಚಾರಣೆಗೆ ಒಳಪಡಿಸಿದರು. ಆರೋಪಿ ರವಿಶಂಕರ್ ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ರಾಗಿಣಿ ಅವರಿಂದ ಉತ್ತರ ಪಡೆದುಕೊಂಡು ಬಂಧಿಸಿದರು.

ಆಫ್ರಿಕಾ ಪ್ರಜೆ ಸೇರಿ ಹಲವರ ವಿಚಾರಣೆ:ಕೆಲ ಶ್ರೀಮಂತರು, ಗಣ್ಯ ವ್ಯಕ್ತಿಗಳು ಹಾಗೂ ಅವರ ಮಕ್ಕಳಿಗಾಗಿ ಪ್ರತ್ಯೇಕವಾಗಿ ಪಾರ್ಟಿಗಳನ್ನು ಆಯೋಜಿಸಿ ಡ್ರಗ್ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಲಾಗಿತ್ತು ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ. ಈ ಸಂಬಂಧ ಆಫ್ರಿಕಾ ಪ್ರಜೆ ಸೇರಿ ಹಲವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಡ್ರಗ್ ಸೇವಿಸುತ್ತಿದ್ದರಾ ನಟಿ?:ಬಂಧಿತ ಆರೋಪಿಗಳಾದ ರವಿಶಂಕರ್ ಹಾಗೂ ರಾಹುಲ್‌, ಪೆಡ್ಲರ್‌ಗಳಿಂದ ಡ್ರಗ್ ಖರೀದಿಸಿ ಪಾರ್ಟಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಪಾರ್ಟಿಗೆ ಬರುತ್ತಿದ್ದ ಸಿನಿ ತಾರೆಯರು ಗ್ರಾಹಕರಾಗಿ ಡ್ರಗ್ ಪಡೆಯುತ್ತಿದ್ದರು. ನಟಿ ರಾಗಿಣಿ ಸಹ ಗ್ರಾಹಕರಾಗಿ ಡ್ರಗ್ ಸೇವನೆ ಮಾಡುತ್ತಿದ್ದರಾ ಎಂಬ ಅನುಮಾನ ಪೊಲೀಸರಿಗೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ‘ರಾಗಿಣಿ ಮನೆಯಲ್ಲಿ ಮಹತ್ವದ ವಸ್ತುಗಳೇ ಸಿಕ್ಕಿವೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ನಿಖರ ಮಾಹಿತಿ ನೀಡಲಾಗುವುದು. ರಾಗಿಣಿ ಬಂಧನಕ್ಕೆ ಕಾರಣ ತಿಳಿಯಲಿದೆ’ ಎಂದರು.

ಡ್ರಗ್ ಮಾರಾಟ; ಮೂವರು ವಿದೇಶಿಗರ ಬಂಧನ:ಡ್ರಗ್ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರು ವಿದೇಶಿಗರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನೈಜೀರಿಯಾದ ಕಿಜ್ ಪ್ರಿನ್ಸ್ (23), ನೈಜ್‍ವೇ ಎಜಿಕಿ (39) ಮತ್ತು ಐವರಿ ಕೋಸ್ಟ್‌ನ ದೋಸ್ಸಾ ಕಲಿಫ್ (26) ಬಂಧಿತರು. ಅವರಿಂದ 13.746 ಗ್ರಾಂ ಕೊಕೇನ್, 2.850 ಗ್ರಾಂ ಎಂಡಿಎಂಎ ಡ್ರಗ್, 5 ಮೊಬೈಲ್ ಹಾಗೂ ₹ 2 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿಗಳು, ಅದರ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ವಾಸವಿದ್ದರು. ತಮ್ಮದೇ ದೇಶದ ಪೆಡ್ಲರ್‌ಗಳಿಂದ ಡ್ರಗ್ ಖರೀದಿಸಿ, ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಕೆಲ ವಿದ್ಯಾರ್ಥಿಗಳು ಇವರ ಗ್ರಾಹಕರಾಗಿದ್ದರು’‍ ಎಂದೂ ಹೇಳಿದರು.

ಆಫ್ರಿಕಾ ಪ್ರಜೆ ಸೇರಿ ಹಲವರ ವಿಚಾರಣೆ

ಕೆಲ ಶ್ರೀಮಂತರು, ಗಣ್ಯ ವ್ಯಕ್ತಿಗಳು ಹಾಗೂ ಅವರ ಮಕ್ಕಳಿಗಾಗಿ ಪ್ರತ್ಯೇಕವಾಗಿ ಪಾರ್ಟಿಗಳನ್ನು ಆಯೋಜಿಸಿ ಡ್ರಗ್ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಲಾಗಿತ್ತು ಎಂಬ ಸಂಗತಿ ತನಿಖೆಯಿಂದ ಹೊರಬಿದ್ದಿದೆ. ಈ ಸಂಬಂಧ ಆಫ್ರಿಕಾ ಪ್ರಜೆ ಸೇರಿ ಹಲವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

ಡ್ರಗ್ ಸೇವಿಸುತ್ತಿದ್ದರಾ ನಟಿ?

ಬಂಧಿತ ಆರೋಪಿಗಳಾದ ರವಿಶಂಕರ್ ಹಾಗೂ ರಾಹುಲ್‌, ಪೆಡ್ಲರ್‌ಗಳಿಂದ ಡ್ರಗ್ ಖರೀದಿಸಿ ಪಾರ್ಟಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಪಾರ್ಟಿಗೆ ಬರುತ್ತಿದ್ದ ಸಿನಿ ತಾರೆಯರು ಗ್ರಾಹಕರಾಗಿ ಡ್ರಗ್ ಪಡೆಯುತ್ತಿದ್ದರು. ನಟಿ ರಾಗಿಣಿ ಸಹ ಗ್ರಾಹಕರಾಗಿ ಡ್ರಗ್ ಸೇವನೆ ಮಾಡುತ್ತಿದ್ದರಾ ಎಂಬ ಅನುಮಾನ ಪೊಲೀಸರಿಗೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ‘ರಾಗಿಣಿ ಮನೆಯಲ್ಲಿ ಮಹತ್ವದ ವಸ್ತುಗಳೇ ಸಿಕ್ಕಿವೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ನಿಖರ ಮಾಹಿತಿ ನೀಡಲಾಗುವುದು. ರಾಗಿಣಿ ಬಂಧನಕ್ಕೆ ಕಾರಣ ತಿಳಿಯಲಿದೆ’ ಎಂದರು.

ಡ್ರಗ್ ಮಾರಾಟ; ಮೂವರು ವಿದೇಶಿಗರ ಬಂಧನ

ಡ್ರಗ್ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರು ವಿದೇಶಿಗರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನೈಜೀರಿಯಾದ ಕಿಜ್ ಪ್ರಿನ್ಸ್ (23), ನೈಜ್‍ವೇ ಎಜಿಕಿ (39) ಮತ್ತು ಐವರಿ ಕೋಸ್ಟ್‌ನ ದೋಸ್ಸಾ ಕಲಿಫ್ (26) ಬಂಧಿತರು. ಅವರಿಂದ 13.746 ಗ್ರಾಂ ಕೊಕೇನ್, 2.850 ಗ್ರಾಂ ಎಂಡಿಎಂಎ ಡ್ರಗ್, 5 ಮೊಬೈಲ್ ಹಾಗೂ ₹ 2 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಪ್ರವಾಸಿ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿಗಳು, ಅದರ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ವಾಸವಿದ್ದರು. ತಮ್ಮದೇ ದೇಶದ ಪೆಡ್ಲರ್‌ಗಳಿಂದ ಡ್ರಗ್ ಖರೀದಿಸಿ, ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಕೆಲ ವಿದ್ಯಾರ್ಥಿಗಳು ಇವರ ಗ್ರಾಹಕರಾಗಿದ್ದರು’‍ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT